ADVERTISEMENT

‘ತಂತಿರಹಿತ ತಂತ್ರಜ್ಞಾನ ಸಂಶೋಧನೆಗೆ ಮುಂದಾಗಿ’

​ಪ್ರಜಾವಾಣಿ ವಾರ್ತೆ
Published 26 ಮೇ 2018, 19:49 IST
Last Updated 26 ಮೇ 2018, 19:49 IST
ಡಾ.ಬಿ.ಕೆ. ಮಂಜುನಾಥ್, ಡಾ.ಆರ್.ವಿ.ಪ್ರವೀಣ್ ಗೌಡ, ಪ್ರೊ.ಸುಂದರ್ ರಾಜನ್, ಡಾ.ಎಂ.ಎಚ್. ಕೋರಿ, ಎಸ್.ಎನ್.ವಿ.ಎಲ್. ನರಸಿಂಹರಾಜು, ಸುಹಾಸ್ ಶಿವಣ್ಣ, ಆರ್.ನಾಗರಾಜ್ ಮತ್ತು ಡಾ.ಶಶಿಧರ್ ಸಮ್ಮೇಳನದ ಕೈಪಿಡಿ ಬಿಡುಗಡೆ ಮಾಡಿದರು.
ಡಾ.ಬಿ.ಕೆ. ಮಂಜುನಾಥ್, ಡಾ.ಆರ್.ವಿ.ಪ್ರವೀಣ್ ಗೌಡ, ಪ್ರೊ.ಸುಂದರ್ ರಾಜನ್, ಡಾ.ಎಂ.ಎಚ್. ಕೋರಿ, ಎಸ್.ಎನ್.ವಿ.ಎಲ್. ನರಸಿಂಹರಾಜು, ಸುಹಾಸ್ ಶಿವಣ್ಣ, ಆರ್.ನಾಗರಾಜ್ ಮತ್ತು ಡಾ.ಶಶಿಧರ್ ಸಮ್ಮೇಳನದ ಕೈಪಿಡಿ ಬಿಡುಗಡೆ ಮಾಡಿದರು.   

ಬೆಂಗಳೂರು: ವಿಜ್ಞಾನದ ಆವಿಷ್ಕಾರಗಳು ಬೆಳೆದಂತೆ ಆರೋಗ್ಯ, ಬ್ಯಾಂಕಿಂಗ್ ಮತ್ತು ಮಾರುಕಟ್ಟೆ ಕ್ಷೇತ್ರದಲ್ಲಿ ತಂತಿರಹಿತ ತಂತ್ರಜ್ಞಾನದ ಅವಶ್ಯಕತೆ ಹೆಚ್ಚುತ್ತಿದ್ದು ವಿದ್ಯಾರ್ಥಿ ಸಮೂಹ ಈ ಕ್ಷೇತ್ರದಲ್ಲಿ ಸಂಶೋಧನೆಗೆ ಮುಂದಾಗಬೇಕು ಎಂದು ಅಂತರರಾಷ್ಟ್ರೀಯ ಮೈಕ್ರೊ ಎಲೆಕ್ಟ್ರಾನಿಕ್ಸ್ ಮತ್ತು ಪ್ಯಾಕೇಜಿಂಗ್ ಸೊಸೈಟಿ ಅಧ್ಯಕ್ಷ ಡಾ.ಎಂ.ಎಚ್.ಕೋರೆ ಹೇಳಿದರು.

ಬೊಮ್ಮನಹಳ್ಳಿಯ ಆಕ್ಸ್‌ಫರ್ಡ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ಆರಂಭಗೊಂಡ ವಿಜ್ಞಾನ, ಎಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಆನ್‌ಲೈನ್ ಮಾರುಕಟ್ಟೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿದ್ದು ಇಂದು ಮಾರುಕಟ್ಟೆ ಪರಿಭಾಷೆಯೇ ಬದಲಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಕಡಿಮೆ ದರದಲ್ಲಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸರಕುಗಳನ್ನು ಪೂರೈಕೆ ಮಾಡಲು ಇದರಿಂದ ಸಾಧ್ಯವಾಗುತ್ತಿದೆ’ ಎಂದರು.

ADVERTISEMENT

ತಂತ್ರಜ್ಞ ಸುಹಾಸ್ ಶಿವಣ್ಣ, ‘ವಿದ್ಯಾರ್ಥಿಗಳು ಸವಾಲಿನ ಬೆನ್ನುಹತ್ತಿದಾಗ ಮಾತ್ರವೇ ಸಾಧಕರಾಗಲು ಸಾಧ್ಯ, ಡಿಜಿಟಲ್ ಇಂಡಿಯಾ ಯೋಜನೆಗೆ ಅನುಗುಣವಾಗಿ ತಂತ್ರಜ್ಞಾನ ಆವಿಷ್ಕಾರಕ್ಕೆ ಮುಂದಾಗಬೇಕು. ಒಂದು ನಿರ್ದಿಷ್ಟ ಕ್ಷೇತ್ರದ ಅಧ್ಯಯನದ ಜತೆಗೆ ಇತರೆ ಕ್ಷೇತ್ರಗಳಲ್ಲೂ ಜ್ಞಾನ ವೃದ್ಧಿಸಿಕೊಳ್ಳಬೇಕು. ಅದು ಮೂಲ ವಿಷಯದಲ್ಲಿ ಆಳವಾದ ಅಧ್ಯಯನಕ್ಕೆ ಸಹಕಾರಿ ಆಗುತ್ತದೆ’ ಎಂದರು.

ಆಕ್ಸ್ ಫರ್ಡ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎನ್.ವಿ.ಎಲ್. ನರಸಿಂಹರಾಜು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.