ADVERTISEMENT

ತಂಪುಪಾನೀಯಕ್ಕೆ ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 6:32 IST
Last Updated 15 ಮಾರ್ಚ್ 2017, 6:32 IST

ಮರಿಯಮ್ಮನಹಳ್ಳಿ: ಬೇಸಿಗೆ ಆರಂಭದಲ್ಲಿ ಬಿಸಿಲಿನ ತಾಪ ದಿನೇ ದಿನೇ ಏರುತ್ತಿದ್ದು, ತಾಪ ತಾಳಲಾರದೇ ಜನ  ಎಳನೀರು, ಮಜ್ಜಿಗೆ, ಐಸ್‌ಕ್ರೀಂ ಸೇರಿ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದರೆ, ಇತ್ತ ಸಾಂಪ್ರದಾಯಿಕ ಮಡಿಕೆ, ಹೂಜಿ ಗಳ ಖರೀದಿ ನಿಧಾನಕ್ಕೆ ಏರುತ್ತಿದೆ.

ಯುಗಾದಿ ನಂತರ ಏರುತ್ತಿದ್ದ ಬಿಸಿ ಲಿನ ತಾಪ ತಿಂಗಳ ಮೊದಲೇ ಹೆಚ್ಚು ತ್ತಿರುವುದರಿಂದ ಮಧ್ಯಾಹ್ನದ ಸಮಯ ದಲ್ಲಿ  ಜನರು ಹೊರಬರಲು ಹಿಂದೆ ಮುಂದೆ ನೋಡುವಂತಾಗಿದ್ದ, ರಸ್ತೆಗಳು ಬಿಕೊ ಎನ್ನುತ್ತಿರುವ ದೃಶ್ಯ ಸಾಮಾನ್ಯ ವಾಗಿದೆ. ಇನ್ನು ಬಡವರ ಫ್ರಿಜ್‌ ಎಂದೇ ಕರೆಯಲಾಗುವ ಮಣ್ಣಿನ ಮಡಕೆ, ಹೂಜಿ ಗಳನ್ನು ತಯಾರಿಸಿಕೊಂಡ ಕುಂಬಾರರು ಗ್ರಾಹಕರ ನಿರೀಕ್ಷೆಯಲ್ಲಿದ್ದಾರೆ.

ಪಟ್ಟಣದಲ್ಲಿ ಮುಖ್ಯ ರಸ್ತೆಯಲ್ಲಿ ಕುಂಬಾರ ಓಣಿಯಲ್ಲಿ ಹಲವಾರು ಕುಂಬಾರ ಕುಟುಂಬಗಳಿದ್ದರೂ, ಸಾಂಪ್ರದಾಯಿಕವಾಗಿ ತಲೆತಲಾಂತರ ದಿಂದ ಬಂದ ವೃತ್ತಿಯಲ್ಲಿ ತೊಡಗಿರು ವುದು ಕೇವಲ ಒಂದು ಕುಟುಂಬ ಮಾತ್ರ. ಬೇರೆಡೆಯಿಂದ ತಂದು ಮಾರುವವರಿ ದ್ದಾರೆ. ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಣ್ಣ ಹಾಗೂ ದೊಡ್ಡ ಗಾತ್ರದ ಮಡಿಕೆಗಳನ್ನು ಖರೀದಿಸುವಲ್ಲಿ ತೊಡಗಿ ದ್ದಾರೆ. ₹ 50ರಿಂದ ₹ 200ರ ವರೆಗೆ ಮಾರಾಟ ಮಾಡಲಾಗುತ್ತಿದೆ. ಬೇಸಿಗೆ ಯಲ್ಲಿ ಮೂರ್ನಾಲ್ಕು ತಿಂಗಳ ಕಾಲ ಮಾತ್ರ ಬೇಡಿಕೆ ಇರುವ ಮಣ್ಣಿನ ಮಡಿಕೆ, ಹೂಜಿಗಳಿಗೆ ಈ ಬಾರಿ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು, ಬೇಡಿಕೆ  ಹೆಚ್ಚುವ ನಿರೀಕ್ಷೆ ಇದೆ. ಹೀಗಾಗಿ, ಹೆಚ್ಚು ಮಡಿಕೆ ತಯಾರಿ ಸುವ ಕೆಲಸದಲ್ಲಿ ನಿರತರಾಗಿದ್ದೇವೆ ಎನ್ನು ತ್ತಾರೆ ಕುಂಬಾರ ಈರಣ್ಣ ಹಾಗೂ ಅವರ ಮಗ ಕುಂಬಾರ ಕೊಟ್ರೇಶ್‌.

ADVERTISEMENT


‘ನೋಡ್ರಿ ಅಜ್ಜಮುತ್ತಜ್ಜನ ಕಾಲ ದಿಂದ ಈ ವೃತ್ತಿಯಲ್ಲಿ ತೊಡಗಿದ್ದೇವೆ. ಹಿಂದೆ ಮಣ್ಣಿನಿಂದ ಮಾಡಿದ ಸಾಮಗ್ರಿ ಗಳಿಗೆ ಬೇಡಿಕೆ ಇತ್ತು. ಈಗ ಆ ಸ್ಥಿತಿ ಇಲ್ಲ. ಫ್ರಿಜ್‌ನ ತಣ್ಣನೆಯ ನೀರಿಗಿಂತ ಮಡಕೆ ಯಲ್ಲಿನ ನೀರು ಕುಡಿಯುವುದು ಆರ ಗ್ಯಕ್ಕೂ ಒಳ್ಳೆಯದು. ಆದರೆ ಬೇಸಿಗೆ ಬಂದಾಗ ಮಾತ್ರ ಜನರು ಮಣ್ಣಿನ ಮಡಕೆಗಳತ್ತ ಮುಖ ಮಾಡುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಮಡಕೆಗಳ ಮರಾಟ ದಲ್ಲಿಯೂ ಸ್ಪರ್ಧೆ ಇರುವುದರಿಂದ ಆದಾಯವೂ ಅಷ್ಟಕ್ಕಷ್ಟೇ’ ಎನ್ನುತ್ತಾರೆ ಕುಂಬಾರ ಈರಣ್ಣ.

ಈ ವೃತ್ತಿ ನಂಬಿ ಜೀವನ ಸಾಗಿಸು ವುದು ಕಷ್ಟಕರವಾಗಿದ್ದು, ಬೇಸಿಗೆಯಲ್ಲಿ ಮಾತ್ರ ಮುರ್ನಾಲ್ಕು ತಿಂಗಳು ಕೈತುಂಬಾ ಕೆಲಸ ನಂತರ ಮದುವೆ, ಮುಂಜಿ ಸೇರಿ ಇತರ ಕೆಲ ಸಮಾರಂಭಗಳಿಗೆ ಮಾತ್ರ ಬಳಸುವುದರಿಂದ ಉಳಿದ ತಿಂಗಳು ಕೆಲಸ ಇಲ್ಲದಂತಾಗುತ್ತದೆ. ಇತ್ತ  ಈ ವೃತ್ತಿ ಯಲ್ಲಿ ತೊಡಗಿಸಿಕೊಂಡವರಿಗೆ ಸರಿ ಯಾದ ಸೌಲಭ್ಯಗಳು ಇಲ್ಲದಂತಾಗಿದ್ದು, ಮುಂದಿನ ಪೀಳಿಗೆ ಈ ವೃತ್ತಿಯಲ್ಲಿ ತೊಡ ಗಿಸಿಕೊಳ್ಳುವುದು ಕಷ್ಟ ಎನ್ನುತ್ತಾರೆ ಯುವಕ ಕುಂಬಾರ ಕೊಟ್ರೇಶ್‌.

***

ಸ್ಟೀಲ್‌ ಪಾತ್ರೆ ಬಂದಾದ ಮೇಲೆ ಮಣ್ಣಿನ ಪಾತ್ರೆಗಳ ಬೇಡಿಕೆ ಕುಸಿದಿದೆ. ಪ್ಲಾಸ್ಟಿಕ್‌ ಉತ್ಪನ್ನಗಳು ಬಂದ ಮೇಲಂತೂ ಮಣ್ಣಿನ ಮಡಕೆಗಳನ್ನು ಕೇಳುವವರೇ ಇಲ್ಲದಂತಾಗಿದೆ.
-ಕುಂಬಾರ ಈರಣ್ಣ, ಮಡಕೆ ವ್ಯಾಪಾರಿ

***
-ಎಚ್‌.ಎಸ್‌.ಶ್ರೀಹರಪ್ರಸಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.