ADVERTISEMENT

ಗೌರವಧನ ಹೆಚ್ಚಿಸಲು ಆಯಾಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2017, 19:59 IST
Last Updated 16 ಮಾರ್ಚ್ 2017, 19:59 IST

ಬೆಂಗಳೂರು: ‘ಸರ್ಕಾರಿ ಶಾಲೆಗಳಲ್ಲಿನ ಆಯಾಗಳಿಗೆ ತಿಂಗಳಿಗೆ ₹14 ಸಾವಿರ ಗೌರವಧನ ಅಥವಾ ‘ಡಿ’ ದರ್ಜೆಯ ನೌಕರರ ಸ್ಥಾನಮಾನ ನೀಡಬೇಕು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ಮಹಿಳಾ ಆಯಾಗಳ ಸಂಘ ಒತ್ತಾಯಿಸಿದೆ.

ಸಂಘದ ಅಧ್ಯಕ್ಷೆ ಲಕ್ಷ್ಮಮ್ಮ ಪತ್ರಿಕಾ ಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ‘ರಾಜ್ಯದ ಶಾಲೆಗಳಲ್ಲಿ 1977ರಿಂದ 1,960 ಆಯಾಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಶಾಲೆಯ ಕೊಠಡಿಗಳು, ಮೈದಾನ, ಶೌಚಾಲಯವನ್ನು ಶುಚಿಯಾಗಿರಿಸುವ ಕೆಲಸ ಮಾಡುತ್ತಿದ್ದಾರೆ.

ಪ್ರಸ್ತುತ ಕೇವಲ ₹ 6 ಸಾವಿರ ಗೌರವಧನವನ್ನು ಸರ್ಕಾರ ನೀಡುತ್ತಿದೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟ. ಹಾಗಾಗಿ ₹14 ಸಾವಿರ ಗೌರವಧನ ನಿಗದಿ ಪಡಿಸಬೇಕು’ ಎಂದು ಒತ್ತಾಯಿಸಿದರು.

‘ಅನುದಾನಿತ ಶಾಲೆಗಳ ಆಯಾಗಳಿಗೆ ಸರ್ಕಾರ ₹12 ಸಾವಿರ ಗೌರವಧನ ಬಿಡುಗಡೆ ಮಾಡುತ್ತಿದೆ. ಆದರೆ ಅಷ್ಟೇ ಧನವನ್ನು ಸರ್ಕಾರಿ ಶಾಲೆಗಳ ಆಯಾಗಳಿಗೆ ನೀಡುತ್ತಿಲ್ಲ’ ಎಂದು ದೂರಿದರು.

ಪ್ರತಿಭಟನೆ ರದ್ದು: ‘ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ  ಮಾ. 20 ರಂದು ಪ್ರತಿಭಟನೆ ಹಮ್ಮಿಕೊಂಡಿದ್ದೆವು. ಬೇಡಿಕೆ ಈಡೇರಿಸುವುದಾಗಿ ಸಚಿವ ತನ್ವೀರ್‌ ಸೇಠ್‌ ಭರವಸೆ ನೀಡಿದ್ದಾರೆ. ಹಾಗಾಗಿ ಪ್ರತಿಭಟನೆ ಹಿಂಪಡೆದಿದ್ದೇವೆ’ ಎಂದು ಸಂಘದ ಕಾನೂನು ಸಲಹೆಗಾರ ಕೋ.ವಿಜಯಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.