ADVERTISEMENT

ಸಾಧನೆ ಮೆರೆದ ಪತ್ರಿಕೆ ಹಂಚುವ ಬಾಲಕ

​ಪ್ರಜಾವಾಣಿ ವಾರ್ತೆ
Published 15 ಮೇ 2017, 7:22 IST
Last Updated 15 ಮೇ 2017, 7:22 IST

ಹೂವಿನಹಡಗಲಿ: ತನ್ನ ವಿದ್ಯಾಭ್ಯಾಸದ ಖರ್ಚಿಗಾಗಿ ದಿನಂಪ್ರತಿ ಮನೆ ಮನೆಗೆ ಪತ್ರಿಕೆ ಹಂಚುತ್ತಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ ಪಟ್ಟಣದ ಪ್ರತಿಭಾವಂತ ವಿದ್ಯಾರ್ಥಿ ಹರೀಶ್ ವಾಲಿ.

ಪಟ್ಟಣದ ತುಂಗಭದ್ರಾ ಪ್ರೌಢಶಾಲೆ ಯಲ್ಲಿ ವಿದ್ಯಾಭ್ಯಾಸ ಮಾಡಿರುವ ಹರೀಶ್, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 591 ಅಂಕ ಪಡೆದು ಶಾಲೆಯ ಮುಂಚೂಣಿ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ. ಕನ್ನಡ ಕನ್ನಡ 117, ಇಂಗ್ಲೀಷ್ 91, ಹಿಂದಿ 94, ಗಣಿತ 94, ವಿಜ್ಞಾನ 96, ಸಮಾಜ 99 ಅಂಕಗಳನ್ನು ಗಳಿಸಿದ್ದಾನೆ.

ಪ್ರತಿದಿನ ಬೆಳಗಿನ ಜಾವ 4.30ಕ್ಕೆ ಆರಂಭವಾಗುವ ಹರೀಶನ ದಿನಚರಿ, ರಾತ್ರಿ 10.30ರವರೆಗೆ ವಿವಿಧ ಕೆಲಸ ಗಳಲ್ಲಿ ಪರಿಶ್ರಮದಿಂದ ತೊಡಗುತ್ತಾರೆ. ಬೆಳಗ್ಗೆ ಪತ್ರಿಕೆ ಹಂಚುವ ಕಾಯಕ ಮುಗಿಯುತ್ತಿದ್ದಂತೆ ಕೆಲಕಾಲ ಪುಸ್ತಕ ಕಣ್ಣಾಡಿಸುತ್ತಾರೆ.

ADVERTISEMENT

ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಿ ಶಿಕ್ಷಕರ ಪಾಠಗಳನ್ನು ಏಕಗ್ರಾತೆಯಿಂದ ಆಲಿಸುತ್ತಾರೆ. ಶಾಲೆ ಮುಗಿದೊಡನೆ ಮನೆಗೆ ಬಂದು ತಾಯಿಯ ರೊಟ್ಟಿ ತಯಾರಿಕೆ ಉದ್ಯಮಕ್ಕೆ ನೆರವಾಗುತ್ತಾರೆ. ಎಷ್ಟೇ ಒತ್ತಡ ಇದ್ದರೂ ಸಮಯ ಹೊಂದಿಸಿಕೊಂಡು ಶಿಕ್ಷಕರು ನೀಡುವ ಹೋಮ್ ವರ್ಕ್‌ನ್ನು ಚಾಚೂ ತಪ್ಪದೇ ಮಾಡಿ ಮುಗಿಸುತ್ತಾರೆ.

ಹರೀಶನ ತಂದೆ ವಾಲಿ ಕೊಟ್ರೇಶ್ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡು ತ್ತಿದ್ದು, ತಾಯಿ ಶಶಿಕಲಾ ರೊಟ್ಟಿ ತಯಾ ರಿಸಿ ಮಾರಾಟ ಮಾಡಿ ಜೀವನ ನಿರ್ವ ಹಣೆ ಮಾಡುತ್ತಿದ್ದಾರೆ. ಮನೆಯಲ್ಲಿ ಬಡ ತನ ಇರುವ ಕಾರಣ ಕಳೆದ 5 ವರ್ಷಗಳಿಂದ ಪತ್ರಿಕೆ ಹಂಚುತ್ತಾ ತನ್ನ ಶಿಕ್ಷಣದ ಖರ್ಚು ವೆಚ್ಚಗಳನ್ನು ತಾನೇ ಹೊಂದಿಸಿಕೊಂಡು ಹೆತ್ತವರಿಗೂ ಆಸರೆ ಆಗುತ್ತಿರುವ ಹರೀಶ್, ಪರಿಶ್ರಮದಿಂದ ಓದಿ ಗರಿಷ್ಠ ಅಂಕ ಪಡೆಯುವ ಮೂಲಕ ಇತರೆ ವಿದ್ಯಾರ್ಥಿಗಳಿಗೆ ಮಾದರಿ.

‘ಪತ್ರಿಕೆ ಹಂಚುವ ಮತ್ತು ಮನೆ ಕೆಲ ಸದ ನಡುವೆ ಸಮಯ ಹೊಂದಿಸಿ ಕೊಂಡು ಓದುತ್ತಿದ್ದೆ. ಎಲ್ಲ ಶಿಕ್ಷಕರ ಮಾರ್ಗ ದರ್ಶನ, ತಂದೆತಾಯಿಯ ಪ್ರೋತ್ಸಾಹ ದಿಂದ ಗರಿಷ್ಠ ಅಂಕ ಪಡೆಯಲು ಸಾಧ್ಯವಾಯಿತು. ವಿಜ್ಞಾನ ನನ್ನ ಆಸಕ್ತಿಯ ವಿಷಯವಾಗಿರುವುದರಿಂದ ವಿಜ್ಞಾನ ವಿಭಾಗಕ್ಕೆ ಸೇರಲು ನಿರ್ಧರಿಸಿದ್ದೇನೆ. ಪಿಯುಸಿಯಲ್ಲೂ ಗರಿಷ್ಠ ಅಂಗ ಕಳಿಸುವುದು ನನ್ನ ಗುರಿ’ ಎಂದು ಹರೀಶ್ ಹೇಳಿದರು.

‘ಶ್ರದ್ಧೆ, ಪರಿಶ್ರಮದ ಓದು ಹರೀಶ್ ವಾಲಿಗೆ ಯಶಸ್ಸು ತಂದುಕೊಟ್ಟಿದೆ. ಶಾಲೆಯ 12 ವರ್ಷಗಳ ಫಲಿತಾಂಶದಲ್ಲಿ ಈತನ ಗರಿಷ್ಠ ಅಂಕ ದಾಖಲೆಯಾಗಿದೆ. ‘ಆದರ್ಶ ವಿದ್ಯಾರ್ಥಿ’ ಪ್ರಶಸ್ತಿ ಪಡೆದಿದ್ದ ಹರೀಶ್ ಎಲ್ಲರಿಗೂ ಆದರ್ಶವಾಗಿದ್ದಾನೆ’ ಎಂದು ಮುಖ್ಯಶಿಕ್ಷಕ ಸುರೇಶ್ ಅಂಗಡಿ ಪ್ರಶಂಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.