ADVERTISEMENT

ಅತ್ಯಾಚಾರ ವಿರುದ್ಧ ಆಕ್ರೋಶ...

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 20:40 IST
Last Updated 5 ಅಕ್ಟೋಬರ್ 2015, 20:40 IST

ಬೆಂಗಳೂರು: ನಗರದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಮರುಕಳಿಸುತ್ತಿವೆ.  ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂಬ ಮಾತುಗಳು ಜನರಿಂದ ಕೇಳಿ ಬರುತ್ತಿವೆ. 

ರಾಜ್ಯದಲ್ಲಿ ಕಳೆದ ಒಂದು ದಶಕದಲ್ಲಿ  ಐದು ಸಾವಿರಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆದಿವೆ. ಅದರಲ್ಲಿ 600ಕ್ಕೂ ಪ್ರಕರಣಗಳು ನಗರದಲ್ಲಿ ನಡೆದಿವೆ ಎಂಬ ಅಂಶವನ್ನು ಪೊಲೀಸ್‌ ಇಲಾಖೆಯ ಅಂಕಿಅಂಶಗಳೇ ಹೇಳುತ್ತವೆ.

ನಗರವು ಮಾಹಿತಿ, ತಂತ್ರಜ್ಞಾನ ಕ್ಷೇತ್ರಗಳಿಗೆ ನೆಲೆ ಒದಗಿಸಿದೆ. ಹೀಗಾಗಿ  ಬೇರೆ ರಾಜ್ಯಗಳಿಂದ ನಗರಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಸಾಮಾಜಿಕ ಬದಲಾವಣೆ ಮತ್ತು ಒತ್ತಡದಿಂದ ವೈವಾಹಿಕ ಸಂಬಂಧಗಳು ಹದಗೆಡುತ್ತಿವೆ.

ಅಂತರ್ಜಾಲದಲ್ಲಿ ಲೈಂಗಿಕ ದೃಶ್ಯಗಳನ್ನು ವೀಕ್ಷಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇವುಗಳನ್ನು ನೋಡುವ ವಿಕೃತ ಮನೋಭಾವದವರು ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರ ಎಸಗುತ್ತಾರೆ ಎಂದು ಮನೋವೈದ್ಯರು ವಿಶ್ಲೇಷಿಸುತ್ತಾರೆ.

ದೆಹಲಿ: ನಿರ್ಭಯಾ ಪ್ರಕರಣ: ದೆಹಲಿಯಲ್ಲಿ 2012ರ ಡಿಸೆಂಬರ್ 16ರಂದು 23 ವರ್ಷದ ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿನಿ ತನ್ನ ಗೆಳೆಯನ ಜೊತೆಗಿದ್ದಾಗ ಚಲಿಸುವ ಬಸ್‌ನಲ್ಲಿ ಆರು ಮಂದಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು.   ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಅವರು ಡಿಸೆಂಬರ್ 29ರಂದು ಕೊನೆಯುಸಿರೆಳೆದಿದ್ದರು.

*
ನಗರದಲ್ಲಿ ಹಿಂದಿನ ಸಾಮೂಹಿಕ ಅತ್ಯಚಾರ ಪ್ರಕರಣಗಳು...
* 2014ರ ಆಗಸ್ಟ್‌ 20: ತಾವರೆಕೆರೆ ಸಮೀಪದ ತಿಪ್ಪಗೊಂಡನಹಳ್ಳಿಯಲ್ಲಿ ಡ್ರಾಪ್‌ ಕೊಡುವ ನೆಪದಲ್ಲಿ ಬಿಹಾರ ಮೂಲದ ಯುವತಿ ಮೇಲೆ ಕೃತ್ಯ ಎಸಗಲಾಗಿತ್ತು.

*2013ರ ನವೆಂಬರ್‌ 24: ಎಚ್‌ಎಎಲ್‌ ಗೆಸ್ಟ್‌ಗೌಸ್‌್ ಸಮೀಪದ ನೀಲಗಿರಿ ತೋಪಿನಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು.

*2012ರ ಅಕ್ಟೋಬರ್ 18: ನಗರದ ಹೊರವಲಯದ ಮರಿಯಪ್ಪನಪಾಳ್ಯ ಬಳಿಯ ಜಗಜ್ಯೋತಿ ಲೇಔಟ್‌ನಲ್ಲಿ ಉತ್ತರ ಭಾರತ ಮೂಲದ ಯುವತಿ ಮೇಲೆ ಎಂಟು ಮಂದಿ ಯುವಕರಿಂದ ಅತ್ಯಾಚಾರ.

* 2012ರ ಅಕ್ಟೋಬರ್‌ 13: ನಗರದ ಜ್ಞಾನಭಾರತಿ ಆವರಣದಲ್ಲಿ ಕಾನೂನು ವಿದ್ಯಾರ್ಥಿನಿಯ ಮೇಲೆ ಏಳೆಂಟು ಯುವಕರಿಂದ ಸಾಮೂಹಿಕ ಅತ್ಯಾಚಾರ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.