ADVERTISEMENT

ಅಂಗಡಿ ಮಾಲೀಕರ ವಿರುದ್ಧ ಕ್ರಿಮಿನಲ್ ದಾವೆ

​ಪ್ರಜಾವಾಣಿ ವಾರ್ತೆ
Published 23 ಮೇ 2017, 9:13 IST
Last Updated 23 ಮೇ 2017, 9:13 IST

ಬಳ್ಳಾರಿ: ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ದರೂ ನಗರದ ವಿವಿಧೆಡೆ ಮಾರಾಟ  ಮಾಡುತ್ತಿದ್ದ ಕಿರಾಣಿ ಅಂಗಡಿಗಳ ಮೇಲೆ ಮಹಾನಗರ ಪಾಲಿಕೆ, ಆರೋಗ್ಯ ಮತ್ತು ಪರಿಸರ ಇಲಾಖೆ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ಒಂದು ಟನ್‌ನಷ್ಟು ಪ್ಲಾಸ್ಟಿಕ್ ಸಾಮಗ್ರಿ ವಶಪಡಿಸಿ ಕೊಂಡರು.

ಪಾಲಿಕೆ ಆಯುಕ್ತ ಕೆ.ಮಂಜುನಾಥ ನಲವಡಿ, ಪರಿಸರ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಾದ ಶಿವಮೂರ್ತಿ, ಕುಲಕರ್ಣಿ, ಕುಮಾರಸ್ವಾಮಿ, ಬಸವ ರಾಜ, ನರೇಂದ್ರಬಾಬು, ಶ್ರೀನಿವಾಸ ನೇತೃತ್ವದ ಸಿಬ್ಬಂದಿ ಇಲ್ಲಿನ ಸಣ್ಣ ಮಾರುಕಟ್ಟೆ ಹಾಗೂ ಗ್ರಾಹಂ ರಸ್ತೆಯಲ್ಲಿನ ಕಿರಾಣಿ ಜನರಲ್ ಸ್ಟೋರ್‌ ಅಂಗಡಿಗಳ  ದಾಳಿ ನಡೆಸಿದರು.
ಮಾರಾಟಕ್ಕೆ ಇಟ್ಟಿದ್ದ ಪ್ಲಾಸ್ಟಿಕ್ ಲೋಟ, ತಟ್ಟೆ ಹಾಗೂ ಟೇಬಲ್ ಮೇಲಿನ ಹಾಳೆ ಸೇರಿ ಇತರೆ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಜಪ್ತಿ ಮಾಡಿದರು.

ಉತ್ಪಾದಕ ಕಂಪೆನಿಯ ಮಾಲೀಕ ರಿರೊಂದಿಗೆ ಚರ್ಚಿಸಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಅದಾಗ್ಯೂ ಮಾರಾ ಟಕ್ಕೆ ಮುಂದಾದ ಅಂಗಡಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಪರಿಸರ ಸಂರಕ್ಷಣೆ ಇಲಾಖೆ ಸಜ್ಜಾಗಿದೆ ಎಂದು ಆಯುಕ್ತ ಮಂಜು ನಾಥ ಕೆ.ನಲವಡಿ ‘ಪ್ರಜಾವಾಣಿ’ಗೆ ತಿಳಿಸಿದರು. ದಾಳಿ ವೇಳೆ ಪ್ಲಾಸ್ಟಿಕ್ ಮಾರಾಟ ಪ್ರಕ್ರಿಯೆ ಕಂಡುಬರುವ ಎಲ್ಲ ಅಂಗಡಿ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.