ADVERTISEMENT

ಪ್ರತಿಭಟನೆ ಕೈಬಿಟ್ಟ ರೈತರು

ಅಧಿಕಾರಿಗಳಿಂದ ಕಾಲುವೆಗಳಿಗೆ ನೀರು ಹರಿಸುವ ಭರವಸೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 5:47 IST
Last Updated 30 ಜನವರಿ 2017, 5:47 IST
ಹೊಸಪೇಟೆಯ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸುತ್ತಿದ್ದ ರೈತರನ್ನು ಉದ್ದೇಶಿಸಿ ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಮಾತನಾಡಿದರು. ನಗರಸಭೆ ಅಧ್ಯಕ್ಷ ಅಬ್ದುಲ್‌ ಖದೀರ್‌, ರೈತರ ಸಂಘದ ಅಧ್ಯಕ್ಷ ಗೋಸಲ ಭರಮಪ್ಪ, ಶಾಸಕ ಆನಂದ ಸಿಂಗ್‌, ತುಂಗಭದ್ರಾ ಯೋಜನೆ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಭೋಜ್ಯ ನಾಯ್ಕ, ಕಾಂಗ್ರೆಸ್‌ ಮುಖಂಡ ಎಚ್‌.ಆರ್‌. ಗವಿಯಪ್ಪ, ಡಿವೈಎಸ್‌ಪಿ ಕುಮಾರಚಂದ್ರ ಇದ್ದಾರೆ –ಪ್ರಜಾವಾಣಿ ಚಿತ್ರ.
ಹೊಸಪೇಟೆಯ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸುತ್ತಿದ್ದ ರೈತರನ್ನು ಉದ್ದೇಶಿಸಿ ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಮಾತನಾಡಿದರು. ನಗರಸಭೆ ಅಧ್ಯಕ್ಷ ಅಬ್ದುಲ್‌ ಖದೀರ್‌, ರೈತರ ಸಂಘದ ಅಧ್ಯಕ್ಷ ಗೋಸಲ ಭರಮಪ್ಪ, ಶಾಸಕ ಆನಂದ ಸಿಂಗ್‌, ತುಂಗಭದ್ರಾ ಯೋಜನೆ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಭೋಜ್ಯ ನಾಯ್ಕ, ಕಾಂಗ್ರೆಸ್‌ ಮುಖಂಡ ಎಚ್‌.ಆರ್‌. ಗವಿಯಪ್ಪ, ಡಿವೈಎಸ್‌ಪಿ ಕುಮಾರಚಂದ್ರ ಇದ್ದಾರೆ –ಪ್ರಜಾವಾಣಿ ಚಿತ್ರ.   
ಹೊಸಪೇಟೆ: ವಿಜಯನಗರ ಕಾಲದ ಕಾಲುವೆಗಳ ಕೊನೆಯ ಅಂಚಿನ ವರೆಗೆ ನೀರು ಹರಿಸುವ ಭರವಸೆ ಸಿಕ್ಕಿರುವುದ ರಿಂದ ರೈತರ ಸಂಘವು ನಗರದ ತಹಶೀ ಲ್ದಾರ್‌ ಕಚೇರಿ ಎದುರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು 2ನೇ ದಿನ ಭಾನುವಾರ ಕೈಬಿಟ್ಟಿದೆ.
 
ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ರೈತರ ಸಂಘವು ಶನಿವಾರ ಹೊಸಪೇಟೆ ಬಂದ್‌ ನಡೆಸಿತ್ತು. ಬಳಿಕ ಅನಿರ್ದಿಷ್ಟಾವಧಿ ಧರಣಿ ಆರಂಭಿ ಸಿತ್ತು. ಕೊನೆಗೂ ರೈತರ ಒತ್ತಡಕ್ಕೆ ಮಣಿದು ನೀರು ಹರಿಸುವ ತೀರ್ಮಾನಕ್ಕೆ ಬರಲಾಗಿದೆ.
 
ಭಾನುವಾರ ಸಂಜೆ 4 ಗಂಟೆ ಸುಮಾ ರಿಗೆ ವಿಧಾನ ಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ ಧರಣಿ ಸ್ಥಳಕ್ಕೆ ಭೇಟಿ ನೀಡಿ, ‘ಕಾಲುವೆಗಳ ಕೊನೆ ಭಾಗದವರೆಗೆ ನೀರು ಹರಿಸುವ ಸಂಬಂಧ ತುಂಗಭದ್ರಾ ಯೋಜನೆ ಅಧಿಕಾರಿಗಳೊಂದಿಗೆ ಚರ್ಚಿ ನಡೆಸಿದ್ದೇನೆ. ಸಚಿವ ಸಂತೋಷ ಲಾಡ್‌ ಅವರು ದೂರವಾಣಿ ಕರೆ ಮಾಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಂದಿ ನಿಂದಲೇ ಕಾಲುವೆ ಕೊನೆ ತನಕ ನೀರು ತಲುಪಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ. ಹಾಗಾಗಿ, ಧರಣಿ ಕೈಬಿಡಬೇಕು’ ಎಂದು ಕೋರಿದರು. ಅವರ ಭರವಸೆಗೆ ಸ್ಪಂದಿಸಿ ರೈತರು ಧರಣಿಯನ್ನು ಕೈಬಿಟ್ಟರು.
 
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿ ಕ್ರಿಯಿಸಿರುವ ರೈತರ ಸಂಘದ ಅಧ್ಯಕ್ಷ ಗೋಸಲ ಭರಮಪ್ಪ, ‘ಕುಡಿಯಲು, ಬೆಳೆಗಳಿಗೆ ಹಾಗೂ ಜಾನುವಾರುಗಳಿಗೆ ಅಗತ್ಯವಿರುವಷ್ಟು ನೀರು ಹರಿಸಲಾಗು ವುದು ಎಂದು ಭರವಸೆ ಕೊಟ್ಟಿದ್ದಾರೆ. ನೀರಾವರಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲೇ ಕೊಂಡಯ್ಯನವರು ವಿಷಯ ತಿಳಿಸಿದ್ದಾರೆ. ಆದಕಾರಣ ಧರಣಿ ಕೈಬಿಟ್ಟಿದ್ದೇವೆ’ ಎಂದರು.
 
‘ಒಟ್ಟು 63 ಮೋರಿಗಳ ಪೈಕಿ 43ಕ್ಕೆ ನೀರು ತಲುಪಿದೆ. ಇನ್ನುಳಿದ 20 ಮೋರಿ ಗಳಿಗೆ ನೀರು ತಲುಪಿಸಲಾಗುವುದು. ಇದಕ್ಕಾಗಿ ಪೊಲೀಸರ ನೆರವಿನೊಂದಿಗೆ ಮೇಲ್ಭಾಗದ ಮೋರಿಗಳನ್ನು ಮುಚ್ಚಿಸ ಲಾಗುವುದು. ಸಚಿವ ಸಂತೋಷ ಲಾಡ್‌ ಅವರ ಸೂಚನೆ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಮುನಿರಾ ಬಾದ್‌ನ ತುಂಗಭದ್ರಾ ಯೋಜನೆ ಸೂಪ ರಿಂಟೆಂಡೆಂಟ್‌ ಎಂಜಿನಿಯರ್‌ ಭೋಜ್ಯ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.