ADVERTISEMENT

ಅಂತರರಾಷ್ಟ್ರೀಯ ಖ್ಯಾತಿ ಗಳಿಕೆಗೆ ಚಿತ್ರಕಲಾ ಪರಿಷತ್‌ ತಯಾರಿ

​ಪ್ರಜಾವಾಣಿ ವಾರ್ತೆ
Published 20 ಮೇ 2017, 19:55 IST
Last Updated 20 ಮೇ 2017, 19:55 IST
ಬಿದರಿ ಕಲಾವಿದರಾದ ಅಶೋಕ್, ಸಯೀದ್, ಅಬ್ದುಲ್ ನಶಿತ್ ಹಾಗೂ ಶಫೀವುದ್ಧೀನ್ (ಕುಳಿತವರು) ಅವರನ್ನು ಸನ್ಮಾನಿಸಲಾಯಿತು. ಚಿತ್ರಕಲಾ ಪರಿಷತ್ ಪ್ರಾಂಶುಪಾಲ ತೇಜೇಂದ್ರ ಸಿಂಗ್ ಬಾವ್ನಿ, ಸದಸ್ಯ ವಿಠಲ್ ಭಂಡಾರಿ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಎನ್.ಮಂಜುಳಾ, ಪರಿಷತ್ ಪ್ರಧಾನ ಕಾರ್ಯದರ್ಶಿ ಎಂ.ಜೆ.ಕಮಲಾಕ್ಷಿ, ಆಜೀವ ಸದಸ್ಯ ರಮೇಶ್ ಹಾಗೂ ಅಧ್ಯಕ್ಷ ಬಿ.ಎಲ್.ಶಂಕರ್ ಇದ್ದರು.

ಬೆಂಗಳೂರು: ‘ಚಿತ್ರಕಲಾ ಪರಿಷತ್‌ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ದೊರಕಿಸಿಕೊಡುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಜತೆ ಒಪ್ಪಂದ ಮಾಡಿಕೊಳ್ಳುವ ಚಿಂತನೆಯಿದೆ’ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಅವರು ಹೇಳಿದರು.

ನಗರದಲ್ಲಿ ಶನಿವಾರ ಬಿದರಿ ಕಲೆಯ ಪುನರುಜ್ಜೀವನ ಕಾರ್ಯಾಗಾರ ಹಾಗೂ ಪ್ರದರ್ಶನದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಉನ್ನತ ಶಿಕ್ಷಣ ಇಲಾಖೆಯಿಂದ ಪ್ರತಿವರ್ಷ ₹ 1.5 ಕೋಟಿ ಅನುದಾನ ಸಿಗುತ್ತಿದೆ. ಸಂಪನ್ಮೂಲದ ಕೊರತೆಯಿಂದಾಗಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲು ಆಗುತ್ತಿಲ್ಲ. ಪ್ರವಾಸೋದ್ಯಮ ಇಲಾಖೆ ಜತೆ ಎರಡು ತಿಂಗಳಲ್ಲಿ ಒಪ್ಪಂದ ಮಾಡಿಕೊಳ್ಳಲಿದ್ದೇವೆ’ ಎಂದು ಹೇಳಿದರು.

‘ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿದ ದೇಶದ ಕಲಾವಿದರಿಂದ ನಗರದಲ್ಲಿ ಕಾರ್ಯಾಗಾರ, ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಸಂತೆಯನ್ನು ಏರ್ಪಡಿಸುವ ಚಿಂತನೆಯಿದೆ. ‘ಚಿತ್ರ ಸಂತೆ’ ರೀತಿಯೇ ರಾಷ್ಟ್ರ ಮಟ್ಟದಲ್ಲೂ ‘ಆರ್ಟ್ ಫೇರ್’  ಏರ್ಪಡಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ನಶಿಸುವ ಮುನ್ನ ಎಚ್ಚೆತ್ತು ಪ್ರೋತ್ಸಾಹಿಸಿ: ‘ಬಿದರಿ ಕಲೆ ನಶಿಸುವ ಮುನ್ನಸರ್ಕಾರ, ಜನರು ಎಚ್ಚೆತ್ತುಕೊಳ್ಳಬೇಕು’ ಎಂದು ಕಲಾವಿದ ಮೊಹಮ್ಮದ್ ಶಫೀವುದ್ದೀನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT