ADVERTISEMENT

ಜೋಗುಳಬಾವಿ: ರೋಗ ಹರಡುವ ಭೀತಿ

ಸದಾಶಿವ ಮಿರಜಕರ
Published 29 ಡಿಸೆಂಬರ್ 2017, 8:21 IST
Last Updated 29 ಡಿಸೆಂಬರ್ 2017, 8:21 IST

ಸವದತ್ತಿ: ಐತಿಹಾಸಿಕ ಪ್ರಸಿದ್ಧ ಸತ್ಯವತಿದೇವಿಯ ಜೋಗುಳಬಾವಿಯ ಪುಣ್ಯತೀರ್ಥದ ನೀರು ಕಲುಷಿತವಾಗುತ್ತಿದ್ದು, ಸಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಭಕ್ತರಿದ್ದಾರೆ. ರೇಣುಕಾದೇವಿಯ ದರ್ಶನ ಪಡೆಯುವ ಮುನ್ನ ಭಕ್ತರು ಈ ಜೋಗುಳಬಾವಿಯಲ್ಲಿ ಸ್ನಾನ ಮಾಡುತ್ತಾರೆ. ಸತ್ಯಮ್ಮನ ದರ್ಶನ ಪಡೆದು ಹರಕೆ ತೀರಿಸಿದ ನಂತರ ಯಲ್ಲಮ್ಮನಗುಡ್ಡಕ್ಕೆ ಹೋಗುವ ಪ್ರತೀತಿ ಇದೆ.

ಸತಮ್ಮನ ದೇವಸ್ಥಾನ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದಾರೆ. ಪಟ್ಟಣದ ಹೂಗಾರ ಮನೆತನದವರು ಗುತ್ತಿಗೆದಾರರಾಗಿದ್ದು, ಒಟ್ಟು ಐದು ಬಾರಿ ಬಾವಿಯನ್ನು ಸ್ವಚ್ಛಗೊಳಿಸಿದ್ದಾರೆ. 2016ರಲ್ಲಿ ಜಿಲ್ಲಾಡಳಿತ ಸ್ವಚ್ಛತೆಗೆ ಮುಂದಾಗಿತ್ತು. ಆದರೆ, ಗುತ್ತಿಗೆ ಪಡೆದವರು ಈ ಕಾರ್ಯ ಮಾಡಲು ಆಗಿರಲಿಲ್ಲ. ಮತ್ತೆ ದೇವಸ್ಥಾನದವರೇ ಸ್ವಚ್ಛಗೊಳಿಸಿದ್ದರು.

ಜಿಲ್ಲಾಧಿಕಾರಿ ಆದೇಶದಂತೆ ಬಾವಿಯ ದಡದಲ್ಲಿ ಶವರ್‌ಬಾತ್‌ಗೆ ವ್ಯವಸ್ಥೆ ಮಾಡಲಾಗಿದೆ. ಆದರೂ ಬಹುತೇಕರು ಬಾವಿ ನೀರಿನಲ್ಲಿಯೇ ಸ್ನಾನ ಮಾಡುತ್ತಾರೆ. ‘ಭಕ್ತರು ಶ್ರದ್ಧೆಯಿಂದ ಇಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಬಟ್ಟೆ, ಹಳೆಯ ದೇವರ ಫೋಟೊಗಳನ್ನು ಗಾಜುಸಮೇತ ಬಾವಿಗೆ ಹಾಕುತ್ತಾರೆ. ಇದರಿಂದ ಜೋಗುಳಬಾವಿ ಕೊಳಚೆ ಗುಂಡಿಯಂತಾಗಿದೆ. ನೀರು ಕಲುಷಿತವಾಗಿದೆ’ ಎಂದು ದೇವಸ್ಥಾನದ ಗುತ್ತಿಗೆದಾರ ಶಿವಾನಂದ ಹೂಗಾರ ಹೇಳಿದರು.

ADVERTISEMENT

‘ಬಾವಿಯಲ್ಲಿ ಉತ್ತಮ ಅಂತರ್ಜಲದ ಮೂಲವಿದೆ. ಆದರೆ, ಒಳಹರಿವಿನಷ್ಟೇ ಹೊರಹರಿವು ಅಗತ್ಯವಿದೆ. ಆಗ ನೀರು ಕಲುಷಿತಗೊಳ್ಳದಂತೆ ನೋಡಿಕೊಳ್ಳಬಹುದು ಎಂದು ಅನೇಕ ಬಾರಿ ದೇವಸ್ಥಾನದ ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಆದರೆ, ಪ್ರಯೋಜನವಾಗಿಲ್ಲ’ ಎಂದು ಮುಖಂಡ ಜಯಸಿಂಗ ರಜಪೂತ ದೂರಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.