ADVERTISEMENT

ಇನ್ನೂ ಮೂರು ದಿನ ಮಳೆ 

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2016, 20:00 IST
Last Updated 2 ಡಿಸೆಂಬರ್ 2016, 20:00 IST

ಬೆಂಗಳೂರು: ‘ನಾದ’ ಚಂಡಮಾರುತದಿಂದಾಗಿ ನಗರದಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗಿದೆ. ಜತೆಗೆ ಇನ್ನೂ ಮೂರು ದಿನಗಳ ಕಾಲ ಇದೇ ಸ್ಥಿತಿ ಮುಂದುವರಿಯಲಿದೆ.

‘ಚಂಡಮಾರುತವೂ ತಮಿಳುನಾಡಿನ ಕೊಡ್ಲೂರು ಪ್ರವೇಶಿಸಿದ್ದು, ಹೀಗಾಗಿ ಕರ್ನಾಟಕದ ಹಲವೆಡೆ ಮಳೆಯಾಗುತ್ತಿದೆ. ಡಿ. 3ರಿಂದ ಚಂಡಮಾರುತದ ಪ್ರಭಾವ ಕಡಿಮೆಯಾಗಲಿದ್ದು, ಬಳಿಕ ಯಥಾಸ್ಥಿತಿ ಮುಂದುವರಿಯಲಿದೆ’ ಎಂದು ಹವಾಮಾನ ಇಲಾಖೆಯ ಪ್ರಭಾರ ನಿರ್ದೇಶಕ ಸುಂದರ ಎಂ.ಮೇತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರ ವ್ಯಾಪ್ತಿಯಲ್ಲಿ ಗುರುವಾರ 5.2 ಎಂ.ಎಂ ಮಳೆಯಾಗಿದ್ದು, ಎಚ್‌ಎಎಲ್‌್ ವ್ಯಾಪ್ತಿಯಲ್ಲಿ 3.2 ಎಂ.ಎಂ ಮಳೆ ಸುರಿದಿದೆ. ಜತೆಗೆ  ಮಳೆ ವೇಳೆ ಬೀಸಿದ ಗಾಳಿಯಿಂದಾಗಿ ಮಲ್ಲೇಶ್ವರದ 18ನೇ ಕ್ರಾಸ್‌ನ ಕೇಂದ್ರೀಯ ವಿದ್ಯಾಲಯ ಸಮೀಪದಲ್ಲಿ ಮರವೊಂದು ಉರುಳಿ ಬಿದ್ದಿತ್ತು. ವಿಷಯ ತಿಳಿದ ಬಿಬಿಎಂಪಿ ಸಿಬ್ಬಂದಿ, ಸ್ಥಳಕ್ಕೆ ಹೋಗಿ ಮರ ತೆರವುಗೊಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.