ADVERTISEMENT

ಮಳೆಗಾಗಿ ಹೋಮ: ಸಚಿವ ಲಾಡ್‌ ಭಾಗಿ

ಕಂಪ್ಲಿಯ ತ್ರ್ಯಂಬಕೇಶ್ವರ ದೇಗುಲದಲ್ಲಿ ಸಂಭ್ರಮದ ಚಾಂಗದೇವ ಪೂಜಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 7:25 IST
Last Updated 20 ಮಾರ್ಚ್ 2017, 7:25 IST

ಕಂಪ್ಲಿ: ಅಖಿಲ ಭಾರತೀಯ ವಿಶ್ವಕರ್ಮ ಮಹಾಸಭಾ ಬಳ್ಳಾರಿ ಜಿಲ್ಲಾ ಘಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಘಟಕದಿಂದ ಇಲ್ಲಿಯ ಎಂ.ಡಿ ಕ್ಯಾಂಪ್‌ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಶನಿವಾರ ವಿಶ್ವಕರ್ಮ ಸಮಾಜದ ರಾಜಾ ಭಾಘ ಸವಾರ ಚಾಂಗದೇವ (ಯಮ ನೂರಪ್ಪ) ಪೂಜಾ ಮಹೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮ  ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆದವು.

ನಂತರ ನಡೆದ ಸಮಾರಂಭದಲ್ಲಿ ಅಖಿಲ ಭಾರತೀಯ ವಿಶ್ವಕರ್ಮ ಮಹಾಸಭಾ ಬಳ್ಳಾರಿ ಜಿಲ್ಲಾ ಅಧ್ಯಕ್ಷ, ರಾಜ್ಯ ಸಂಚಾಲಕ ಎಂ. ಮಂಜುನಾಥ ಮಾತನಾಡಿ, ಮರಾಠಿ ಭಾಷೆಯಲ್ಲಿ ಚಾಂಗದೇವನು ‘ಚಾಂಗದೇವ ಪಾಸಷ್ಟಿ’ ಎನ್ನುವ ತತ್ವಸಾರ ಕಾವ್ಯದಲ್ಲಿ 1036 ಪದ್ಯಗಳನ್ನು ರಚಿಸುವ ಮೂಲಕ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದರು.

ವಿಶ್ವಕರ್ಮ ಸಮುದಾಯದ ಕಲ್ಯಾಣ ಅಭಿವೃದ್ಧಿಗೆ ನೆರೆಯ ತೆಲಂಗಾಣ ರಾಜ್ಯ ದಲ್ಲಿ ₹ 200ಕೋಟಿ ಮೀಸಲಿಟ್ಟಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ವಿಶ್ವಕರ್ಮ ಸಮುದಾಯಕ್ಕೆ ₹ 25ಕೋಟಿ ಮೀಸಲಿಟ್ಟಿ ರುವ ಕುರಿತು ಕುಂಜನೂರು ಮಂಜು ನಾಥ ಆಚಾರ್ ಅಸಮಾಧಾನ ವ್ಯಕ್ತಪಡಿಸಿದರು.

ತ್ರ್ಯಂಬಕೇಶ್ವರ ದೇವಸ್ಥಾನ ಧರ್ಮ ಕರ್ತ ಸಣಾಪುರ ತಾತ, ಕಾಳಿಕಾ ದೇವಸ್ಥಾನದ ಅರ್ಚಕ ವೈ. ಷಣ್ಮುಖಾ ಚಾರ್, ವೈದ್ಯಂ ಜಂಬುನಾಥ ಆಚಾರ್, ಕೊಮಾರೆಮ್ಮ, ಹೇಮಾ, ನಾಗೇಂದ್ರ, ಸುಧಾಕರಚಾರ್, ಗಣೇಶಾಚಾರ್, ಶ್ರೀಧರ ಪುರೋಹಿತ್, ಮಹಾಸಭಾದ ಪದಾಧಿಕಾರಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸುದರ್ಶನ ಹೋಮ ಆಯೋಜನೆ
ಬಳ್ಳಾರಿ:
ಬರಗಾಲ ನಿವಾರಣೆಗಾಗಿ ಹಾಗೂ ಮಳೆಗಾಗಿ ಪ್ರಾರ್ಥಿಸಿ ನಗರದ ಸತ್ಯನಾರಾಯಣ ಪೇಟೆಯ ಸುಶಮೀಂದ್ರ ತೀರ್ಥ ಕಲ್ಯಾಣ ಮಂಟಪ ಆವರಣದಲ್ಲಿ ಶನಿವಾರ ನಡೆದ ಮಹಾ ಸುದರ್ಶನ ಹೋಮ ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಪಾಲ್ಗೊಂಡಿದ್ದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಉಪವಿಭಾಗಾಧಿಕಾರಿ ಪಿ.ಎನ್. ಲೋಕೇಶ, ವೇಣುಗೋಪಾಲ, ಅಶೋಕ ಕುಲಕರ್ಣಿ, ಸಂಜೀವ ಪ್ರಸಾದ, ರವಿಶಂಕರ, ವೀರೇಶ, ಶಿಲ್ಪಾ, ಜಡೇಶ, ಶ್ರೀನಿವಾಸ, ವಿಜಯ ವಿಠಲ, ಡಿ.ಗಿರಿ, ಸತೀಶ, ಶ್ರೀನಿವಾಸ ಹುನುಗುಂದ ಇದ್ದರು.  ಅರ್ಚಕ ಗುರುರಾಜ ಕುಲಕರ್ಣಿ ನೇತೃತ್ವದಲ್ಲಿ ಹೋಮ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.