ADVERTISEMENT

ಕೊಬ್ಬಿನಾಂಶವನ್ನು ಪತ್ತೆ ಹಚ್ಚುವ ‘ಕೊಲೆಸ್ಟ್ರಾಲ್‌ ಕಿಟ್‌’

ಸುದ್ದಿ 2 ನಿಮಿಷ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2015, 19:34 IST
Last Updated 26 ಮಾರ್ಚ್ 2015, 19:34 IST

ಬೆಂಗಳೂರು: ನ್ಯೂ ಹೊರೈಜನ್‌ ಎಂಜನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ಯಾಕೇಜ್ಡ್‌ ಮತ್ತು ಸಂಸ್ಕರಿತ ಆಹಾರದಲ್ಲಿನ ಕೊಬ್ಬಿನಾಂಶವನ್ನು ಪತ್ತೆ ಹಚ್ಚುವ ‘ಕೊಲೆಸ್ಟ್ರಾಲ್‌ ಕಿಟ್’ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿನಿ ಅಪೇಕ್ಷಾ ‘ಸಂಸ್ಕರಿತ ಆಹಾರ ಪದಾರ್ಥಗಳ ಲಕೋಟೆಯ ಮೇಲೆ ಕಬ್ಬಿನಾಂಶ ಇಲ್ಲವೆಂದು ನಮೂದಿಸಲಾಗುತ್ತದೆ. ಆದರೆ, ಅದರಲ್ಲಿ ಕಬ್ಬಿನಾಂಶ ಇರುತ್ತದೆ. ಕಿಟ್‌ ಮೂಲಕ ಅದನ್ನು ಸುಲಭವಾಗಿ ಕಂಡುಹಿಡಿಯಬಹುದು’ ಎಂದು ಹೇಳಿದರು.

‘ಈ ಕಿಟ್‌ ಅನ್ನು ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಪ್ರತಿಮಾ ಬಂಟೆಲ್‍ವಾಲ್ ಅವರ ಮಾರ್ಗದರ್ಶನದಲ್ಲಿ ತಯಾರಿಸಿದ್ದು,  ದೇಹದಲ್ಲಿನ ಕೊಬ್ಬಿನಾಂಶವನ್ನೂ ಈ ಕಿಟ್ ಮೂಲಕ ಕಂಡುಕೊಳ್ಳಬಹುದು’ ಎಂದರು.

ವಿದ್ಯಾರ್ಥಿನಿ ಮೋನಿಕಾ ‘ಸಿಲಿಕಾ ಜೆಲ್, ಟಿಎಲ್‍ಸಿ ಪ್ಲೇಟ್ಸ್, ಹೆಕ್ಸೆನ್, ಎಸೆಟಿಕ್ ಆ್ಯಸಿಡ್, ಪರಿಶುದ್ಧ ಕೊಬ್ಬು ಹಾಗೂ ಕ್ಯಾಂಡಲ್ ಅನ್ನು ಒಳಗೊಂಡ ಈ ಕಿಟ್‌ ತಯಾರಿಕಾ ವೆಚ್ಚ 150 ರೂಪಾಯಿ ಆಗಿದ್ದು, 20 ನಿಮಿಷದಲ್ಲಿ ಮನೆಯಲ್ಲಿಯೇ ಕೊಬ್ಬಿನ ಪ್ರಮಾಣವನ್ನು ಪತ್ತೆ ಹಚ್ಚಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.