ADVERTISEMENT

‘ವಿವಾಹದ ಹೆಸರಲ್ಲಿ ದುಂದು ವೆಚ್ಚ ಸಲ್ಲ’

​ಪ್ರಜಾವಾಣಿ ವಾರ್ತೆ
Published 18 ಮೇ 2017, 7:04 IST
Last Updated 18 ಮೇ 2017, 7:04 IST

ಸವದತ್ತಿ (ಶಿರಸಂಗಿ): ದುಂದು ವೆಚ್ಚ ಮಾಡಿ ಮಕ್ಕಳ ಕಲ್ಯಾಣ ಮಾಡುವದು ಬಡವರಿಗೆ ಸುಲಭದ ಕೆಲಸವಲ್ಲ. ಇದನ್ನು ಅರಿತು ಸಾಮೂಹಿಕ ವಿವಾಹದ ಮೂಲಕ ಬಡ ಬಧುವರರ ಕಲ್ಯಾಣಕ್ಕಾಗಿ ಉಚಿತ ಸಾಮೂಹಿಕ ವವಾಹ ಆಯೋಜಿ ಸಿದ್ದು ಸ್ವಾಗತಾರ್ಹವಾಗಿದೆ ಎಂದು ಶಾಸಕ ಆನಂದ ಮಾಮನಿ ಹೇಳಿದರು.

ತಾಲ್ಲೂಕಿನ ಶಿರಸಂಗಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲಾ ಆವರಣದಲ್ಲಿ ಡಾ. ಬಿ.ಆರ್. ಅಂಬೇ ಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಸಂಘಟನೆ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಸಾಮೂಹಿಕ ವಿವಾಹಗಳು ಬಡವರ ಪಾಲಿಗೆ ವರದಾನವಾಗಿವೆ ಎಂದರು.

ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ ಸಾಮೂಹಿಕ ವಿವಾಹಗಳು ಎಲ್ಲ ಸಮುದಾಯದ ಜನರನ್ನು ಒಗ್ಗೂಡಿಸುವುದರ ಜತೆಗೆ ಸಮಾನತೆ ಸಾರುತ್ತವೆ. ಇಂತಹ ಮಹತ್ವದ ಕಾರ್ಯಕ್ರಮ ಆಯೋಜಿಸಿದ್ದ ಸಂಘಟನೆಗಳ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ADVERTISEMENT

ಮಾರುತಿ ಬಡೆಮ್ಮನವರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಪಂಚಾಯ್ತಿ ಸದಸ್ಯ ಅಜೀತಕುಮಾರ ದೇಸಾಯಿ, ಎಪಿಎಂಸಿ ಅಧ್ಯಕ್ಷ ಪ್ರಭು ಪ್ರಭುನವರ, ಪುರಸಭೆ ಸದಸ್ಯ ಸುಭಾಸ ರಜಪೂತ, ಮಾಜಿ ಪಿಕೆಪಿಎಸ್ ಅಧ್ಯಕ್ಷೆ ಲಕ್ಷ್ಮೀ ಹೂಲಿ, ವಿನಾಯಕ ಜಾನ್ವೇಕರ, ಆರ್.ಬಿ ಈಟಿ, ಬಸವರಾಜ ಪೂಜಾರ, ಸಮಾಜದ ಮುಖಂಡರಾದ ಮಲ್ಲಪ್ಪ ಕಪಲನ್ನವರ, ಬಸವರಾಜ ಗುಳ್ಳನವರ, ಶೆಟ್ಟೆಪ್ಪಾ ಅಪ್ಪನವರ ಹಾಗೂ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.

ಸಿ.ವಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ ಕುಲಕರ್ಣಿ ನಿರೂಪಿಸಿ ವಂದಿಸಿದರು.

**

ಯುವ ಜನಾಂಗ ಮೋಜು ಮಾಡದೇ ಸಾಮೂಹಿಕ ವಿವಾಹ ಏರ್ಪಡಿಸಿದ್ದು ಅಚ್ಚು ಮೆಚ್ಚಿನ ವಿಷಯವಾಗಿದೆ. ಇಂತಹ ಯುವಕರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ.
-ಮಹಾಂತೇಶ ಕವಟಗಿಮಠ, ವಿಧಾನ ಪರಿಷತ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.