ADVERTISEMENT

ಲಂಕೇಶ್ ಹಾದಿಯಲ್ಲಿ ಸಾಗಿದ್ದ ಗೌರಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2017, 9:21 IST
Last Updated 7 ಸೆಪ್ಟೆಂಬರ್ 2017, 9:21 IST
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಆನೇಕಲ್‌ನ ಗೋಪಾಲರಾಜು ಪದವಿ ಕಾಲೇಜಿನ ವಿದ್ಯಾರ್ಥಿಗಳು ಪತ್ರಿಭಟಿಸಿದರು.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಆನೇಕಲ್‌ನ ಗೋಪಾಲರಾಜು ಪದವಿ ಕಾಲೇಜಿನ ವಿದ್ಯಾರ್ಥಿಗಳು ಪತ್ರಿಭಟಿಸಿದರು.   

ಆನೇಕಲ್‌: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಹಾಗೂ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ ಆನೇಕಲ್‌ ಪತ್ರಕರ್ತರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ತಾಲ್ಲೂಕು ಕಚೇರಿ ಮುಂದೆ ಪತ್ರಕರ್ತರ ಸಂಘದ ಸದಸ್ಯರು, ಗೋಪಾಲರಾಜು ಪದವಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಜಮಾವಣೆಯಾಗಿ ಗೌರಿ ಅವರ ಭಾವಚಿತ್ರಕ್ಕೆ ಶ್ರದ್ದಾಂಜಲಿ ಸಲ್ಲಿಸಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ. ಲಕ್ಷ್ಮೀನಾರಾಯಣಾಚಾರ್ಯ ಮಾತನಾಡಿ ‘ಪತ್ರಕರ್ತೆಯಾಗಿ ಗೌರಿ ಅವರು ಅವರ ತಂದೆ ಲಂಕೇಶ್ ಹಾದಿಯಲ್ಲಿ ಸಾಗುತ್ತಿದ್ದರು. ಸಂಪಾದಕಿಯಾಗಿ ಮಾಧ್ಯಮ ವಲಯದಲ್ಲಿ ಸಾಕಷ್ಟು ಸಂಚಲನೆ ಮೂಡಿಸಿದ್ದರು’ ಎಂದರು.

ADVERTISEMENT

ಪ್ರಧಾನ ಕಾರ್ಯದರ್ಶಿ ಅಮರೇಶ್, ವಕೀಲ ಆನಂದ ಚಕ್ರವರ್ತಿ, ಹೋರಾಟಗಾರ ಮುರಳಿ ಮೋಹನ ಕಾಟಿ, ಪಿವಿಸಿ(ಸ್ವಾಭಿಮಾನಿ) ಸಂಘಟನೆಯ ರಾಜ್ಯ ಕಾರ್ಯದರ್ಶಿ ಆದೂರು ಪ್ರಕಾಶ್, ವಕೀಲ ಪುರುಷೋತ್ತಮ, ಬೌದ್ಧ ಮಹಾಸಭಾದ ಮುಖ್ಯಸ್ಥ ಸಿ.ರಾವಣ, ಪತ್ರಕರ್ತರ ಸಂಘದ ಕೆ.ಶಿವಣ್ಣ, ಅಗ್ನಿ ವೆಂಕಟೇಶ್, ಕೆ.ಚಂದ್ರಶೇಖರ್, ಶಿವು, ನವೀನ್ ಚಂದ್ರಶೆಟ್ಟಿ, ಅಂಬರೀಶ್, ಮುನಿರಾಜು, ಆದೂರು ಚಂದ್ರು, ಮಹದೇವ್‌, ಬಂಗಾರು ಬಾಬು, ಪುನೀತ್, ಕಿರಣ್, ಬಿ.ಮಲ್ಲಿಕಾರ್ಜುನಾರಾಧ್ಯ, ಗೋಪಿ, ಹರೀಶ್, ಮಹೇಶ್, ರಾಘು, ಬಿಎಸ್ಪಿ ಮುಖಂಡ ಶ್ರೀನಿವಾಸ್, ಚುಟುಕು ಕವಿ ಶಂಕರ್, ವೆಂಕಟೇಶಮೂರ್ತಿ ಮತ್ತಿತರರು ಹಾಜರಿದ್ದರು.

ವಿಶೇಷ ತಹಶೀಲ್ದಾರ್ ಮಂಜುನಾಥ್‌ ಅವರು ಮನವಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.