ADVERTISEMENT

ಎಚ್‌.ಡಿ.ಕೆ ಕೈ ಬಲಪಡಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 24 ಮೇ 2017, 9:42 IST
Last Updated 24 ಮೇ 2017, 9:42 IST

ಯಮಕನಮರಡಿ: ‘ಮಾಜಿ ಪ್ರಧಾನಿ ದೇವೇಗೌಡ ಈ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿ ಕೊಟ್ಟಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆ ವೇಳೆ ಎಚ್‌.ಡಿ. ಕುಮಾರಸ್ವಾಮಿ ಅವರ ಕೈಗಳನ್ನು ಬಲಪಡಿಸಬೇಕು’ ಎಂದು ಸ್ಥಳೀಯ ಜೆ.ಡಿ.ಎಸ್ ಮುಖಂಡ ಜಾಕೀರ್ ನದಾಫ ಮನವಿ ಮಾಡಿಕೊಂಡರು.

ಪಾಶ್ಚಾಪುರ ಗ್ರಾಮದ ಅಂಬಾ ಭವಾನಿ ಮಂದಿರದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜೆ.ಡಿ.ಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ದೇವೇಗೌಡರು ಜಾರಿಗೊಳಿಸಿರುವ ನೀರಾವರಿ ಯೋಜನೆಯನ್ನು ಇಂದಿಗೂ ರೈತರು ನೆನಪಿಸಿಕೊಳ್ಳತ್ತಾರೆ. ಆದ್ದರಿಂದ ಜೆಡಿಎಸ್‌ ಪಕ್ಷಕ್ಕೆ ಬೆಂಬಲಿಸುವ ಮೂಲಕ ಜನರು ಅದನ್ನು ಬಹುಮತದಿಂದ ಆರಿಸಬೇಕು’ ಎಂದು ನದಾಫ ಮನವಿ ಮಾಡಿಕೊಂಡರು.

ಬೆಳಗಾವಿ ಜಿಲ್ಲಾ ಜೆ.ಡಿ.ಎಸ್ ಮುಖಂಡ ಶಿವಪ್ಪ ಮಾತನಾಡಿ, ‘ಕುಮಾರಸ್ವಾಮಿ ನೇತೃತ್ವದಲ್ಲಿ ಮುಂದಿನ ಜೂನ್ ತಿಂಗಳಲ್ಲಿ ಯಮಕನಮರಡಿ ಯಲ್ಲಿ ಬೃಹತ್‌ ಸಮಾವೇಶ ನಡೆಯ ಲಿದ್ದು, ಪಕ್ಷ ಬಲಪಡಿಸಲು ಕಾರ್ಯ ಕರ್ತರು ಶ್ರಮಿಸಬೇಕು’ ಎಂದರು.

ADVERTISEMENT

ಪದಾಧಿಕಾರಿಗಳು: ಬಾಳಪ್ಪ ಕಡೇದ ಅವರನ್ನು ಸಂಘಟನಾ ಕಾರ್ಯದರ್ಶಿ ಯಾಗಿ, ಕಾಡಪ್ಪ ಅವರನ್ನು ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾಗಿ, ಸತ್ಯಪ್ಪ ಚೌಗಲಾ ಅವರನ್ನು ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾಗಿ, ಮಲ್ಲಿಕಾರ್ಜುನ ಬಾಗೇವಾಡಿ ಅವರನ್ನು  ಯುವ ಮೋರ್ಚಾ ಅಧ್ಯಕ್ಷರಾಗಿ ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.
ಹಿಡಕಲ್‌ನ ರಜನೀಶ್‌ ಆಚಾರ್ಯ, ಕುರಣಿ ಸಭೆಯಲ್ಲಿ  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.