ADVERTISEMENT

ಪ್ಲಾಸ್ಟಿಕ್‌ ಬಳಕೆ ನಿಷೇಧ: ಕಾನೂನು ಮೀರಿದರೆ ಕ್ರಮ

​ಪ್ರಜಾವಾಣಿ ವಾರ್ತೆ
Published 24 ಮೇ 2017, 10:15 IST
Last Updated 24 ಮೇ 2017, 10:15 IST

ಹೊಸಪೇಟೆ: ‘ಜೂನ್‌ 1ರಿಂದ ಯಾರೂ ಕೂಡ ಕೆಲ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸುವಂತಿಲ್ಲ. ಒಂದುವೇಳೆ ಯಾರಾ ದರೂ ಉಪಯೋಗಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗು ವುದು’ ಎಂದು ಉಪವಿಭಾಗಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಎಚ್ಚರಿಕೆ ನೀಡಿದರು.

ಮಂಗಳವಾರ ಸಂಜೆ ಇಲ್ಲಿನ ನಗರಸಭೆಯಲ್ಲಿ ತಾಲ್ಲೂಕು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಪ್ಲಾಸ್ಟಿಕ್‌ ವಸ್ತುಗಳನ್ನು ತಯಾರಿಸುವ ಮಾಲೀಕರ ಸಭೆಯಲ್ಲಿ ಹೇಳಿದರು.

‘2016 ಮಾರ್ಚ್‌ 11ರಿಂದ ರಾಜ್ಯದಾದ್ಯಂತ ಕೆಲವು ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಮೇಲೆ ಸರ್ಕಾರ ನಿಷೇಧ ಹೇರಿ ಆದೇಶ ಹೊರಡಿಸಿದೆ. 1986ರ ಪರಿಸರ ಸಂರಕ್ಷಣೆ ಕಾಯ್ದೆ ಪ್ರಕಾರ ಯಾರೂ ಕೂಡ ಪ್ಲಾಸ್ಟಿಕ್‌ ಬಳಸು ವಂತಿಲ್ಲ. ಮೇ 31ರ ನಂತರ ಯಾರೂ ಪ್ಲಾಸ್ಟಿಕ್‌ ಕೂಡ ಪ್ಲಾಸ್ಟಿಕ್‌ ಬ್ಯಾಗ್‌, ಕ್ಯಾರಿಯರ್‌ ಬ್ಯಾಗ್‌, ಪೋಸ್ಟರ್‌, ಟೇಬಲ್‌ ಕವರ್‌, ಪ್ಲಾಸ್ಟಿಕ್‌ ಧ್ವಜ, ಪ್ಲಾಸ್ಟಿಕ್‌ ಥರ್ಮಾಕೋಲ್‌ ಬಳಸುವಂತಿಲ್ಲ. 

ADVERTISEMENT

ಎಲ್ಲರೂ ಕಡ್ಡಾಯವಾಗಿ ಬಟ್ಟೆ ಯಿಂದ ತಯಾರಿಸಿದ ವಸ್ತುಗಳನ್ನು ಉಪ ಯೋಗಿಸಬೇಕು’ ಎಂದು ಸೂಚಿಸಿ ದರು. ‘ತಾಲ್ಲೂಕಿನಲ್ಲಿರುವ ಎಲ್ಲ ಪ್ಲಾಸ್ಟಿಕ್‌ ಫ್ಲೆಕ್ಸ್‌, ಬ್ಯಾನರ್‌ ಮಾಲೀಕರು ತಪ್ಪದೇ ನಿಯಮ ಪಾಲಿಸಬೇಕು. ಜನ ಕೂಡ ಅಷ್ಟೇ. ನಿಷೇಧಿತ ವಸ್ತುಗಳನ್ನು ಉಪಯೋಗಿ ಸಬಾರದು.

ಜಿಲ್ಲಾಧಿಕಾರಿ ಯವರ ಆದೇಶದ ಮೇರೆಗೆ ಜಿಲ್ಲೆಯಾ ದ್ಯಂತ ಈ ಕ್ರಮ ಕೈಗೊಳ್ಳಲಾಗುತ್ತಿದೆ. ನೇರವಾಗಿ ಆದೇಶ ಹೊರಡಿಸಬಹು ದಿತ್ತು. ಆದರೆ, ಸಾರ್ವಜನಿಕರ ಹಿತದೃಷ್ಟಿ ಯಿಂದ ಸಭೆ ಕರೆದು ತಿಳಿಸಲಾಗುತ್ತಿದೆ. ಇಷ್ಟಾದರೂ ಕೂಡ ಯಾರಾದರೂ ಕಾನೂನು ಮೀರಿದರೆ ಅಂತಹವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದು’ ಎಂದು ಎಚ್ಚರಿಕೆ ನೀಡಿದರು. ನಗರಸಭೆ ಅಧ್ಯಕ್ಷ ಅಬ್ದುಲ್‌ ಖದೀರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.