ADVERTISEMENT

ಸಂತ್ರಸ್ತರಿಗೆ ಪುನರ್ವಸತಿಯ ಭರವಸೆ

​ಪ್ರಜಾವಾಣಿ ವಾರ್ತೆ
Published 28 ಮೇ 2017, 10:59 IST
Last Updated 28 ಮೇ 2017, 10:59 IST

ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮ್‌ ರಹೀಂ ನಗರದಲ್ಲಿ ನಡೆದ ಬೆಂಕಿ ಅವ ಘಡದಲ್ಲಿ ಸಂತ್ರಸ್ತರಾದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಪುರಸಭೆ ವತಿ ಯಿಂದ ಶೀಘ್ರ ವಸತಿ ಸೌಲಭ್ಯ ಕಲ್ಪಿಸಲಾ ಗುವುದು ಎಂದು ಶಾಸಕ ಎಸ್.ಭೀಮಾ ನಾಯ್ಕ ಭರವಸೆ ನೀಡಿದರು.

ನಗರದಲ್ಲಿ ಬೆಂಕಿ ಆಕಸ್ಮಿಕದಿಂದಾಗಿ ಬೆಂಕಿಗೆ ಆಹುತಿಯಾಗಿದ್ದ 28 ಗುಡಿಸಲು ಗಳ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ವಿತರಿಸಿ ಶುಕ್ರವಾರ ಮಾತನಾಡಿದರು. ಎಸ್ಸಿ/ಎಸ್ಟಿ ಹೊರತು ಪಡಿಸಿ ಇತರೆ ಸಮುದಾಯದ ಸಂತ್ರಸ್ತರಿಗೆ ವಸತಿ ಸೌಲಭ್ಯ ಕಲ್ಪಿಸಲು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಅವರ ಜತೆ  ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ಯೋಜನೆ ಅಡಿ ವಸತಿ ಸೌಲಭ್ಯ ಕಲ್ಪಿಸಲು ಉಪವಿಭಾಗ ಅಧಿಕಾರಿಯೊಂದಿಗೆ ಮಾತುಕತೆ ನಡೆಸಲಾಗುವುದು. ಸಂತ್ರಸ್ತರಿಗೆ ನಿವೇಶನ ವಿತ ರಣೆಗಾಗಿ ಸರ್ಕಾರಿ ಜಮೀನು ಗುರುತಿಸು ವಂತೆ ತಹಶೀಲ್ದಾರ್ ಆನಂದಪ್ಪ ನಾಯಕ, ಪುರಸಭೆ ಸಿ.ಒ ಪ್ರಕಾಶ್ ಚನ್ನಪ್ಪನವರ್‌ ಅವರಿಗೆ ಸೂಚಿಸಿದರು.

ADVERTISEMENT

ಸಂತ್ರಸ್ತರಿಗೆ ತಲಾ 25 ಕೆ.ಜಿ.ಅಕ್ಕಿ, ಅಡುಗೆ ಎಣ್ಣೆ ಮತ್ತು ₹ 2 ಸಾವಿರ ನಗದು ವಿತರಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಮಲ್ಲಾ ನಾಯ್ಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಕ್ಕಿ ತೋಟೇಶ್, ಪುರಸಭೆ ಅಧ್ಯಕ್ಷ ಜೋಗಿ ಹನುಮಂತಪ್ಪ, ಉಪಾ ಧ್ಯಕ್ಷೆ ಬಲ್ಲಾಹುಣ್ಸಿ ಹುಲಿಗೆಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಬುವಲಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಾಲಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷೆ ಮಲ್ಲಿಕಾ ರ್ಜುನ ಹೂಗಾರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಹನುಮಂತಪ್ಪ, ಮುಖಂಡ ಬಲ್ಲಾಹುಣ್ಸಿ ರಾಮಣ್ಣ, ಅರಸೀ ಕೆರೆ ಹನುಮಂತಪ್ಪ, ಮುಖಂಡರಾದ ಹಾಲ್ದಾಳ್ ವಿಜಯಕುಮಾರ್‌, ಅಂಕ ಸಮುದ್ರ ಕಲ್ಲೇಶ್, ಸೋಗಿ ಕೊಟ್ರೇಶ್ ಹಾಗೂ ಅವಘಡದಲ್ಲಿ ಹಾನಿಗೊಳಗಾದ ಕುಟುಂಬದ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.