ADVERTISEMENT

ಎಪಿಎಲ್‌ ಪಡೆಯೋದು ಇನ್ನು ಸುಲಭ!

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ ಕೂಡಲೇ ತಾತ್ಕಾಲಿಕ ಪಡಿತರ ಚೀಟಿ ಲಭ್ಯ

ಕೆ.ನರಸಿಂಹ ಮೂರ್ತಿ
Published 2 ಫೆಬ್ರುವರಿ 2017, 6:17 IST
Last Updated 2 ಫೆಬ್ರುವರಿ 2017, 6:17 IST
ಎಪಿಎಲ್‌ ಪಡೆಯೋದು ಇನ್ನು ಸುಲಭ!
ಎಪಿಎಲ್‌ ಪಡೆಯೋದು ಇನ್ನು ಸುಲಭ!   

ಬಳ್ಳಾರಿ: ಎಪಿಎಲ್‌ ಪಡಿತರಚೀಟಿ ಪಡೆಯುವ ವಿಧಾನ ಈಗ ಸುಲಭವಾ ಗಿದೆ. ಆಧಾರ್‌ ಕಾರ್ಡ್‌ ಹಾಗೂ ಮನೆ ಯಲ್ಲಿ ಕಂಪ್ಯೂಟರ್‌ ಮತ್ತು ಪ್ರಿಂಟರ್‌ ಸೌಲಭ್ಯ ಇದ್ದರೆ ಸಾಕು. ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬೇಕಾಗಿಲ್ಲ.

ಆನ್‌ಲೈನ್‌ ಮೂಲಕ ಸರಳ ವಿಧಾನ ದಲ್ಲಿ ಅರ್ಜಿ ಸಲ್ಲಿಸಿದ ಕೂಡಲೇ ತಾತ್ಕಾ ಲಿಕ ಪಡಿತರ ಚೀಟಿ ಪಡೆಯಬಹುದು. ನಂತರದ ಹದಿನೈದು ದಿನದಲ್ಲಿ ಮನೆ ಬಾಗಿಲಿಗೆ ಲ್ಯಾಮಿನೇಷನ್‌ ಆದ ಚೀಟಿ ತಲುಪಲಿದೆ.

ವಿಧಾನ: ಇಲಾಖೆಯ ಅಂತರ್ಜಾಲ ತಾಣ ವನ್ನು ಪ್ರವೇಶಿಸಿದ ಕೂಡಲೇ ಕಾಣುವ ಇ–ಸೇವೆಗಳು ವಿಭಾಗವನ್ನು ಪ್ರವೇಶಿಸಿ ದರೆ ಇ– ಪಡಿತರ ಚೀಟಿ ಅಂಕಣ ಕಂಡು ಬರುತ್ತದೆ. ಅದನ್ನು ಪ್ರವೇಶಿಸಿ ಕನ್ನಡ ಅಥವಾ ಇಂಗ್ಲಿಷ್‌ ಭಾಷೆಯನ್ನು ಆಯ್ಕೆ ಮಾಡಬೇಕು. ನಂತರ,  ಹೊಸ ಪಡಿತರ ಚೀಟಿಗಾಗಿ ಅರ್ಜಿ ಅಂಕಣವನ್ನು ಆಯ್ಕೆ ಮಾಡಬೇಕು. ಆಧಾರ್‌ ಕಾರ್ಡ್‌ ಸಂಖ್ಯೆ ಯನ್ನು ನಮೂದಿಸಬೇಕು. ಕೂಡಲೇ ಅವರ ಮೊಬೈಲ್‌ ಸಂಖ್ಯೆಗೆ ಒನ್‌ ಟೈಂ ಪಾಸ್‌ವರ್ಡ್‌ ಸಂದೇಶ ಬರುತ್ತದೆ. ಅದನ್ನು ಅರ್ಜಿಯಲ್ಲಿ ನಮೂದಿಸಬೇಕು. ನಮೂದಿಸಿದ ಬಳಿಕ ಕುಟುಂಬದ ಇನ್ನಿ ತರ ಸದಸ್ಯರ ಆಧಾರ್‌ ಸಂಖ್ಯೆಯನ್ನು ನಮೂದಿಸಬೇಕು. ಎಲ್ಲ ಸದಸ್ಯರ ಸಂಖ್ಯೆ ನಮೂದಾದ ಬಳಿಕ ಅರ್ಜಿ ಸಂದಾಯಕ್ಕೆ ಓಕೆ ಎನ್ನಬೇಕು. ನಂತರದ ಹಂತದಲ್ಲಿ ತಾತ್ಕಾಲಿಕ ಪಡಿತರ ಚೀಟಿ ಲಭ್ಯವಾಗು ತ್ತದೆ. ಅದನ್ನು ಮುದ್ರಿಸಿ ಇಟ್ಟುಕೊಳ್ಳ ಬಹುದು ಎಂದು ಇಲಾಖೆಯ ಹಿರಿಯ ಉಪನಿರ್ದೇಶಕ ಸಿ.ಶ್ರೀಧರ್‌ ಬುಧವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಹದಿನೈದು ದಿನದಿಂದ:  ಅಂತರ್ಜಾಲ ತಾಣದಲ್ಲೇ ಅರ್ಜಿ ಸಲ್ಲಿಸಿ ಎಪಿಎಲ್‌ ಪಡಿತರ ಚೀಟಿ ಪಡೆಯುವ ವ್ಯವಸ್ಥೆಯನ್ನು ಹದಿನೈದು ದಿನದಿಂದ ಚಾಲನೆಗೊಳಿಸಲಾಗಿದೆ. ಆಸಕ್ತರು ಯಾವುದೇ ತೊಂದರೆ ಇಲ್ಲದೆ ಪಡೆಯಹುದು. ಅಂಚೆ ಮೂಲಕ ಬರುವ ಕಾರ್ಡ್‌ ಪಡೆಯುವ ವೇಳೆ ₹ 70 ಪಾವತಿಸಬೇಕು ಎಂದು ತಿಳಿಸಿದರು.

ಬಿಪಿಎಲ್ ಪರಿಶೀಲನೆ:  ಬಿಪಿಎಲ್‌ ಪಡಿ ತರ ಚೀಟಿಯನ್ನು ಪಡೆಯುವುದು ಇಷ್ಟು ಸುಲಭವಲ್ಲ. ಪ್ರತಿಯೊಂದು ಅರ್ಜಿ ಯನ್ನೂ ನಗರ, ಪಟ್ಟಣ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಆರೋಗ್ಯ ನಿರೀಕ್ಷಕರು ಮತ್ತು ಕಂದಾಯ ನಿರೀಕ್ಷಕರು ಪರಿಶೀ ಲಿಸಿ, ಸ್ಥಳಭೇಟಿ ನೀಡಿ ಖಚಿತಪಡಿಸಿದ ಬಳಿಕವಷ್ಟೇ ಚೀಟಿ ನೀಡುವ ನಿರ್ಧಾರ ವನ್ನು ಕೈಗೊಳ್ಳಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಬಿಪಿಎಲ್‌ ಅರ್ಜಿಗಳನ್ನು ಗ್ರಾಮ ಲೆಕ್ಕಿಗರು ಪರಿಶೀಲಿಸಿ ಅಂತಿಮ ಗೊಳಿಸುತ್ತಾರೆ ಎಂದು ಸ್ಪಷ್ಟಪಡಿಸಿದರು. ಕಳೆದ ವರ್ಷ ಜೂನ್‌ಗಿಂತ ಮೊದಲು ಅರ್ಜಿ ಸಲ್ಲಿಸಿದ್ದವರು ಆನ್‌ಲೈನ್‌ನಲ್ಲಿ ಎಪಿಎಲ್‌ ಕಾರ್ಡ್‌ ಪಡೆಯುವ ಹಂತ ದಲ್ಲಿ, ಅವರು ಈ ಮೊದಲು ಅರ್ಜಿ ಸಲ್ಲಿಸಿದ್ದರೆ, ಅದರ ಸಂಖ್ಯೆಯನ್ನು ನಮೂ ದಿಸಬೇಕಾಗುತ್ತದೆ ಎಂದರು.

ಧಾನ್ಯಕ್ಕೆ ಎಪಿಎಲ್‌ ಮಂದಿ ನಿರಾಸಕ್ತಿ!
ಬಿಪಿಎಲ್‌ ಚೀಟಿದಾರರಿಗೆ ವಿತರಿಸುವಂತೆಯೇ ಎಪಿಎಲ್‌ ಚೀಟಿದಾರರಿಗೂ ಇಲಾಖೆ ಧಾನ್ಯ ವಿತರಿಸಿದರೂ, ಅದನ್ನು ಪಡೆಯಲು ಆಸಕ್ತಿ ತೋರಿರುವವರ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆ ಇದೆ.ಧಾನ್ಯ ಬೇಕಾದ ಎಪಿಎಲ್‌ ಚೀಟಿದಾರರು ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಹೆಸರು ನೋಂದಾಯಿಸಬೇಕು. ಜಿಲ್ಲೆಯಲ್ಲಿ 1,200 ಮಂದಿ ಹೆಸರು ನೋಂದಣಿ ಮಾಡಿಸಿದ್ದಾರೆ. ಆದರೆ ಅವರ ಪೈಕಿ ಧಾನ್ಯ ಪಡೆಯುವವರ ಸಂಖ್ಯೆ ಕಡಿಮೆ ಇದೆ ಎನ್ನುತ್ತಾರೆ ಸಿ.ಶ್ರೀಧರ್‌. ₹ 15ರ ದರದಲ್ಲಿ 3 ಕೆಜಿ ಅಕ್ಕಿ, ₹ 10ರ ದರದಲ್ಲಿ ಎರಡು ಕೆ.ಜಿ. ಗೋದಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

***

ADVERTISEMENT

ಹೊಸ ಮಾನದಂಡಗಳ ಪ್ರಕಾರ ಪಡಿತರ ಚೀಟಿ ವಿತರಿಸಲು ಇಲಾಖೆ ಸಜ್ಜಾಗಿದೆ. ಆಯುಕ್ತರ ಆದೇಶ ಬಂದ ಕೂಡಲೇ ಜಾರಿಗೊಳಿಸಲಾಗುವುದು
- ಸಿ. ಶ್ರೀಧರ್‌, ಇಲಾಖೆಯ ಹಿರಿಯ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.