ADVERTISEMENT

‘ಗೋ-ಕಾರ್ಟ್ ವಾಹನ’ ತಯಾರಿಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:47 IST
Last Updated 25 ಮೇ 2017, 19:47 IST
ಗೋಕಾರ್ಟ್‌ ವಾಹನ ಹಾಗೂ ಎಲೆಕ್ಟ್ರಿಕ್‌ ಬೈಕ್ ಚಲಾಯಿಸಿದರು
ಗೋಕಾರ್ಟ್‌ ವಾಹನ ಹಾಗೂ ಎಲೆಕ್ಟ್ರಿಕ್‌ ಬೈಕ್ ಚಲಾಯಿಸಿದರು   

ಬೆಂಗಳೂರು: ನಗರದ ಸಾಯಿರಾಮ್ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿ ಗಳು ರೂಪಿಸಿದ ವಿನೂತನ ತಂತ್ರ ಜ್ಞಾನದ ವಾಹನಗಳನ್ನು ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಅನಾವರಣ ಮಾಡ ಲಾಯಿತು.

‘ಕಾಲೇಜಿನ ವಿದ್ಯಾರ್ಥಿನಿಯರು ಸಿದ್ಧಪಡಿಸಿದ ‘ಗೋ-ಕಾರ್ಟ್ ವಾಹನ’ವು ಜನವರಿಯಲ್ಲಿ ರಾಷ್ಟ್ರೀಯ ಗೋ-ಕಾರ್ಟ್ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿತ್ತು. ಇ-ಬೈಕ್ ತಂಡವು ರಾಷ್ಟ್ರೀಯ ಮಟ್ಟದ ಇ-ಬೈಕ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಜಯಿಸಿತ್ತು’ ಎಂದು ಪ್ರಾಂಶುಪಾಲ ಡಾ.ವಿಜಯಕುಮಾರ್ ತಿಳಿಸಿದರು.

‘ಜನವರಿಯಲ್ಲಿ ನಡೆದ ರಾಷ್ಟ್ರೀಯ ಗೋ-ಕಾರ್ಟ್ ಚಾಂಪಿಯನ್‌ಶಿಪ್‌ನಲ್ಲಿ ವಿದ್ಯಾರ್ಥಿಗಳ ಗೋ-ಕಾರ್ಟ್ ತಂಡವು ಬೆಸ್ಟ್-ಆಟೋಕ್ರಾಸ್, ಉತ್ತಮ ಚಾಲಕ ಮತ್ತು ಬೆಸ್ಟ್-ಸ್ಕಿಡ್ ಪ್ಯಾಡ್ ವಿಭಾಗಗಳಲ್ಲಿ ಮೊದಲನೇ ಸ್ಥಾನಗಳಿಸಿತ್ತು. ಆಂಧ್ರ ಪ್ರದೇಶದಲ್ಲಿ ಮಾರ್ಚ್‌ನಲ್ಲಿ ಸೌರಶಕ್ತಿ ಚಾಲಿತ ವಾಹನಗಳ ಸ್ಪರ್ಧೆಯಲ್ಲಿ ಅಶ್ವ ತಂಡ ಮೂರನೇ ಸ್ಥಾನ ಪಡೆದಿತ್ತು’ ಎಂದರು.

ADVERTISEMENT

‘ಬೆಂಕಿ ದುರಂತದ ವೇಳೆ ಬೆಂಕಿ ನಂದಿಸುವ ಯಂತ್ರವನ್ನು ದ್ರೋಣ ತಂಡ ಸಿದ್ಧಪಡಿಸಿದೆ. ಒಣ ಕಸ ಸಂಗ್ರಹ ಯಂತ್ರ, ರಾಸಾಯನಿಕಗಳನ್ನು ಸಿಂಪಡಿಸುವ ಯಂತ್ರವನ್ನು ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದಾರೆ. ಅಶ್ವ ರೇಸ್ ಕಾರು ಯಾವುದೇ ಯಾಂತ್ರಿಕ ಅಥವಾ ವಿದ್ಯುತ್ ಸಂಬಂಧಿ ಸಮಸ್ಯೆಗಳಿಲ್ಲದೆ 85 ಕಿ.ಮೀ. ದೂರವನ್ನು ಚಲಿಸಿದೆ. 1.5 ಗಂಟೆಯಲ್ಲಿ ಯಾವುದೇ ಬ್ಯಾಟರಿ ಚಾರ್ಜ್ ಇಲ್ಲದೆ 30 ಕಿಮೀ ಸಂಚರಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.