ADVERTISEMENT

ವಿಜೃಂಭಣೆಯ ವೆಂಕಟೇಶ್ವರ ರಥೋತ್ಸವ

ಹಗರಿಬೊಮ್ಮನಹಳ್ಳಿಯಲ್ಲಿ 60ನೇ ವರ್ಷದ ಸಂಭ್ರಮಾಚರಣೆ; ಭಕ್ತರ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:13 IST
Last Updated 2 ಫೆಬ್ರುವರಿ 2017, 6:13 IST
ವಿಜೃಂಭಣೆಯ ವೆಂಕಟೇಶ್ವರ ರಥೋತ್ಸವ
ವಿಜೃಂಭಣೆಯ ವೆಂಕಟೇಶ್ವರ ರಥೋತ್ಸವ   

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಶ್ರೀ ವೆಂಕಟೇಶ್ವರ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವದಲ್ಲಿ ಮಹಾರಾಷ್ಟ್ರ, ದಾವಣಗೆರೆ, ಬಳ್ಳಾರಿ, ಹರಪನಹಳ್ಳಿ, ಹೊಸಪೇಟೆ, ಮರಿಯಮ್ಮನಹಳ್ಳಿ ಮತ್ತು ತಾಲ್ಲೂಕಿನ ಚಿಂತ್ರಪಳ್ಳಿ, ಕಡ್ಲಬಾಳು, ಮರಬ್ಬಿಹಾಳು, ಹಂಪಾಪಟ್ಟಣ, ಉಪ ನಾಯಕನಹಳ್ಳಿ, ತಂಬ್ರಹಳ್ಳಿ, ಹಂಪ ಸಾಗರ, ನಾರಾಯಣ ದೇವರಕೆರೆ ಸೇರಿ ದಂತೆ ಐವತ್ತಕ್ಕೂ ಹೆಚ್ಚು ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ರಥವನ್ನು ಎಳೆದು ಉತ್ಸವ ಮೂರ್ತಿಗೆ ನಮಸ್ಕರಿಸಿ ‘ಗೋವಿಂದಾ ಗೋವಿಂದಾ’ ಎನ್ನುತ್ತಾ ಭಾವಪರವಶರಾದರು.

ರಾಮನಗರದ ವೆಂಕಟೇಶ್ವರ ದೇವ ಸ್ಥಾನದಿಂದ ಆಂಜನೇಯನ ಪಾದಗಟ್ಟೆ ಯವರೆಗೂ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ರಥ ಮತ್ತೇ ತನ್ನ ಮೂಲ ಸ್ಥಾನದಲ್ಲಿ  ನಿಲ್ಲುವ ವರೆಗೂ ಜೈಕಾರ ಹಾಕಿದರು. ರಥಕ್ಕೆ ಬಾಳೆ ಹಣ್ಣು ಎಸೆದು ನಮಿಸಿ ಭಕ್ತಿ ಭಾವ ಮೆರೆದರು. ರಥದ ಗಾಲಿಗಳಿಗೆ ತೆಂಗಿನ ಕಾಯಿ ಒಡೆಯುವ ಮೂಲಕ ಅನೇಕರು ತಮ್ಮ ಹರಕೆಯನ್ನು ತೀರಿಸಿದರು. ರಥೋತ್ಸವ ಕಣ್ತುಂಬಿಕೊಳ್ಳಲು ಎತ್ತಿನ ಬಂಡಿಗಳಲ್ಲಿ ಸಮೀಪದ ಗ್ರಾಮಗಳಿಂದ ಪುರುಷರು, ಮಹಿಳೆಯರು, ಮಕ್ಕಳು ಬಂದಿದ್ದು ವಿಶೇಷವಾಗಿತ್ತು.

ಏಳು ದಿನಗಳಿಂದ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸ ಲಾಯಿತು. ರಥ ಚಲಿಸುವಾಗ ಅವಘಡ ಗಳು ನಡೆಯದಂತೆ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು. ಶಾಸಕ ಎಸ್. ಭೀಮಾನಾಯ್ಕ, ಗಂಗಾವತಿ ವೆಂಕೋಬಣ್ಣ ಶ್ರೇಷ್ಠಿ ಧರ್ಮಸಂಸ್ಥೆಯ ಟ್ರಸ್ಟೀ ಗಂಗಾವತಿ ವಿಜಯಕುಮಾರ್, ದೇವಸ್ಥಾನ ಧರ್ಮಕರ್ತ ನಾಣ್ಯಾಪುರ ಕೃಷ್ಣಮೂರ್ತಿ, ರಾಮನಗರ, ರೈತರ ಓಣಿಯ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.