ADVERTISEMENT

ನಗರದಲ್ಲಿ ಅರ್ಥ್‌ ಅವರ್‌

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 20:23 IST
Last Updated 28 ಮಾರ್ಚ್ 2015, 20:23 IST
ಹಲಸೂರು ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ‘ಅರ್ಥ್ ಅವರ್’ ಆಚರಣೆ ಪ್ರಯುಕ್ತ ಶನಿವಾರ ವಿದ್ಯುದ್ದೀಪಗಳನ್ನು ಆರಿಸಲಾಗಿತ್ತು
ಹಲಸೂರು ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ‘ಅರ್ಥ್ ಅವರ್’ ಆಚರಣೆ ಪ್ರಯುಕ್ತ ಶನಿವಾರ ವಿದ್ಯುದ್ದೀಪಗಳನ್ನು ಆರಿಸಲಾಗಿತ್ತು   

ಬೆಂಗಳೂರು: ಜಾಗತಿಕ ತಾಪಮಾನ ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ`‘ಅರ್ಥ್ ಅವರ್’ ಅಂಗವಾಗಿ  ನಗರದ ಅನೇಕ ಕಡೆಗಳಲ್ಲಿ ಶನಿವಾರ ಒಂದು ಗಂಟೆ ವಿದ್ಯುದ್ದೀಪಗಳನ್ನು ಆರಿಸಲಾಗಿತ್ತು.

ಸಂಜೆ ವಿದ್ಯುದ್ದೀಪಗಳಿಂದ ಜಗಮಗಿಸುವ ಪ್ರಮುಖ ರಸ್ತೆಗಳಲ್ಲಿ ರಾತ್ರಿ 8.30ರಿಂದ 9.30ರವರೆಗೆ ಕತ್ತಲೆ ತುಂಬಿತ್ತು. ‌ಹಲವು ಅಪಾರ್ಟ್‌ಮೆಂಟ್‌ಗಳು, ಹೋಟೆಲ್‌ ಹಾಗೂ ಮನೆಗಳಲ್ಲಿ ವಿದ್ಯುದ್ದೀಪ ಆರಿಸಲಾಗಿತ್ತು.

ಡಬ್ಲ್ಯೂಡಬ್ಲ್ಯೂಎಫ್‌ ಇಂಡಿಯಾ ಹಾಗೂ ಕಾರ್ನರ್‌ಸ್ಟೋನ್‌ ಪ್ರಾಪರ್ಟಿಸ್‌ ಸಂಸ್ಥೆ ಸಹಯೋಗದಲ್ಲಿ ಇಂದಿರಾನಗರದಲ್ಲಿ ಅರ್ಥ್ ಅವರ್‌ ಆಚರಿಸಲಾಯಿತು.  ಕಳೆದ ವರ್ಷ ‘ಅರ್ಥ್‌ ಅವರ್‌’ ವೇಳೆ 42 ಮೆಗಾವಾಟ್‌ ವಿದ್ಯುತ್‌ ಉಳಿತಾಯ ಆಗಿತ್ತು. ಈ ವರ್ಷ 100 ಮೆ.ವಾ ಉಳಿತಾಯದ ನಿರೀಕ್ಷೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.