ADVERTISEMENT

ಸಂಭ್ರಮದ ವಾಸವಿ ಜಯಂತ್ಯುತ್ಸವ

ಸಂಭ್ರಮದ ವಾಸವಿ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 8:47 IST
Last Updated 26 ಏಪ್ರಿಲ್ 2018, 8:47 IST

ಕಂಪ್ಲಿ: ಇಲ್ಲಿಯ ವಾಸವಿ ಕಲ್ಯಾಣಮಂಟಪದಲ್ಲಿ ಬುಧವಾರ ವಾಸವಿ ಜಯಂತ್ಯುತ್ಸವ  ನಡೆಯಿತು.

ಪಟ್ಟಣದ ಆರಾಧ್ಯ ದೈವ ಪೇಟೆ ಬಸವೇಶ್ವರ ದೇಗುಲದಿಂದ ನಗರೇಶ್ವರ ದೇವಸ್ಥಾನದವರೆಗೆ ಕನ್ಯಕಾಪರಮೇಶ್ವರಿ ಅಮ್ಮನವರ ಗಂಗೆ (ಕಳಸ) ಮೆರವಣಿಗೆ ನಂತರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಜಯಂತ್ಯುತ್ಸವ ನಿಮಿತ್ತ ಕನ್ಯಕಾ ಪರಮೇಶ್ವರಿ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.

ನಂತರ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ ಜಯಂತ್ಯುತ್ಸವದಲ್ಲಿ ಪ್ರತಿಭಾ ಪುರಸ್ಕಾರ, ವಿವಿಧ ಸ್ಪರ್ಧೆಗಳಲ್ಲಿ ವಿಜೇತ‌ರಿಗೆ ಬಹುಮಾನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಕರ್ನಾಟಕ ಆರ್ಯವೈಶ್ಯ ಮಹಾಮಂಡಳಿ ರಾಜ್ಯ ಸಂಘಟನಾ ಕಾರ್ಯದರ್ಶಿ ಡಿ.ವಿ. ಸತ್ಯನಾರಾಯಣ ಸಂಘಟನೆ ಕುರಿತು ಮಾತನಾಡಿದರು. ಆರ್ಯವೈಶ್ಯ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಡಿ.ವಿ. ಸುಬ್ಬಾರಾವ್, ಕರ್ನಾಟಕ ಆರ್ಯವೈಶ್ಯ ಮಹಾಸಭೆ ನಿರ್ದೇಶಕ ಜಿ. ರಾಜಾರಾವು, ಕೋಶಾಧ್ಯಕ್ಷ ಜಿ.ಬಿ. ಕೋಟೇಶ್ವರ್,  ಪ್ರಮುಖರಾದ ಶ್ರೀನಿವಾಸ ಕೆ. ರಾಜೇಂದ್ರ,  ಡಿ.ಗುರುಕೃಷ್ಣ, ಬಿ. ಚನ್ನಲಕ್ಷ್ಮಿ ಸುಬ್ಬಾರಾವ್,  ಡಿ. ಶ್ರೀಧರಶ್ರೇಷ್ಠಿ,  ವೈ. ಮಂಜುನಾಥ ಶ್ರೇಷ್ಠಿ  ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.