ADVERTISEMENT

‘ಸಂವಿಧಾನವೇ ದೇಶದ ಪವಿತ್ರ ಗ್ರಂಥ’

ದೊಡ್ಡಬಳ್ಳಾಪುರ ಗಣರಾಜ್ಯೋತ್ಸವದಲ್ಲಿ ಉಪವಿಭಾಗಾಧಿಕಾರಿ ಆಶಯ

​ಪ್ರಜಾವಾಣಿ ವಾರ್ತೆ
Published 27 ಜನವರಿ 2017, 10:15 IST
Last Updated 27 ಜನವರಿ 2017, 10:15 IST
ದೊಡ್ಡಬಳ್ಳಾಪುರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ  ಗಣರಾಜ್ಯೋತ್ಸವ ಪಥ ಸಂಚಲನ ನೋಡುಗರ ಆಕರ್ಷಣೆಯಾಗಿತ್ತು. ಉಪ ವಿಭಾಗಾಧಿಕಾರಿ ಎಂ.ಕೆ.ಜಗದೀಶ್‌ ವಂದನೆ ಸ್ವೀಕರಿಸಿದರು
ದೊಡ್ಡಬಳ್ಳಾಪುರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಪಥ ಸಂಚಲನ ನೋಡುಗರ ಆಕರ್ಷಣೆಯಾಗಿತ್ತು. ಉಪ ವಿಭಾಗಾಧಿಕಾರಿ ಎಂ.ಕೆ.ಜಗದೀಶ್‌ ವಂದನೆ ಸ್ವೀಕರಿಸಿದರು   

ದೊಡ್ಡಬಳ್ಳಾಪುರ:  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಪವಿತ್ರ ಗ್ರಂಥವಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಯು ಸಹ ಸಂವಿಧಾನವನ್ನು ಅಧ್ಯಯನ ಮಾಡಲೇಬೇಕು ಎಂದು ಉಪವಿಭಾಗಾಧಿಕಾರಿ ಎಂ.ಕೆ.ಜಗದೀಶ್‌ ಹೇಳಿದರು.

ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಜಾಗತಿಕ ಮಟ್ಟದಲ್ಲಿ ನಮ್ಮ ದೇಶ ಅಗ್ರಗಣ್ಯ ರಾಷ್ಟ್ರವಾಗಿದ್ದು, ವಿಜ್ಞಾನ, ತಂತ್ರಜ್ಞಾನಗಳಲ್ಲಿ ವಿಶ್ವಮನ್ನಣೆ ಗಳಿಸಿದೆ. ಇದಕ್ಕೆ ಈ ದೇಶದ ಜನರ ನಿಷ್ಟಾವಂತ ಸೇವೆ ಕಾರಣವಾಗಿದೆ ಎಂದರು.

ಶಾಸಕ ಟಿ.ವೆಂಕಟರಮಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವದ ಅನೇಕ ರಾಷ್ಟ್ರಗಳು ಇಂದಿಗೂ ಸಂವಿಧಾನ ಇಲ್ಲದೆ ಅರಾಜಕತೆಯಿಂದ ನಲುಗುತ್ತಿವೆ. ದೇಶದ ಪ್ರಗತಿ ಹಾಗೂ ಶಾಂತಿಯುತ ಬದುಕಿಗೆ ಸಂವಿಧಾನದ ಮಹತ್ವ ಹೆಚ್ಚು ಎಂದರು.

ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಆರ್.ಮಂಜುನಾಥ್ (ಶಿಕ್ಷಣ), ಜಿ.ಲಕ್ಷ್ಮೀನಾರಾಯಣ್(ಕೃಷಿ),ಎಂ.ಪುಟ್ಟರಾಜು(ಕಲೆ), ವಿ.ನಾರಾಯಣಸ್ವಾಮಿ, ಕವಿತಾ, ಈಶ್ವರ್,(ಕ್ರೀಡೆ), ಕೆ.ಸುಲೋಚನಮ್ಮ ವೆಂಕಟರೆಡ್ಡಿ (ಸಮಾಜ ಸೇವೆ),ಚಂದ್ರಶೇಖರ್ ಉಪ್ಪಾರ, ಮುನಿಕೃಷ್ಣಪ್ಪ (ಪತ್ರಿಕೋದ್ಯಮ), ಮಂಜುನಾಥ್ (ಯೋಧ), ಆರ್.ಶಿವಾಜಿರಾವ್, ಮುರಳಿ, ಆರ್ಯ (ಕನ್ನಡಪರ ಹೋರಾಟಗಾರರು) ಗಣರಾಜ್ಯೋತ್ಸವ ಪೆರೇಡನ್ನು ಕ್ಷೇತ್ರ ದೈಹಿಕ ಶಿಕ್ಷಣ ಅಧಿಕಾರಿ ಬಿ.ಜಿ. ಅಮರ್‌ನಾಥ್ ನಡೆಸಿಕೊಟ್ಟರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಶ್ರೀವತ್ಸ, ನಗರಸಭೆ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ಉಪಾಧ್ಯಕ್ಷೆ ಜಯಲಕ್ಷ್ಮೀ ನಟರಾಜ್, ತಹಶೀಲ್ದಾರ್ ಎಂ.ಕೆ. ರಮೇಶ್, ಡಿವೈಎಸ್‌ಪಿ ವೈ.ನಾಗರಾಜ್, ನಗರಸಭೆ ಪೌರಾಯುಕ್ತ ಡಾ.ಪಿ. ಬಿಳಿಕೆಂಚಪ್ಪ, ಬಿಇಓ ಹನುಮಂತಪ್ಪ, ತಾ.ಪಂ ಇ.ಓ. ಅಶ್ವತ್ಥರೆಡ್ಡಿ,  ಭಾರತ ಸೇವಾದಳದ ಶ್ರೀಕಂಠಮೂರ್ತಿ,

ಎನ್‌ಸಿಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಶ್ರೀನಿವಾಸ್, ಕ್ಯಾಪ್ಟನ್ ತಜಮುಲ್ಲಾಪಾಷ, ಬಾಲ ನಾಯ್ಕ, ಅಶ್ವಿನಿ ಸೇರಿದಂತೆ ನಗರಸಭೆ ಸದಸ್ಯರು ಹಾಗೂ ತಾ.ಪಂ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಗರದ ವಿವಿಧ ಶಾಲಾ ಮಕ್ಕಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT