ADVERTISEMENT

ಚಕ್ರವ್ಯೂಹ ಫೆಸ್ಟ್‌: ಬಹುಮಾನ ವಿತರಣೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 10:01 IST
Last Updated 4 ಏಪ್ರಿಲ್ 2018, 10:01 IST

ರಬಕವಿ ಬನಹಟ್ಟಿ: ‘ಇಂದಿನ ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕಾದರೆ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು’ ಎಂದು ವಕೀಲ ಮತ್ತು ತೆರಿಗೆ ಸಲಹೆಗಾರ ಶಿವಾನಂದ ಗಾಯಕವಾಡ ತಿಳಿಸಿದರು.ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಮಹಾವಿದ್ಯಾಲಯದಲ್ಲಿ ಮುಕ್ತಾಯಗೊಂಡ ಚಕ್ರವ್ಯೂಹ ಕಾಮರ್ಸ್‌ ಮತ್ತು ಮ್ಯಾನೇಜಮೆಂಟ್‌ ಫೆಸ್ಟ್‌ 18ರಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿಅವರು ಭಾನುವಾರ ಮಾತನಾಡಿದರು.

‘ವಿದ್ಯಾರ್ಥಿಗಳು ದೇಶ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿದ ಸೈನಿಕರ ಸ್ಮರಣೆಯನ್ನು ಮಾಡಬೇಕು. ದೇಶ ಸೇವೆಯ ಅವಶ್ಯಕತೆಯಿದ್ದಾಗ ಪ್ರತಿಯೊಬ್ಬರು ಭಾಗವಹಿಸಬೇಕು’ ಎಂದು ಗಾಯಕವಾಡ ತಿಳಿಸಿದರು.ಬೆಳಗವಾಗಿಯ ಕೆಎಲ್‌ಇ ಬಿಬಿಎ ಕಾಲೇಜು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಬೆಳಗಾವಿಯ ಜೈನ್‌ ಬಿಬಿಎ ಮಹಾವಿದ್ಯಾಲಯ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

ಪ್ರಾಚಾರ್ಯ ಡಾ.ಜಿ.ಆರ್‌.ಜುನ್ನಾಯ್ಕರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಚಕ್ರವ್ಯೂಹ ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು, ಕಾಮರ್ಸ್‌ ಮತ್ತು ಮ್ಯಾನೇಜಮೆಂಟ್‌ ವಿದ್ಯಾರ್ಥಿಗಳಿಗೆ ಮನರಂಜನೆಯ ಜೊತೆಗೆ ವಿವಿಧ ವಿಷಯಗಳ ಕುರಿತು ಜ್ಞಾನವನ್ನು ಕೊಡುವ ಕಾರ್ಯಕ್ರಮವಾಗಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಇದನ್ನು ಯಶಸ್ವಿಯಾಗಿ ಸಂಘಟನೆ ಮಾಡಿದ್ದಾರೆ. ಇದು ಕಾರ್ಯಕ್ರಮಗಳನ್ನು ಸಂಘಟನೆ ಮಾಡುವ ಕಲೆಯನ್ನು ತಿಳಿಸಿಕೊಡುತ್ತದೆ’ ಎಂದರು.

ADVERTISEMENT

ಕಾರ್ಯಕ್ರಮದ ವೇದಿಕೆಯ ಮೇಲೆ ಜನತಾ ಶಿಕ್ಷಣ ಸಂಘದ ಗೌರವ ಕಾರ್ಯದರ್ಶಿ ಜಯವಂತ ಗುಂಡಿ, ಸದಸ್ಯ ವೀರಭದ್ರ ಕೊಳಕಿ, ಪ್ರೊ. ಮಲ್ಲಿಕಾರ್ಜುನ ಸಜ್ಜನವರ, ಉಪನ್ಯಾಸಕರಾದ ಸುವರ್ಣಾ ವರದಾಯಿ, ವಿಶ್ವಜ ಕಾಡದೇವರ, ಎಸ್‌.ಬಿ.ಉಕ್ಕಲಿ, ಗೋಕುಲ ಕಾಬರಾ, ರಶ್ಮಿ ಕೊಕಟನೂರ, ಶ್ವೇತಾ ಮಠದ, ರೂಪಾ ಜವಳಗಿ, ವಿಜಯ ಕಾಬರಾ, ಶಂಕರ ಹಳಿಂಗಳಿ, ವಿದ್ಯಾರ್ಥಿ ಪ್ರತಿನಿಧಿಗಳಾದ ರೋಹನ ಸದಲಗಿ ಮತ್ತು ಜ್ಯೋತಿ ಮಾನಗಾವಿ ಇದ್ದರು.

ದೀಕ್ಷಾ ದೇವಾಡಿಗ ಪ್ರಾರ್ಥಿಸಿದರು. ಗೀತಾ ಮಿರ್ಜಿ ಸ್ವಾಗತಿಸಿದರು. ರಾಮು ರಾವಳ ಅತಿಥಿಗಳನ್ನು ಪರಿಚಯಿಸಿದರು. ರೋಹನ ಸದಲಗಿ ಮತ್ತು ಭಾವಿಕ ಪಟೇಲ ನಿರೂಪಿಸಿದರು. ಋತ್ವಿಕ ಹೊನವಾಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.