ADVERTISEMENT

ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟ

ಮಾನ್ಯತೆ ಪರಿಶೀಲಿಸಿ ಪ್ರವೇಶ ಪಡೆಯಲು ಶಿಕ್ಷಣ ಇಲಾಖೆ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 20:07 IST
Last Updated 3 ಜೂನ್ 2015, 20:07 IST

ಬೆಂಗಳೂರು: ಶೈಕ್ಷಣಿಕ ಸಾಲಿನಲ್ಲಿ ಮಕ್ಕಳನ್ನು ಶಾಲೆಗಳಿಗೆ ದಾಖಲಿಸುವ ಮುನ್ನ ಪೋಷಕರು ಶಾಲೆಯ ಮಾನ್ಯತೆ ಪರಿಶೀಲಿಸಿ, ಅದು ಅಧಿಕೃತವೇ ಎಂದು ದೃಢಪಡಿಸಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

ಕೆಲ ಖಾಸಗಿ ಶಾಲೆಗಳು 2015–16ನೇ ಸಾಲಿಗೆ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆ ತೆರೆಯಲು ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದು, ಆ ಪ್ರಸ್ತಾವಗಳನ್ನು ಈಗಾಗಲೇ ಇಲಾಖಾ ವತಿಯಿಂದ ಪರಿಶೀಲಿಸಿ ಆಯಾಯ ಹಂತದಲ್ಲಿ ಅನುಮತಿ ನೀಡಲಾಗಿದೆ. ಆದರೆ, ಕೆಲ ಪ್ರಸ್ತಾವಗಳನ್ನು ನಿಯಮಾನುಸಾರ ಮಾಹಿತಿಗಳು ಇಲ್ಲದ ಕಾರಣ ತಿರಸ್ಕರಿಸಲಾಗಿದೆ. ಅಂತಹ ಶಾಲೆಗಳು ಮಕ್ಕಳನ್ನು ದಾಖಲಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.

ಉತ್ತರ ವಲಯ-1 ಮತ್ತು 3ರಲ್ಲಿರುವ ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸಲಾಗಿದೆ. ಈ ಕೆಳಕಂಡ ಶಾಲೆಗಳಲ್ಲಿ ಪ್ರವೇಶ ಪಡೆಯಬಾರದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಉತ್ತರ ವಲಯ-1 ಮತ್ತು 3ರಲ್ಲಿರುವ ಶಾಲೆಗಳ ವಿವರ
ವಿದ್ಯಾ ಪಬ್ಲಿಕ್ ಶಾಲೆ ಕಮ್ಮಗೊಂಡನಹಳ್ಳಿ, ಮಾಗಡಿ ಕೆಂಪೇಗೌಡ ಶಾಲೆ ಕಾಮಾಕ್ಷಿಪಾಳ್ಯ, ಶೀಬಾ ಶಾಲೆ ಕಾಮಾಕ್ಷಿಪಾಳ್ಯ, ಎಸ್.ಬಿ.ಐ.ಓ.ಎ. ಶಾಲೆ ಬಸವೇಶ್ವರನಗರ, ಶ್ರೀ ರಾಘವೇಂದ್ರ ಶಾಲೆ ಕಾಮಾಕ್ಷಿಪಾಳ್ಯ, ಜಿ.ಕೆ.ಕಾನ್ವೆಂಟ್ ಬಸವೇಶ್ವರನಗರ, ಕಿಡ್ಸ್ ಕ್ಯಾಂಪಸ್ ಇಂಟರ್‌ನ್ಯಾಷನಲ್ ಶಾಲೆ ನಂದಿನಿ ಬಡಾವಣೆ, ನ್ಯೂ ಕೇಂಬ್ರಿಡ್ಜ್ ಶಾಲೆ ನೆಲಗೆದರನಹಳ್ಳಿ, ಹೊಯ್ಸಳ ವಿದ್ಯಾ ಸಂಸ್ಥೆ ಶ್ರೀಗಂಧ ಕಾವಲು, ಸ್ಮಾರ್ಟ್ ಕಿಡ್ಸ್ ಶಾಲೆ ಮಾಚಿಹಳ್ಳಿ, ನ್ಯೂ ಕಾರ್ಮೆಲ್ ಶಾಲೆ ನಂದಿನಿ ಬಡಾವಣೆ, ಪರಿಕ್ರಮ ಶಾಲೆ ನಂದಿನಿ ಬಡಾವಣೆ, ಎಸ್‌ಟಿ. ಸೋಫಿಯಾ ಶಾಲೆ ಜೆ.ಸಿ.ನಗರ, ನ್ಯೂ ಶಾಂತಿನಿಕೇತನ ಶಾಲೆ ಕಮಲಾನಗರ, ನ್ಯೂ ಆಕ್ಸ್‌ಫರ್ಡ್ ಶಾಲೆ ರಾಜಾಜಿನಗರ, ಗೋಕುಲ ಕಾನ್ವೆಂಟ್ ರಾಜಾಜಿನಗರ, ಖೋಡೆ ಶಾಲೆ ರಾಜಾಜಿನಗರ, ಬ್ರೈಟ್ ಶಾಲೆ ಶಿವನಗರ, ಅರುಣೋದಯ ಶಾಲೆ ವಿಘ್ನೇಶನಗರ, ಸೇಂಟ್ ಜಾನ್ಸ್ ಶಾಲೆ ಹೇರೋಹಳ್ಳಿ, ಯಾ ಚೇತನ್ ಕಾನ್ವೆಂಟ್ ಬ್ಯಾಡರಹಳ್ಳಿ, ಇಂಡೋ ಅಮೆರಿಕನ್ ಶಾಲೆ ರಾಜಗೋಪಾಲನಗರ, ಸನ್ಮತಿ ಶಾಲೆ ಹೆಗ್ಗನಹಳ್ಳಿ, ಬಿಷಪ್ ಕಾರ್ಮೆಲ್ ಶಾಲೆ ಹೆಗ್ಗನಹಳ್ಳಿ, ವಿಶ್ವಭಾರತಿ ಶಾಲೆ ಉಲ್ಲಾಳ ಉಪನಗರ, ಲಯನ್ ಸೇವಾ ಭಾರತಿ ಉಲ್ಲಾಳ ಉಪನಗರ, ಐ.ಎಸ್.ಎನ್.ಆರ್. ಕಾನ್ವೆಂಟ್ ಕೊಡಿಗೆಹಳ್ಳಿ, ವಿದ್ಯಾಪ್ರಿಯ ಶಾಲೆ ಲಗ್ಗೆರೆ, ಬಿ.ಟಿ.ಜಿ. ಶಾಲೆ ಲಗ್ಗೆರೆ, ಅನಸ ಶಾಲೆ ಲಕ್ಷ್ಮಿದೇವಿನಗರ, ಸ್ಮಾರ್ಟ್‌ಪರ್ಲ್ ಶಾಲೆ ಮಾಚೋಹಳ್ಳಿ, ನಾಡಿಗೇರ ಶಾಲೆ ಮಾದವಾರ, ಪವಿತ್ರ ಶಾಲೆ ಉಲ್ಲಾಳು, ನಳಂದಾ ಕ್ರೆಂಟ್ ಸಹಕಾರ ಸಂಘದ ಶಾಲೆ ಬಸವೇಶ್ವರ ನಗರ, ವಾಣಿ ವಿದ್ಯಾ ಮಂದಿರ ಲಗ್ಗೆರೆ, ವೆಂಕಟ ಶಾಲೆ ಮಾಚೋಹಳ್ಳಿ, ಲಂಡನ್ ನೋಬೆಲ್ ಶಾಲೆ ಆಂಧ್ರಹಳ್ಳಿ, ಮಿತ್ರವೃಂದ ವಿದ್ಯಾಲಯ ಜೆ.ಸಿ.ನಗರ, ವಿದ್ಯಾಸದನ ಶಾಲೆ ಕಮಲನಗರ, ಕೆ.ಎಸ್.ಆರ್.ಎಸ್. ಪಬ್ಲಿಕ್ ಶಾಲೆ ರಾಜಾಜಿನಗರ, ಅರೈಸ್ ಅವೇಕ್ ಶಾಲೆ ಸುಂಕದಕಟ್ಟೆ, ಮದರ್ ಪಬ್ಲಿಕ್ ಶಾಲೆ ಜೆ.ಸಿ.ನಗರ,  ಐ.ಆರ್.ಪಬ್ಲಿಕ್ ಶಾಲೆ ಲಗ್ಗೆರೆ, ಪಿ.ಎಸ್.ಎಂ. ಶಾಲೆ ಮಾದನಾಯಕನಹಳ್ಳಿ, ಎಸ್.ಎಸ್.ಐ.ಪಿ. ಶಾಲೆ ಮಾದನಾಯಕನಹಳ್ಳಿ, ಶ್ರೀಗಂಧ ವಿದ್ಯೋದಯ ಶಾಲೆ ಶ್ರೀಗಂಧ ಕಾವಲು, ಬ್ರಿಲಿಯಂಟ್ ಪಬ್ಲಿಕ್ ಶಾಲೆ ಶ್ರೀಗಂಧ ಕಾವಲು, ಹೋಲಿ ಏಂಜೆಲ್ ಶಾಲೆ ಬಾಲಾಜಿ ನಗರ, ಇಂಡಿಯನ್ ನ್ಯಾಷನಲ್ ಶಾಲೆ ಮಾದನಾಯಕನಹಳ್ಳಿ, ವಿದ್ಯಾ ಸಾಮ್ರಾಟ್ ಶಾಲೆ ಬ್ಯಾಡರಹಳ್ಳಿ

ದಕ್ಷಿಣ ವಲಯ-3ರ ಅನಧಿಕೃತ ಶಾಲೆಗಳ ವಿವರ: ಸೇಂಟ್ ಜಾನ್ ಆಫ್ ಆರ್ಚ್ ಫೌಂಡೇಞನ್ ಶಾಲೆ ಎಚ್.ಎಸ್.ಆರ್. ಬಡಾವಣೆ, ಲಾರೆನ್ಸ್ ಪ್ರಾಥಮಿಕ ಶಾಲೆ ತಿಲಕ್‌ನಗರ, ದಿ ಲಯನ್ಸ್ ಶಾಲೆ ಆಸ್ಟೀನ್ ಟೌನ್,  ಸನ್‌ರೈಸ್ ಶಾಲೆ ನೀಲಸಂದ್ರ, ರಾಜೀವ್‌ಗಾಂಧಿ ಮೆಮೋರಿಯಲ್ ಶಾಲೆ ಅಂಬೇಡ್ಕರ್ ನಗರ, ಎಸ್.ಕೆ.ಆಂಗ್ಲ ಶಾಲೆ ಮಂಗಮ್ಮನಪಾಳ್ಯ, ಆಲ್ ನೂರ್ ಶಾಲೆ ಮಂಗಮ್ಮನಪಾಳ್ಯ, ಡ್ಯಾನಿಯಲ್ ಶಾಲೆ ಮಂಗಮ್ಮನಪಾಳ್ಯ, ಸೇಂಟ್ ಸಾರಾಸ್ ಇಂಗ್ಲೀಷ್ ಶಾಲೆ ವಿನಾಯಕನಗರ, ಎಂ.ಇ.ಎಸ್ ಆಂಗ್ಲ ಶಾಲೆ ಜಯನಗರ 4ನೇ ಬ್ಲಾಕ್, ಮದರ್‌ ಮೇರಿ ಆಂಗ್ಲ ಶಾಲೆ ಹೊಸಗುರಪ್ಪನಪಾಳ್ಯ, ಮದರ್ ತೆರೇಸಾ ಶಾಲೆ ಹುಳಿಮಾವು, ಪ್ರಿನ್ಸ್ಲೀ ಪಬ್ಲಿಕ್ ಶಾಲೆ ಹೊಂಗಸಂದ್ರ, ಆ್ಯಕ್ಟೀವ್ ಪಬ್ಲಿಕ್ ಸ್ಕೂಲ್ ಹೊಮ್ಮದೇವನಹಳ್ಳಿ, ಸಹನಾ ವಿದ್ಯಾಮಂದಿರ ನಾಗನಾಥಪುರ,  ಜ್ಞಾನಭಾರತಿ ಶಾಲೆ ಕೋಣನಕುಂಟೆ, ವಿದ್ಯಾನಿಕೇತನ ಶಾಲೆ ಜರಗನಹಳ್ಳಿ, ಸಿಲ್ವರ್ ಸ್ಟ್ರಿಂಗ್ ಶಾಲೆ ಪುಟ್ಟೇನಹಳ್ಳಿ, ವಾತ್ಸಲ್ಯ ಶಾಲೆ ಕೊತ್ತನೂರು, ಅಂಕಿತ ಶಾಲೆ ಹುಳಿಮಾವು, ಸೇಂಟ್ ಪೀಟರ್ ಶಾಲೆ ಹುಳಿಮಾವು, ಮದರ್ ತೆರೇಸಾ ಶಾಲೆ ಹುಳಿಮಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT