ADVERTISEMENT

ಹೂಳು ತೆರವಿಗೆ 50 ವರ್ಷ ಬೇಕು!

​ಪ್ರಜಾವಾಣಿ ವಾರ್ತೆ
Published 28 ಮೇ 2017, 11:03 IST
Last Updated 28 ಮೇ 2017, 11:03 IST

ಹೊಸಪೇಟೆ: ತುಂಗಭದ್ರಾ ಜಲಾಶಯದ ಪ್ರದೇಶದಲ್ಲಿ ವಿವಿಧ ರೈತ ಸಂಘಟನೆಗಳು ಕೈಗೊಂಡಿರುವ ಹೂಳು ತೆರವು ಕಾರ್ಯ ಇದೇ ವೇಗದಲ್ಲಿ ನಡೆದರೆ ಸುಮಾರು 50ವರ್ಷ ಬೇಕಾಗಬಹುದು ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಡಿ.ರಂಗಾರೆಡ್ಡಿ ಪ್ರತಿಪಾದಿಸಿದರು.

ಅವರು ಸಮೀಪದ ತುಂಗಭದ್ರಾ ಮಂಡಳಿಯ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 600 ಟ್ರಕ್‌ಗಳಲ್ಲಿ ಸತತ ಆರು ತಿಂಗಳು ಹೂಳು ತೆರವುಗೊಂಡಲ್ಲಿ ಕೇವಲ ಒಂದು ಟಿಎಂಸಿ ಅಡಿಯಷ್ಟು ಹೂಳು ಮಾತ್ರ ಖಾಲಿ ಆಗುತ್ತದೆ. ಈಗ ಒಂಭತ್ತು ದಿನಗಳಲ್ಲಿ 0.000144ಟಿಎಂಸಿ ಅಡಿ ಹೂಳು ಮಾತ್ರ ಹೊರ ತೆಗೆಯಲಾಗಿದೆ. ಜಲಾಶ ಯದ ಸಾಮರ್ಥ್ಯ 105.713 ಟಿಎಂಸಿ ಇದೆ. ಒಂದು ಟಿಎಂಸಿ ಅಡಿ ಹೂಳು ತೆಗೆಯಲು ಅಂದಾಜು ₹ 300 ಕೋಟಿ ವ್ಯಯವಾಗುತ್ತದೆ ಎಂದರು.

ನೈಸರ್ಗಿಕ ವಿದ್ಯಾಮಾನದ ಪ್ರಕಾರ ಜಲಾಶಯಗಳಲ್ಲಿ ಹೂಳಿನ ಸಂಚಯವು ಆರಂಭಿಕ ವರ್ಷಗಳಲ್ಲಿ ಹೆಚ್ಚಾಗಿರುತ್ತದೆ. ನಂತರದಲ್ಲಿ ನೀರು ಹರಿಯುವ ಜಲಾನಯನ ಪ್ರದೇಶದಲ್ಲಿ ಹೂಳಿನ ಪ್ರಮಾಣ ಸ್ಥಿರವಾಗುತ್ತದೆ. ಕಳೆದ 60 ವರ್ಷಗಳಲ್ಲಿ ಮಂಡಳಿ ಹಲವು ಅಧ್ಯಯನಗಳನ್ನು ನಡೆಸಿದ್ದು, ಹೂಳು ಜಲಾಶಯದ ಸಂಗ್ರಹ ಸಾಮರ್ಥ್ಯದಲ್ಲಿ ಹೆಚ್ಚು ನಷ್ಟವ ನ್ನೇನೂ ಮಾಡಿಲ್ಲ. ಈಚೆಗೆ ಜಲಾಶಯದ ಸಮೀಕ್ಷೆ ನಡೆಸಿದ್ದು, ಎರಡು ರಾಜ್ಯಗಳಿಗೆ ಇಡೀ ವರ್ಷಕ್ಕೆ ಬೇಕಾಗು ವಷ್ಟು ನೀರನ್ನು ಒದಗಿಸುವ ಸಾಮರ್ಥ್ಯ ಇದೆ ಎಂದರು.

ADVERTISEMENT

ಎರಡು ವರ್ಷ ಮಳೆಯ ಅಭಾವ ದಿಂದಾಗಿ ಗರಿಷ್ಠ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿಲ್ಲ, ಆದರೂ ಕೃಷಿಗಾಗಿ ಮತ್ತು ಕುಡಿಯುವ ಸಲುವಾಗಿ ಆಂಧ್ರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳ ವಿವಿಧ ಜಿಲ್ಲೆಗಳಿಗೆ ನೀರು ಒದಗಿಸ ಲಾಗಿದೆ. ಸಕಾಲದಲ್ಲಿ ಮಳೆಯಾದರೆ ನೀರಿನ ಕೊರತೆ ಇರುವುದಿಲ್ಲ ಎಂದರು.

ವಿವಿಧ ರೈತ ಸಂಘಟನೆಗಳ ಮುಖಂಡರು ಜಲಾಶಯದ ಹೂಳನ್ನು ಅವರ ಅಗತ್ಯಕ್ಕಾಗಿ ತೆಗೆಯುತ್ತಿದ್ದಾರೆ. ಅದಕ್ಕೆ ತುಂಗಭದ್ರಾ ಮಂಡಳಿಯ ನಿರ್ದೇಶನ ನೀಡಿಲ್ಲ. ಕಳೆದ ಎರಡು ವರ್ಷಗಳಲ್ಲಿ ವಿವಿಧ ವಾಣಿಜ್ಯ ಉದ್ದೇಶ ಗಳಿಗಾಗಿ ಜಲಾಶಯದ ಮಣ್ಣನ್ನು ಒಂದು ಕ್ಯೂಬಿಕ್ ಮೀಟರ್‌ಗೆ ₹ 60ರಂತೆ ನೀಡಲಾಗಿದೆ.

ಒಟ್ಟು 0.0029 ಟಿಎಂಸಿ ಅಡಿ ಹೂಳು ತೆರವುಗೊಂಡಿದೆ. ಅದರಿ ಂದ ರಾಜಧನ ಮತ್ತು ಮಣ್ಣಿನ ಮಾರಾಟ ದರ ಸೇರಿ ₹ 52.41 ಲಕ್ಷ ಮಂಡಳಿಗೆ ದೊರಕಿದೆ ಎಂದರು.
ಮಂಡಳಿಯ ಅಧೀಕ್ಷಕ ಎಂಜನಿ ಯರ್‌ ಶಶಿಭೂಷಣ್‌, ಕಾರ್ಯಪಾಲಕ ಎಂಜನಿಯರ್‌ ಟಿ.ಲಕ್ಷ್ಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.