ADVERTISEMENT

ಕಳಪೆ ಸಸಿ ಆರೋಪ: ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಮೇ 2017, 7:03 IST
Last Updated 19 ಮೇ 2017, 7:03 IST

ಮುನವಳ್ಳಿ: ಪಟ್ಟಣದ ನರ್ಸರಿ ಯಿಂದ ಕಳಪೆ ಬದನೆ ಸಸಿ ವಿತರಿಸಿ ದ್ದರಿಂದ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತರು ಗುರುವಾರ ಪ್ರತಿಭಟನೆ ನಡೆಸಿದರು.

ಸವದತ್ತಿ ತಾಲ್ಲೂಕಿನ ಯಡ್ರಾಂವಿ ಗ್ರಾಮದ ಹಣಮಂತ ಮಲ್ಲಪ್ಪ ಹಾಸಟ್ಟಿ ಹಾಗೂ ಹೂಲಿಕಟ್ಟಿ ಗ್ರಾಮದ ಪುಂಡಲೀಕ ಮ. ಪಾಟೀಲ 3 ತಿಂಗಳ ಹಿಂದೆ ಮುನವಳ್ಳಿಯ ನರ್ಸರಿಯಿಂದ ಮುಳ್ಳು ಬದನೆ ಸಸಿ ಖರೀದಿಸಿ ಜಮೀನಿನಲ್ಲಿ ನೆಟ್ಟಿದ್ದರು.

ಅವು ಈಗ ಮುಳ್ಳು ಬದನೆಯಾಗದೆ ಮಾಮೂಲಿ ಬದನೆಯಾಗಿದ್ದರಿಂದ ಬೆಳೆ ನಷ್ಟ ಅನುಭವಿಸಿದ್ದಾರೆ ಎಂದು ತಿಳಿಸಿದರು. ಈ ಬಗ್ಗೆ ರೈತರು ಠಾಣೆ ಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ರೈತ ಸಂಘದ ಮುಖಂಡರಾದ ಬಿ.ಎಂ. ಮಳಲಿ, ರಾಘವೇಂದ್ರ ನಾಯಿಕ, ಜೆ.ವಿ. ಅಗಡಿ, ಬಸವರಾಜ ಬಿಜ್ಜೂರ, ಎಂ.ಎಸ್. ಕರಿಗೌಡ್ರ, ಲಕ್ಷ್ಮಣ ಕರಿಕಟ್ಟಿ, ಚಂದ್ರಪ್ಪ ಲಗಮ ನ್ನವರ, ರಾಮಲಿಂಗಪ್ಪ ಜಗದಾಳ, ದುಂಡಪ್ಪ ಕುರುವಿನಕೊಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.