ADVERTISEMENT

ರಸ್ತೆ ಸುಧಾರಣೆಗೆ ₹ 15 ಕೋಟಿ ಬಿಡುಗಡೆ: ಶಾಸಕ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 5:33 IST
Last Updated 7 ನವೆಂಬರ್ 2017, 5:33 IST

ಹುಕ್ಕೇರಿ: ತಾಲ್ಲೂಕಿನ ವಿವಿಧೆಡೆ ರಸ್ತೆ ಸುಧಾರಣೆಗೆ ₹ 15 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಉಮೇಶ ಕತ್ತಿ ತಿಳಿಸಿದರು. ತಾಲ್ಲೂಕಿನ ಬೆಳವಿ ಗ್ರಾಮದಲ್ಲಿ ಈಚೆಗೆ ಸಾರಾಪುರ ರಸ್ತೆಗೆ ಕೂಡುವ ಹಾಗೂ ಚಿಕ್ಕೋಡಿ ರಸ್ತೆ ಸುಧಾರಣೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

‘ರಸ್ತೆ ಸುಧಾರಣೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಂಡು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಗ್ರಾಮಸ್ಥರು ರಸ್ತೆ ಸುಧಾರಣೆ ಕಾಮಗಾರಿಗೆ ಸಲಹೆ, ಸೂಚನೆ ನೀಡಬೇಕು. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮುತುವರ್ಜಿ ವಹಿಸಬೇಕು. ಮೂರು ತಿಂಗಳಲ್ಲಿ ಈ ಎಲ್ಲ ರಸ್ತೆಗಳು ಪೂರ್ಣವಾಗಲಿವೆ. ಬೆಳವಿ-ಹುಕ್ಕೇರಿ ಚಿಲ್ಯಾನ ಭಾಂವಿ ಒಳರಸ್ತೆ ಸುಧಾರಣೆಗೆ ಸರ್ಕಾರದಿಂದ ಅನುಮತಿ ದೊರಕಿದ್ದು ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು’ ಎಂದು ಮಾಹಿತಿ ನೀಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಥಳೆಪ್ಪ ದಂಡಿ, ಬಿಜೆಪಿ ಮಂಡಲ ಅಧ್ಯಕ್ಷ ಪರಗೌಡ ಪಾಟೀಲ, ಹುಕ್ಕೇರಿ ಪುರಸಭೆ ಉಪಾಧ್ಯಕ್ಷ ಗುರುರಾಜ ಕುಲಕರ್ಣಿ, ಮುಖಂಡರಾದ ಅಪ್ಪಾಸಾಹೇಬ ಸಾರಾಪುರೆ, ಸತ್ಯಪ್ಪ ನಾಯಿಕ, ಬಸವರಾಜ ಮರಡಿ, ಮಲ್ಲಪ್ಪ ನಾಯಿಕ, ಶಿವನಾಯಿಕ ನಾಯಿಕ, ಎಇಇ ವಿ.ಎನ್. ಪಾಟೀಲ, ಎಇಇ ಅಜೀತ ಪಾಟೀಲ, ಎಇ ಪ್ರಭಾಕರ ಕಾಮತ, ಎಇ ಎಸ್.ಡಿ. ಕಾಂಬಳೆ, ಪಿಡಿಒ ಸದಾಶಿವ ಶೇಂತ್ರಿ, ಗುತ್ತಿಗೆದಾರ ಮಲ್ಲಪ್ಪ ಬಿಸಿರೊಟ್ಟಿ, ಕೆ. ದೊರೆಸ್ವಾಮಿ, ಜಮಾದಾರ ಇದ್ದರು.
See also:

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.