ADVERTISEMENT

ಹೊಸೂರಿನಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 6:58 IST
Last Updated 3 ಡಿಸೆಂಬರ್ 2017, 6:58 IST
ಬೈಲಹೊಂಗಲ ಸಮೀಪದ ಹೊಸೂರ ಗ್ರಾಮದಲ್ಲಿ ಮುಸ್ಲಿಂ ಸಮಾಜದವರು ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು
ಬೈಲಹೊಂಗಲ ಸಮೀಪದ ಹೊಸೂರ ಗ್ರಾಮದಲ್ಲಿ ಮುಸ್ಲಿಂ ಸಮಾಜದವರು ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು   

ಬೈಲಹೊಂಗಲ: ‘ಇಲ್ಲಿಗೆ ಸಮೀಪದ ಹೊಸೂರ ಗ್ರಾಮದಲ್ಲಿ ಮುಸ್ಲಿಂ ಸಮಾಜದವರು ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಜನ್ಮದಿನವನ್ನು ಶನಿವಾರ ಭಕ್ತಿ, ಸಡಗರ, ಸಂಭ್ರಮದಿಂದ ಆಚರಿಸಿದರು.

ಮುಸ್ಲಿಮರು ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಗ್ರಾಮದ ಜಾಮೀಯಾ ಮಸೀದಿಯಿಂದ ದರ್ಗಾವರೆಗೆ ಮೆರವಣಿಗೆ ನಡೆಸಿದರು.

ಮೌಲಾನಾ ಮಹಮ್ಮದಲಿ ಮಲ್ಲಿಕ್, ಮೌಲಾನಾ ಆದಮಅಲಿ ಮಳಗಲಿ ಮಾತನಾಡಿ, ‘ಭೂಮಿಯ ಮೇಲೆ ಜೀವಿಸುವ ಪ್ರತಿಯೊಬ್ಬರಿಗೂ ಕರುಣೆ ತೋರುವ ಮೂಲಕ ಸಂಕಷ್ಟದಲ್ಲಿ ಇರುವವರಿಗೆ ಕೈಲಾದ ನೆರವಿನ ಹಸ್ತ ಚಾಚುವನೇ ನಿಜವಾದ ಮುಸಲ್ಮಾನ’ ಎಂದು ಮನವರಿಕೆ ಮಾಡಿದರು.

ADVERTISEMENT

ಹಿರಿಯರಾದ ಕಾಶೀಮಅಲಿ ಮಳಗಲಿ, ಗ್ರಾಮ ಪಂಚಾಯ್ತಿ ಸದಸ್ಯ ದಿಲಾವರ ಧೂಪದಾಳ, ಅಮೀನ್‌ಸಾಬ ಜಮಾದಾರ, ಮೊರಾದ್ಲಿ ಜಮಾದಾರ, ಸಯ್ಯದ ಮಾರಿಹಾಳ, ಮುನ್ನೀರ್ ಶೇಖ, ಶಕೀಲ ಶೇಖ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.