ADVERTISEMENT

ಖಾತಾ ಅಕ್ರಮ ಬದಲಾವಣೆ ಪ್ರಕರಣ: ಆರು ಜನ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 9:59 IST
Last Updated 20 ಏಪ್ರಿಲ್ 2017, 9:59 IST

ಹೊಸಪೇಟೆ: ಕಾನೂನುಬಾಹಿರವಾಗಿ ಖಾತಾ ಬದಲಾವಣೆ ಮಾಡಿಕೊಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಇಬ್ಬರು ನಗರಸಭೆ ಸದಸ್ಯರು ಸೇರಿದಂತೆ ಒಟ್ಟು ಆರು ಜನರನ್ನು ಬುಧವಾರ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ನಗರಸಭೆ ಸದಸ್ಯರಾದ ವೇಣುಗೋಪಾಲ್‌, ಕೆ. ಮಲ್ಲಪ್ಪ, ನಗರಸಭೆ ಕಂದಾಯ ವಿಭಾಗದ ಸಿಬ್ಬಂದಿ ಪಂಪಾಪತಿ, ನಾಗಮ್ಮ, ನೀಲಕಂಠ ಸ್ವಾಮಿ ಹಾಗೂ ಜಿ. ಅನಿಲ್‌ ಕುಮಾರ್‌ ಅವರನ್ನು ನಾಲ್ಕು ದಿನಗಳ ವರೆಗೆ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪಟ್ಟಣ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಲಿಂಗನಗೌಡ ನೆಗಳೂರು ‘ಪ್ರಜಾವಾಣಿ’ಗೆ ತಿಳಿಸಿದರು. ಎಲ್ಲ ಆರು ಜನರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ದಿನ ವಿಚಾರಣೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಜಾಮೀನು ನಕಾರ: ಜಾಮೀನು ಕೋರಿ ಕೆ. ಮಲ್ಲಪ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ ಜೆ.ಎಂ.ಎಫ್‌.ಸಿ ಮತ್ತು ಪ್ರಧಾನ ಸಿವಿಲ್‌ ನ್ಯಾಯಾಲಯ ಬುಧವಾರ ನಿರಾಕರಿಸಿದೆ. ಏ.17ರಂದು ವೇಣುಗೋಪಾಲ್‌ ಹಾಗೂ ಇತರ ನಾಲ್ವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಏ. 11ರಂದು ನಗರಸಭೆ ಕಂದಾಯ ವಿಭಾಗದ ನಾಲ್ವರು, ಏ. 12ರಂದು ವೇಣುಗೋಪಾಲ್‌ ಹಾಗೂ ಏ.15ರಂದು ಕೆ. ಮಲ್ಲಪ್ಪ ಅವರನ್ನು ಪೊಲೀಸರು ಬಂಧಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.