ADVERTISEMENT

ಸಂಭ್ರಮದಿಂದ ಕಾರ್ ಹುಣ್ಣಿಮೆ ಆಚರಣೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2018, 12:38 IST
Last Updated 28 ಜೂನ್ 2018, 12:38 IST
ಹೊಸಪೇಟೆ ತಾಲ್ಲೂಕಿನ ವಡ್ಡರಹಳ್ಳಿಯಲ್ಲಿ ರೈತನೊಬ್ಬ ಅಲಂಕರಿಸಿದ ಎತ್ತುಗಳೊಂದಿಗೆ ಹೆಜ್ಜೆ ಹಾಕಿದರು
ಹೊಸಪೇಟೆ ತಾಲ್ಲೂಕಿನ ವಡ್ಡರಹಳ್ಳಿಯಲ್ಲಿ ರೈತನೊಬ್ಬ ಅಲಂಕರಿಸಿದ ಎತ್ತುಗಳೊಂದಿಗೆ ಹೆಜ್ಜೆ ಹಾಕಿದರು   

ಹೊಸಪೇಟೆ: ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಗುರುವಾರ ಕಾರ್‌ ಹುಣ್ಣಿಮೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ರೈತಾಪಿ ಜನ ತಮ್ಮ ಎತ್ತುಗಳಿಗೆ ಸ್ನಾನ ಮಾಡಿಸಿ, ಕೊಡುಗಳಿಗೆ ಬಣ್ಣ ಬಳಿದು, ಗೆಜ್ಜೆ ಕಟ್ಟಿ, ಹೂಗಳಿಂದ ಅಲಂಕರಿಸಿದರು. ಎತ್ತಿನ ಬಂಡಿಗಳನ್ನು ಕೂಡ ಅಲಂಕರಿಸಿ ಪೂಜೆ ಮಾಡಿದರು. ಮಹಿಳೆಯರು ಮಣ್ಣಿನಿಂದ ತಯಾರಿಸಿದ ಎತ್ತುಗಳಿಗೆ ಪೂಜೆ ಸಲ್ಲಿಸಿ, ಆರತಿ ಮಾಡಿದರು.

ಹಬ್ಬಕ್ಕಾಗಿ ತಯಾರಿಸಿದ ವಿಶೇಷ ಖಾದ್ಯಗಳನ್ನು ದೇವರು, ಎತ್ತುಗಳಿಗೆ ಸಮರ್ಪಿಸಿದ ಬಳಿಕ ಮನೆ ಮಂದಿ ಆಹಾರ ಸೇವಿಸಿದರು. ತಾಲ್ಲೂಕಿನ ವಡ್ಡರಹಳ್ಳಿ, ಬೈಲುವದ್ದಿಗೇರಿ, ಧರ್ಮಸಾಗರ, ಕಮಲಾಪುರ, ಕೊಂಡನಾಯಕನಹಳ್ಳಿ, ಮಲಪನಗುಡಿ, ಮರಿಯಮ್ಮನಹಳ್ಳಿ ಸೇರಿದಂತೆ ಹಲವೆಡೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.