ADVERTISEMENT

ರೈತ ಮಹಿಳೆಯರಿಂದ ಪ್ರತಿಭಟನೆ ನೇತೃತ್ವ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:47 IST
Last Updated 18 ಜನವರಿ 2017, 5:47 IST
ರೈತ ಮಹಿಳೆಯರಿಂದ ಪ್ರತಿಭಟನೆ ನೇತೃತ್ವ
ರೈತ ಮಹಿಳೆಯರಿಂದ ಪ್ರತಿಭಟನೆ ನೇತೃತ್ವ   

ಮಹಾಲಿಂಗಪುರ: ತೇರದಾಳ ಮತಕ್ಷೇತ್ರ ವ್ಯಾಪ್ತಿಯ ಅಡಿಯಲ್ಲಿ ಅಂದಾಜು 16 318 ಹೆಕ್ಟೇರ್ ಪ್ರದೇಶಕ್ಕೆ ಸಸಾಲಟ್ಟಿ ಏತ ನೀರಾವರಿ ಯೋಜನೆಯಿಂದ ನೀರಾವರಿ ಮಾಡುವ ಸಾಧ್ಯತೆ ಇದ್ದು ಇದಕ್ಕೆ 2.19 ಟಿಎಂಸಿ ನೀರನ್ನು ಕೃಷ್ಣಾ ನದಿಯಿಂದ ನೀರನ್ನೆತ್ತಿ ಕಾಲುವೆಗೆ ಹರಿಸಬೇಕಾಗಿದೆ, ಈ ಯೋಜನೆಗೆ ₹ 110 ಕೋಟಿ ವೆಚ್ಚದಲ್ಲಿ ಅನುಷ್ಠಾನಕ್ಕೆ ತರಬಹುದಾ ಗಿದ್ದು ಸರ್ಕಾರ ಈ ಭಾಗದ ಜನತೆಯ ಮನವಿ ಪುರಸ್ಕರಿಸಬೇಕು ಎಂದು ಹಸಿರು ಸೇನೆ ರಾಜ್ಯ ಸಂಚಾಲಕ ಗಂಗಾಧರ ಮೇಟಿ ಆಗ್ರಹಿಸಿದರು.

ಸ್ಥಳೀಯ ರಾಣಿ ಚನ್ನಮ್ಮ ವೃತ್ತದಲ್ಲಿ ಸಸಾಲಟ್ಟಿ ಏತ ನೀರಾವರಿ ಹೋರಾಟ ಸಮಿತಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಂಟಿಯಾಗಿ ಆಯೋಜಿ ಸಿದ್ದ ಬೃಹತ್ ಪ್ರತಿಭಟನಾ ರ್‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.

ಮೊದಲು ಈ ಭಾಗದಲ್ಲಿ ಕೇವಲ 100 ರಿಂದ 150 ಅಡಿ ಅಂತರದಲ್ಲಿ ಅಂತರ್ಜಲ ಲಭಿಸುತ್ತಿತ್ತು ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆ ಯಾಗಿರುವುದರಿಂದ ಈಗ 1000 ದಿಂದ 1200 ಅಡಿ ಆಳದಲ್ಲಿಯೂ ನೀರು ದೊರಕುತ್ತಿಲ್ಲ, ಜನ ಮತ್ತು ಜಾನು ವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗಿದೆ, ಕೂಡಲೇ ಸರ್ಕಾರ ಸಸಾಲಟ್ಟಿ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಚಾಂದಬೀಬಿ ಸಿಂದಗಿ ಪ್ರತಿಭಟನೆ ಯಲ್ಲಿ ಪಾಲ್ಗೊಂಡು ಮಾತನಾಡಿ ಸರ್ಕಾರ ಈ ಭಾಗದ ರೈತರಿಗೆ ಸಹಾಯ ಮಾಡಲು ಸಸಾಲಟ್ಟಿ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲೇ ಬೇಕು, ರಾಜ್ಯ ಮಹಿಳಾ ಸಂಘಟನೆಯ ಸರ್ವ ಸದಸ್ಯರು ಬೀದಿಗೆ ಬಂದು ಮಹಿಳೆ ಯರಲ್ಲಿ ಜಾಗೃತಿ ಮೂಡಿಸಿ ಹೋರಾಟ ನಿರತರಿಗೆ ಬೆಂಬಲ ನೀಡುತ್ತದೆ ಎಂದು ಹೇಳಿದರು.

ಹೋರಾಟದ ಮನವಿ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ, ನೀರಾವರಿ ಸಚಿವ ಎಂ.ಬಿ. ಪಾಟೀಲ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಪುರಸಭೆಯ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಹೋರಾಟದ ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸಿದರು. ಹೋರಾಟ ದಲ್ಲಿ ಪಾಲ್ಗೊಂಡಿರುವ ಗೋಲೇಶ ಅಮ್ಮಣಗಿ, ಶಿವಲಿಂಗ ಟಿರಕಿ, ಸುರೇಶ ಮಡಿವಾಳರ, ಬಂದೇನಮಾಜ ಪಕಾಲಿ, ಸಿದ್ದು ಉಳ್ಳಾಗಡ್ಡಿ, ಸುವರ್ಣಾ ಆಸಂಗಿ ಇದ್ದರು. ಜಿಲ್ಲಾ ಮಹಿಳಾ ಸಂಘಟನೆಯ ಯಲ್ಲವ್ವ ಮಾಯಣ್ಣವರ, ಲಾಡಮಾ ಬೀಳಗಿ, ಬೈರುನಮಾ ಬಿಸ್ತಿ, ದೊಡ್ಡವ್ವ ಮಾಯಣ್ಣವರ, ಬೀಬಿಜಾನ ಕಾತರಕಿ, ಮೊಹಬ್ಬತ್ ತೇರದಾಳ, ಚನ್ನಮ್ಮ ದಾಲಾಯತ ಸುನಂದಾ ಬಡಗಾವಿ, ನೀಲವ್ವ ಬಂಡಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.