ADVERTISEMENT

ಕಳಸಾ– ಬಂಡೂರಿ ಯೋಜನೆ: ಕೇಂದ್ರದ ಮೇಲೆ ಒತ್ತಡಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜುಲೈ 2015, 9:00 IST
Last Updated 6 ಜುಲೈ 2015, 9:00 IST

ಬೆಳಗಾವಿ: ‘ಕಳಸಾ– ಬಂಡೂರಿ ನಾಲಾ ಜೋಡಣೆ ಯೋಜನೆಯು ಉತ್ತರ ಕರ್ನಾಟಕದ ಪ್ರಮುಖ ಕುಡಿಯುವ ನೀರಿನ ಯೋಜನೆಯಾಗಿದೆ. ಇದನ್ನು ಅನುಷ್ಠಾನಗೊಳಿಸಲು ಬಿಜೆಪಿ ನಾಯ ಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು’ ಎಂದು ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್‌ ಒತ್ತಾಯಿಸಿದ್ದಾರೆ.

‘ಕಳಸಾ– ಬಂಡೂರಿ ನಾಲಾ ಜೋಡಣೆ ಯೋಜನೆಗೆ ಮೊದಲಿನಿಂ ದಲೂ ಗೋವಾ ಸರ್ಕಾರ ಅಡ್ಡಿ ಪಡಿಸುತ್ತಿದೆ. ಈಗ ಗೋವಾ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ ರಾಜ್ಯದ ಬಿಜೆಪಿ ನಾಯಕರು ಕೂಡಲೇ ಬೆಳಗಾವಿಯಿಂದ ಗೋವಾ ವರೆಗೆ ಪಾದಯಾತ್ರೆ ನಡೆಸಿ ಗೋವಾ ಸರ್ಕಾರದ ಮನವೊಲಿಸುವ ಕೆಲಸ ಮಾಡಲಿ’ ಎಂದು ಹೆಬ್ಬಾಳ್ಕರ್‌ ಸಲಹೆ ನೀಡಿದ್ದಾರೆ.

‘ರಾಜ್ಯದ ಬಿಜೆಪಿಯ ನಾಯ ಕರು ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಕೇವಲ ಅನು ಕಂಪದ ಮಾತುಗ ಳನ್ನಾಡುವುದನ್ನು ಬಿಟ್ಟು ಗೋವಾ ಹಾಗೂ ಕೇಂದ್ರ ಸರ್ಕಾರದ ಮನವೊ ಲಿಸುವ ಮೂಲಕ ಈ ಭಾಗದ ಅಭಿ ವೃದ್ಧಿಯ ಬಗ್ಗೆ ಕಾಳಜಿ ತೋರಿಸಲಿ’ ಎಂದು ಅವರು ಸವಾಲು ಹಾಕಿದ್ದಾರೆ.

‘ಕಿಸಾನ್ ದೇಶ ಕಿ ಶಾನ್‌, ಕಿಸಾನ್‌ ದೇಶ ಕಿ ಜಾನ್‌’ ಎಂದು ಘೋಷಣೆ ಹಾಕಿ ಜನರನ್ನು ಮರಳು ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಕೇವಲ ಬಣ್ಣದ ಮಾತುಗಳನ್ನಾಡುವುದನ್ನು ಬಿಟ್ಟು ಕೇಂದ್ರ ಸಕಾರದಿಂದ ಹೆಚ್ಚಿನ ಪರಿಹಾರ ತರುವ ಮೂಲಕ ರಾಜ್ಯದ ಕಬ್ಬು ಬೆಳೆ ಗಾರರಿಗೆ ಯೋಗ್ಯ ನ್ಯಾಯ ದೊರ ಕಿಸಿಕೊಡ ಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.