ADVERTISEMENT

ನಾಲ್ಕನೇ ಸತೀಶ ಶುಗರ್ಸ್ ಅವಾರ್ಡ್ಸ್‌ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 6:03 IST
Last Updated 30 ಜನವರಿ 2017, 6:03 IST
ಬೆಳಗಾವಿ: ತಾಲ್ಲೂಕು ಮಟ್ಟದ 4ನೇ ಸತೀಶ ಶುಗರ್ಸ್ ಅವಾರ್ಡ್ಸ್‌ ಸ್ಪರ್ಧೆಯು ನಗರದ ಸರದಾರ ಹೈಸ್ಕೂಲ್‌ ಮೈದಾನ­ದಲ್ಲಿ ಶನಿವಾರ ಸಂಜೆ ನಡೆಯಿತು.
 
ಸಮಾರಂಭವನ್ನು ಪ್ರಿಯಾಂಕಾ ಸತೀಶ ಜಾರಕಿಹೊಳಿ ಹಾಗೂ ಕಳೆದ ಬಾರಿ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿಶ್ವಪ್ರಸಾದ ಗಾನಗಿ, ನಿಹಾರಿಕಾ ಉದ್ಘಾಟಿಸಿದರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಡಿ.ಡಿ.ಪಿ.ಐ ಎಸ್‌.ವೈ. ಹಳಿಂಗಳೆ, ಬಿ.ಇ.ಓ. ರುದ್ರಗೌಡ ಜುಟ್ಟನವರ, ಮಾಜಿ ಮಹಾಪೌರ ಕಿರಣ ಸಾಯಿ­ನಾಯಿಕ, ಪಾಲಿಕೆ ಸದಸ್ಯೆ ಜಯಶ್ರೀ ಮಾಳಗಿ, ಎಸ್.ಎ. ರಾಮಗಾನಟ್ಟಿ, ಅಜೀತ ಸಿದ್ದನ್ನವರ, ರಿಯಾಜ್ ಚೌಗಲಾ ಸೇರಿದಂತೆ ಅನೇಕ ಗಣ್ಯರು ವಿಜೇತರಿಗೆ ಬಹುಮಾನ ವಿತರಿಸಿದರು.
 
ಫಲಿತಾಂಶ (ಕ್ರಮವಾಗಿ ಪ್ರಥಮ, ದ್ವಿತೀಯ ತೃತೀಯ):
ಪ್ರಾಥಮಿಕ ಶಾಲಾ ವಿಭಾಗದ
ಭಾಷಣ ಸ್ಪರ್ಧೆ: ವೈಷ್ಣವಿ ಕಡೋಲ್ಕರ, ಮೆಹೆಕ ಬಾಳಾ, ಆಕಾಂಕ್ಷಾ ಪಾಟೀಲ,
ಗಾಯನ: ವಿಶ್ವಪ್ರಸಾದ ಗಾನಗಿ. ಸಂಜನಾ ಕುಲಕರ್ಣಿ, ನಿಹಾರಿಕಾ.
ಶಾಸ್ತ್ರೀಯ ನೃತ್ಯ: ಊರ್ವ ಶೆಟ್ಟಿ, ದನ್ಯಾ ರವಿರಾಜ ಶೆಟ್ಟಿ, ಸಮೀಕ್ಷಾ ಕಾರಂತ.  
ಚಿತ್ರಕಲೆ: ಜಿಯಾ ಪಾಟೀಲ, ಪಾರ್ಥ ಗುಂಜಕಾರ, ವಿಕ್ರಮ್ ನಂದೂಡ್ಕರ. 
ಸಮೂಹ ನೃತ್ಯ: ಡಿವೈನ್ ಪ್ರೊವಿಡನ್ಸ್ ಪ್ರಾಥಮಿಕ ಶಾಲೆ ಬೆಳಗಾವಿ, ಸರಕಾರಿ ಪ್ರಾಥಮಿಕ ಶಾಲೆ ಆನಗೋಳ, ಸೇಂಟ್‌ ಮೇರಿಸ್ ಪ್ರಾಥಮಿಕ ಶಾಲೆ ಬೆಳಗಾವಿ 
ಪ್ರೌಢಶಾಲಾ ವಿಭಾಗ: ಭಾಷಣ: ಸೌರಭ ಧಾಮನೇಕರ, ಶೀಫಾ ಮುನ್ಸಿ, ಹುಷೇನ ಖಾನ ಮಾಡಿವಾಲೆ.
ಗಾಯನ: ತನ್ಮಯಿ ಸರಾಫ್, ಅಬಿಜ್ಞಾ ಹಲಗಿ, ನಂದಿತಾ ಮಠದ
ಶಾಸ್ತ್ರೀಯ ನೃತ್ಯ: ನಾರಾಯಣ ಕಾಟೆ, ಶ್ರೀಶಾ ಶೆಟ್ಟಿ, ವಿದ್ಯಾಶ್ರೀ ರಾವ್, 
ಚಿತ್ರಕಲೆ: ಉತ್ಕರ್ಷ ವಾನಕರ್,  ಸಾಕ್ಷಿ ಕೊಲೆಕಾರ, ನಾರಾಯಣಿ ಕುಸ್ತೆ
 
ಚಿತ್ರಕಲಾ, ಭಾಷಣ, ಗಾಯನ ಹಾಗೂ ಶಾಸ್ತ್ರೀಯ ನೃತ್ಯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ₹ 22 ಸಾವಿರ, ದ್ವಿತೀಯ ಸ್ಥಾನ ₹ 16 ಸಾವಿರ, ತೃತೀಯ ಸ್ಥಾನ ₹ 12 ಸಾವಿರ,  ನಗದು ಹಾಗೂ ಟ್ರೋಫಿಯನ್ನು ನೀಡಲಾಯಿತು.
 
ಸಮೂಹ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ₹ 60 ಸಾವಿರ, ದ್ವಿತೀಯ ಸ್ಥಾನ ಪಡೆದವರಿಗೆ ₹ 50 ಸಾವಿರ, ತೃತೀಯ ಸ್ಥಾನ ಬಂದವರಿಗೆ ₹ 40 ಸಾವಿರ ರೂಪಾಯಿ ನಗದು ಹಾಗೂ ಟ್ರೋಫಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.