ADVERTISEMENT

ವಿವಿಧೆಡೆ ಜಗಜೀವನರಾಂ ಜಯಂತಿ

-ಹಸಿರು ಕ್ರಾಂತಿ ಹರಿಕಾರನ ಸ್ಮರಣೆ; ಚುನಾವಣೆ ನೀತಿ ಸಂಹಿತೆ; ಸರಳ ರೀತಿಯಲ್ಲಿ ಆಚರಣೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 5:47 IST
Last Updated 6 ಏಪ್ರಿಲ್ 2018, 5:47 IST

ಬಾಗಲಕೋಟೆ: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಡಾ.ಬಾಬು ಜಗಜೀವನರಾಂ ಅವರ 111ನೇ ಜನ್ಮ ದಿನಾಚರಣೆಯನ್ನು ಜಿಲ್ಲಾಡಳಿತದ ವತಿಯಿಂದ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗುರುವಾರ ಸರಳವಾಗಿ ಆಚರಿಸಲಾಯಿತು.ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಧಿಕಾರಿ ವಿಕಾಸ್ ಸುರಳಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಶಶಿಧರ ಕುರೇರ  ಜಗಜೀವನರಾಂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ಅರ್ಪಿಸಿದರು.

ಇಳಕಲ್‌ನ ನಿವೃತ್ತ ಪ್ರಾಚಾರ್ಯ ಬೂತನಾಳ ಅವರು ಜಗಜೀವನರಾಂ ಅವರ ಜೀವನ ಚರಿತ್ರೆ ಕುರಿತು ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಅಮರೇಶ ನಾಯಕ, ಸಿಪಿಓ ನಿಂಗಪ್ಪ ಗೋಠೆ, ಮುಖ್ಯ ಲೆಕ್ಕಾಧಿಕಾರಿ ಶಾಂತಾ ಕಡಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಬಿ.ವಿ.ಚೈತ್ರಾ ಉಪಸ್ಥಿತರಿದ್ದರು.

ಸಾವಳಗಿಯಲ್ಲೂ ಸ್ಮರಣೆ

ADVERTISEMENT

ಸಾವಳಗಿ: ಗ್ರಾಮದ ಉಪ ತಹಶೀಲ್ದಾರ್‌ ಕಚೇರಿಯಲ್ಲಿ ಡಾ.ಬಾಬುಜಗಜೀವನ್‌ರಾಂ ಅವರ ಜಯಂತಿ ಆಚರಣೆ ಮಾಡಲಾಯಿತು.ಉಪ ತಹಶೀಲ್ದಾರ್ ವೈ.ಎಚ್.ದ್ರಾಕ್ಷಿ ಮಾತನಾಡಿ, ‘ಬಡ ವರ್ಗದ ಜನರ ಹಸಿವನ್ನು ನೀಗಿಸಿದ ಶ್ರೇಯ ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನ್ ರಾಂ ಅವರಿಗೆ ಸಲ್ಲಬೇಕು’ ಎಂದು ಹೇಳಿದರು.‘ದೇಶದ ಬಡವರ ಏಳಿಗೆಗೆ ನಿರಂತರ ಹೋರಾಟ ನಡೆಸಿದರು. ಅಸ್ಪ್ರಶ್ಯತೆ ಹೋಗಲಾಡಿಸಲು ಗಾಂಧೀಜಿ ಜತೆ ಕೈ ಜೋಡಿಸಿ ಹೋರಾಟ ಮಾಡಿದರು’ ಎಂದರು. ಗ್ರಾಮಲೆಕ್ಕಾಧಿಕಾರಿ ಆನಂದ ರಾಠೋಡ, ಕೃಷಿ ಅಧಿಕಾರಿ ಬಿ.ಜೆ.ಮಾಳೆದ, ಪ್ರಮುಖರಾದ ರಾಮಣ್ಣಾ ಬಂಡಿವಡ್ಡರ, ಕಲ್ಲಪ್ಪ ನಾಂದ್ರೇಕರ, ರವಿ ಐಹೊಳ್ಳಿ, ಚಂದು ಮಾದರ ಹಾಜರಿದ್ದರು.

ಜಗಜೀವನರಾಂ ಜಯಂತಿ

ಬಾದಾಮಿ: ‘ಬಾಬು ಜಗಜೀವನರಾಂ ರಾಷ್ಟ್ರದ ಪ್ರಗತಿ ಜೊತೆಗೆ ಕೃಷಿಯಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ’ ಎಂದು ಕಾಂತಿಚಂದ್ರ ಜ್ಯೋತಿ ಹೇಳಿದರು.
ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಗುರುವಾರ ವಿವಿಧ ದಲಿತ ಸಂಘಟನೆ ಹಮ್ಮಿಕೊಂಡ ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾಂ ಅವರ 111ನೇ ಜಯಂತಿ ಉತ್ಸವದಲ್ಲಿ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಪ್ರಮುಖರಾದ ಪ್ರಕಾಶ ಪೂಜಾರ, ರಂಗನಾಥ ಮಾದರ, ಬಿ.ಪಿ.ಹಾದಿಮನಿ, ಆನಂದ ದೊಡಮನಿ, ಹುಲಗಪ್ಪ ಬೋವಿ, ಎಸ್‌.ವೈ.ಹೊಸಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.