ADVERTISEMENT

ಮುಖ್ಯಮಂತ್ರಿ ಬಳಿ ನಿಯೋಗ: ಶಾಸಕ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 9:09 IST
Last Updated 2 ಫೆಬ್ರುವರಿ 2018, 9:09 IST
ದೊಡ್ಡಬಳ್ಳಾಪುರದಲ್ಲಿ ಗುರುವಾರ ಮಡಿವಾಳ ಮಾಚಿದೇವರ ಜಯಂತಿ ನಡೆಯಿತು
ದೊಡ್ಡಬಳ್ಳಾಪುರದಲ್ಲಿ ಗುರುವಾರ ಮಡಿವಾಳ ಮಾಚಿದೇವರ ಜಯಂತಿ ನಡೆಯಿತು   

ದೊಡ್ಡಬಳ್ಳಾಪುರ: ‘ಈಗಾಗಲೇ ನಿವೇಶನ ಹೊಂದಿರುವ ಮಡಿವಾಳ ಸಮುದಾಯದವರಿಗೆ ನಿವೇಶನದಲ್ಲಿ ಸಮುದಾಯ ಭವನ ಅಥವಾ ದೇವಾಲಯ ನಿರ್ಮಾಣಕ್ಕೆ ಅಗತ್ಯ ನೆರವು ನೀಡಲಾಗುವುದು.ಅಗತ್ಯ ಸೌಲಭ್ಯ ನೀಡುವ ಕುರಿತು ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕೊಂಡೊಯ್ಯಲಾಗುವುದು’ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ನಡೆದ ವಚನಕಾರ, ಮಹಾಶರಣ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿವೇಶನದಲ್ಲಿ ನಿರ್ಮಾಣ ಮಾಡಲಿರುವ ಕಟ್ಟಡದ ನೀಲಿನಕ್ಷೆ ಹಾಗೂ ಯೋಜನೆಯ ವಿವರಗಳನ್ನು ನೀಡಿದರೆ ಸಂಬಂಧಪಟ್ಟವರ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದರು.

ADVERTISEMENT

ಮಡಿವಾಳ ಸಮುದಾಯದ ಜನರು ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿರುವುದು ಕಳವಳಕಾರಿ. ಶಿಕ್ಷಣದ ಮೂಲಕ ಸಮಾಜ ಪರಿವರ್ತನೆ ಸಾಧ್ಯ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಬೇಕು ಎಂದರು.

ಮಡಿವಾಳ ಸಮುದಾಯದ ಮುಖಂಡರಾದ ಜಿ.ರಂಗಸ್ವಾಮಿ, ಎಚ್.ಆರ್.ಮುನಿಶಾಮಯ್ಯ, ಎನ್.ರಘು ಮಡಿವಾಳ ಮಾಚಿದೇವರ ಕುರಿತು ಮಾತನಾಡಿ, ಮಾಚಿದೇವರ ಶ್ರೇಷ್ಠ ವಚನಕಾರರು.ಅವರು ವಚನಗಳ ಮೂಲಕ ಹಿಂದುಳಿದವರು, ದಲಿತರು ಹಾಗೂ ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದರು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಶ್ರೀವತ್ಸ, ತಹಶೀಲ್ದಾರ್ ಬಿ.ಎ.ಮೋಹನ್, ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಕೆ.ಜಿ.ಅಶೋಕ್, ಮಡಿವಾಳ ಸಮುದಾಯ ಮುಖಂಡರಾದ ಜಿ.ಸಿ.ರಾಮಣ್ಣ, ಮುನಿಶಾಮಣ್ಣ, ಡಿ.ಎಲ್‌.ಗಂಗಾದರ್‌, ಆರ್‌.ನರಸಿಂಹಮೂರ್ತಿ, ವೀರಾಂಜನೇಯ, ಲಕ್ಷ್ಮೀಣಾರಾಯಣ್, ಕಾಂಗ್ರೆಸ್‌ ಮುಖಂಡರಾದ ಡಿ.ವಿ.ಅಶ್ವಥಪ್ಪ, ಬಿ.ಮುನಿರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.