ADVERTISEMENT

‘ಜಾತಿ, ಧರ್ಮಕ್ಕೆ ಅಂಟಿ ಕೆಲಸ ಮಾಡಿಲ್ಲ’

ಅಭಿನಂದನಾ ಸಮಾರಂಭದಲ್ಲಿ ಜೆಡಿಎಸ್ ನಾಯಕ ಪಿಳ್ಳಮುನಿಶಾಮಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 12:01 IST
Last Updated 5 ಜುಲೈ 2018, 12:01 IST
ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೆಡಿಎಸ್ ನಾಯಕ ಪಿಳ್ಳಮುನಿಶಾಮಪ್ಪ ಅವರನ್ನು ಸನ್ಮಾನಿಸಲಾಯಿತು
ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೆಡಿಎಸ್ ನಾಯಕ ಪಿಳ್ಳಮುನಿಶಾಮಪ್ಪ ಅವರನ್ನು ಸನ್ಮಾನಿಸಲಾಯಿತು   

ವಿಜಯಪುರ: ‘ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಶಾಲಾಭಿವೃದ್ಧಿ ಸಮಿತಿ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

'ಅಧಿಕಾರಕ್ಕೆ ಚ್ಯುತಿ ಬಾರದಂತೆ ಜನರ ಪ್ರೀತಿ ವಿಶ್ವಾಸ ಗಳಿಸಿ ಕೆಲಸ ಮಾಡಿದ್ದೇನೆ. ಸಮಾಜದ ಒಂದು ವರ್ಗವನ್ನು ಓಲೈಸುವುದರಿಂದ ಬದಲಾವಣೆ ಅಸಾಧ್ಯ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ.ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಅಧಿಕಾರ ಇರುವಾಗ ಉತ್ತಮ ಕೆಲಸ ಮಾಡಬೇಕು' ಎಂದರು.

ಉತ್ತಮ ಶಿಕ್ಷಣ ನೀಡುವ ಶಿಕ್ಷಕರನ್ನು ವಿದ್ಯಾರ್ಥಿಗಳು ಎಂದಿಗೂ ಮರೆಯುವುದಿಲ್ಲ. ಎಲ್ಲಾ ಸಾಧಕರು ಪ್ರಾಥಮಿಕ, ಪ್ರೌಢಶಾಲಾ ಮಟ್ಟದಿಂದಲೇ ಉತ್ತಮ ಗುಣ ಬೆಳೆಸಿಕೊಂಡು ಇಂದು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿದ್ದಾರೆ. ಅಂತಹ ಮಹನೀಯರನ್ನು ಸಿದ್ಧಗೊಳಿಸಿದ ಶಿಕ್ಷಕರ ಪಾತ್ರ ಮಹತ್ತರವಾದದು ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಹೆಣ್ಣು ಮಕ್ಕಳಿಗಾಗಿ ಎಲ್ಲಾ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ಏರೋ ಶಾಟ್ಸ್ ಕಂಪನಿ ಶಾಲೆ ಅಭಿವೃದ್ಧಿಗೆ ಸಹಕಾರ ನೀಡಿದೆ. ನೆಲಹಾಸಿಗೆ ₹10 ಲಕ್ಷ ಅನುದಾನ ಮೀಸಲಿಡಲಾಗಿದೆ. ಅನುದಾನ ವಾಪಸ್‌ ಹೋಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮನವಿ ಮಾಡಲಾಗುವುದು’ ಎಂದರು.

ಪುರಸಭಾ ಸದಸ್ಯ ಎಸ್. ಭಾಸ್ಕರ್ ಮಾತನಾಡಿ, ವಿರೋಧ ಪಕ್ಷದಲ್ಲಿದ್ದರೂ ಹಿಂದಿನ ಮುಖ್ಯಮಂತ್ರಿ, ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಅಭಿವೃದ್ಧಿಗಾಗಿ ಪಿಳ್ಳಮುನಿಶಾಮಪ್ಪ ಶ್ರಮಿಸಿದ್ದಾರೆ. ಜತೆಗೆ ಶಾಲೆಗಳ ಅಭಿವೃದ್ಧಿಗೂ ಹೆಚ್ಚು ಗಮನಹರಿಸಿದ್ದಾರೆ. ಶಾಲೆ ಆಸ್ತಿ ಒತ್ತುವರಿಯಾಗದಂತೆ ತಡೆಯಲು ತಡೆಗೋಡೆ ನಿರ್ಮಾಣ ಮಾಡಿದ್ದಾರೆ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ದೇವರಾಜಪ್ಪ ಮಾತನಾಡಿ, ಅಭಿವೃದ್ಧಿ ಪರವಾದ ಚಿಂತನೆ ಮಾಡುವ ನಾಯಕರು ಬರಬೇಕು. ಶಿಕ್ಷಣ ಕ್ಷೇತ್ರ ಪ್ರೋತ್ಸಾಹಿಸಿದಾಗ ಮಾತ್ರವೇ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಶಾಲೆಯಲ್ಲಿ ಗ್ರಂಥಾಲಯದ ಕೊಠಡಿ ಹಾಗೂ ಪ್ರಯೋಗಾಲಯ ನಿರ್ಮಾಣ ಮಾಡಬೇಕು. ಶಾಲೆ ಮಕ್ಕಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಅವರಿಗೆ ಬೇಕಾಗಿರುವ ಉತ್ತಮ ಪ್ರೋತ್ಸಾಹ ನೀಡುವುದು ಎಲ್ಲರ ಕರ್ತವ್ಯ ಎಂದರು.

ಮುಖಂಡ ರಮೇಶ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಚಿಕ್ಕನಹಳ್ಳಿ ಸುಬ್ಬಣ್ಣ, ಕೆ.ಮಂಜುನಾಥ್, ಪ್ರಭಾರಿ ಉಪಪ್ರಾಂಶುಪಾಲ ಪಿ.ಎಂ. ಕೊಟ್ರೇಶ್, ಎಚ್.ಎಂ.ಕೃಷ್ಣಪ್ಪ, ವೇಣು, ಹರ್ಷವರ್ಧನ್, ಮಹೇಶ್ ಕುಮಾರ್, ಮಹಬೂಬ್ ಸಾಬ್, ಅನಿಸ್, ಆಸೀಪ್, ಶಿಕ್ಷಕರಾದ ನಾರಾಯಣ್, ಮುನಿಶಾಮಣ್ಣ, ಆನಂದ್, ಡಾ. ರಮೇಶಪ್ಪ, ರಾಮಾಂಜು, ವೆಂಕಟೇಶ್, ನರಸಿಂಹಮೂರ್ತಿ, ಕುಮಾರ್, ಡಿ.ಎಂ. ಮುನಿಕೃಷ್ಣಪ್ಪ, ನಾರಾಯಣಸ್ವಾಮಿ, ಗಡ್ಡದನಾಯಕನಹಳ್ಳಿ ಚಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.