ADVERTISEMENT

‘ದಾದಿಯರ ಸೇವೆ ಶ್ಲಾಘನೀಯ’

​ಪ್ರಜಾವಾಣಿ ವಾರ್ತೆ
Published 16 ಮೇ 2017, 7:01 IST
Last Updated 16 ಮೇ 2017, 7:01 IST

ಬೆಳಗಾವಿ: ಸ್ವಹಿತಾಸಕ್ತಿ ಬದಿಗಿರಿಸಿ ಪರರ ಆರೋಗ್ಯದ ಕಾಳಜಿ ವಹಿಸುವ ದಾದಿಯರ ವೃತ್ತಿ ಶ್ಲಾಘನೀಯವಾದುದು ಎಂದು ಕೆಎಲ್‌ಇ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ.ವಿ.ಎಸ್‌. ಸಾಧು ನವರ ಹೇಳಿದರು.

ಇಲ್ಲಿನ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಸೋಮವಾರ ನಡೆದ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ ನಾಡಿದರು.
‘ತಾಯಿಯು ತನ್ನ ಮಗುವಿಗೆ ಮಾತ್ರ ಪ್ರೀತಿ ಕಾಳಜಿ ತೋರುತ್ತಾಳೆ. ಆದರೆ ದಾದಿಯು ಯಾವುದೇ ಸಂಬಂಧ ಇಲ್ಲದಿದ್ದರೂ ರೋಗಿಯನ್ನು ಮಗು ವಿನಂತೆಯೇ ಕಾಳಜಿಯಿಂದ ನೋಡಿ ಕೊಳ್ಳುತ್ತಾಳೆ. ರೋಗಿ ಗುಣಮುಖ ಹೊಂದಿ ಸಂತಸದ ಜೀವನ ನಡೆಸುವಂತೆ ಮಾಡುವಲ್ಲಿ ದಾದಿಯ ಪಾತ್ರ ಮಹತ್ವದ್ದಾಗಿದೆ’ ಎಂದು ತಿಳಿಸಿದರು.

ಆಸ್ಪತ್ರೆಯ ವೈದ್ಯಕೀಯ ಸೇವೆಗಳ ನಿರ್ದೇಶಕ ಎಸ್.ಸಿ. ಧಾರವಾಡ, ‘ನರ್ಸ್‌ಗಳ ನಲುಮೆಯ ನಗುವು ರೋಗಿಗಳ ನೋವನ್ನು ಮರೆಸುವುದಲ್ಲದೆ ಅವರು ಬೇಗ ಗುಣಮುಖರಾಗುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅವರ ಕಾರ್ಯನಿರ್ವಹಣೆ ಆಸ್ಪತ್ರೆಗಳ ಬೆನ್ನೆಲುಬಾಗಿದೆ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಯುಎಸ್‌ಎಂ ಕೆಎಲ್ಇ ನಿರ್ದೇಶಕ ಎಚ್.ಬಿ. ರಾಜಶೇಖರ ಮಾತನಾಡಿ, ‘ಸೈನಿಕರು ಗಡಿಭಾಗದಲ್ಲಿದ್ದು ದೇಶ ಕಾಯುತ್ತಾರೆ. ಆದರೆ, ದೇಶದ ಒಳಗೆ ನಾಗರಿಕರ ಆರೋಗ್ಯ ಕಾಪಾಡುವಲ್ಲಿ ದಾದಿಯರು ಮಹತ್ವದ ಪಾತ್ರ ವಹಿಸುತ್ತಾರೆ’ ಎಂದು ಅಭಿಪ್ರಾಯಪಟ್ಟರು.ಇಂದುಮತಿ ವಾಘಮಾರೆ ಸ್ವಾಗತಿಸಿದರು. ಚಿದಾನಂದ ನಿರೂಪಿಸಿ ದರು. ವೀಣಾ ಕರಡಿಗುದ್ದಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.