ADVERTISEMENT

ಮೆಣಸಿನಕಾಯಿ ಧಾರಣೆ ಕುಸಿತ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 6:39 IST
Last Updated 23 ಏಪ್ರಿಲ್ 2017, 6:39 IST

ಕಂಪ್ಲಿ:  ಮುಂಗಾರು ಹಂಗಾಮಿನ  ಒಣ ಮೆಣಸಿನಕಾಯಿಗೆ  ಸೂಕ್ತ ಧಾರಣಿ ಇಲ್ಲದೆ ರೈತರು ಕಂಗಾಲಾಗಿದ್ದಾರೆ.ತುಂಗಭದ್ರಾ ಕಾಲುವೆಗೆ ನೀರು ಸ್ಥಗಿತಗೊಳಿಸಿದ್ದರಿಂದ ಕೆಲ ರೈತರು ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಹಾಯಿಸಿದ್ದರು. ನಂತರ ಎಕರೆಗೆ ಕೇವಲ 10ರಿಂದ 12 ಕ್ವಿಂಟಲ್ ಮೆಣಸಿನಕಾಯಿ ಇಳುವರಿ ಮಾತ್ರ ದೊರಕಿತು. ಈಗ ಗಾಯದ ಮೇಲೆ ಬರೆ ಎಳೆದಂತೆ  ದರ ಪಾತಾಳಕ್ಕೆ ಕುಸಿದಿದೆ.

‘ಕಳೆದ ವರ್ಷ ಕ್ವಿಂಟಲ್‌ಗೆ ₹ 12 ಸಾವಿರ ಇತ್ತು. ಈಗ ₹ 3.5 ಸಾವಿರಕ್ಕೆ ಇಳಿದಿದೆ’ ಎಂದು ನೋವು ತೋಡಿಕೊಂಡರು   ಶ್ರೀರಾಮರಂಗಾಪುರ, ಸುಗ್ಗೇನಹಳ್ಳಿ, ಮಾವಿನಹಳ್ಳಿ, ಜೀರಿಗನೂರು ರೈತರು.ಇನ್ನೊಂದೆಡೆ ಕೆಲ ರೈತರು ಬಳ್ಳಾರಿ, ಬ್ಯಾಡಗಿ, ಚಳ್ಳಕೆರೆ, ಪಾವಗಡ, ಆಂಧ್ರಪ್ರದೇಶದ ಹಿಂದುಪುರ, ಮದನಪಲ್ಲಿ, ಮಡಕಶಿರ ಪಟ್ಟಣಗಳ ಶಿಥಿಲೀಕರಣ ಘಟಕಗಳಲ್ಲಿ ದಾಸ್ತಾನು ಮಾಡಿದ್ದಾರೆ.

‘ಆಂಧ್ರಪ್ರದೇಶ ಸರ್ಕಾರ ಬೆಂಬಲ ಬೆಲೆ ನೀಡಿದೆ. ತೆಲಂಗಾಣ ರಾಜ್ಯವು ರೈತರ ಸಾಲ ಮನ್ನಾ ಮಾಡಿದೆ. ಇಲ್ಲಿನ ಸರ್ಕಾರವು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು’ ಎಂದು ಶ್ರೀರಾಮರಂಗಾಪುರದ  ಬೆಳೆಗಾರರಾದ ಚಿನ್ನ ಹನುಮಂತ, ಆರ್.ಸುಬ್ಬಯ್ಯ, ನಾರಾಯಣಸ್ವಾಮಿ, ಟಿ.ಶ್ರೀನಿವಾಸುಲು, ಯರಿಸ್ವಾಮಿ, ಲಕ್ಷ್ಮಯ್ಯ, ಕಿಶೋರ್  ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.