ADVERTISEMENT

ನಗರದಲ್ಲಿ ತಂಪೆರೆದ ಮಳೆ

​ಪ್ರಜಾವಾಣಿ ವಾರ್ತೆ
Published 5 ಮೇ 2016, 19:30 IST
Last Updated 5 ಮೇ 2016, 19:30 IST
ಸ್ಯಾಂಕಿ ರಸ್ತೆಯಲ್ಲಿ ಬಿಡಿಎ ಮೇಲ್ಸೇತುವೆ ಬಳಿ ಸಂಗ್ರಹವಾಗಿದ್ದ ಮಳೆ ನೀರಿನಲ್ಲಿ ವಾಹನಗಳು ಸಾಗಿದ ಕ್ಷಣ
ಸ್ಯಾಂಕಿ ರಸ್ತೆಯಲ್ಲಿ ಬಿಡಿಎ ಮೇಲ್ಸೇತುವೆ ಬಳಿ ಸಂಗ್ರಹವಾಗಿದ್ದ ಮಳೆ ನೀರಿನಲ್ಲಿ ವಾಹನಗಳು ಸಾಗಿದ ಕ್ಷಣ   

ಬೆಂಗಳೂರು: ನಗರದಲ್ಲಿ ಗುರುವಾರ ಸಂಜೆಯಿಂದ ಸುರಿದ ಮಳೆಯು ಬಿಸಿಲ ಬೇಗೆಯಿಂದ ತತ್ತರಿಸಿದ್ದ ನಾಗರಿಕರಿಗೆ ತಂಪೆರೆಯಿತು.

ಬೆಳಿಗ್ಗೆಯಿಂದ ನಗರದ ಹಲವೆಡೆ ಮೋಡ ಕವಿದ ವಾತಾವರಣವಿತ್ತು.   ಮೆಜೆಸ್ಟಿಕ್‌, ಮೇಕ್ರಿ ವೃತ್ತ, ಶಿವಾಜಿನಗರ, ಜಯನಗರ, ಯಶವಂತಪುರ, ಕೆ.ಆರ್. ಪುರ,  ಚಾಮರಾಜಪೇಟೆ, ರಾಜಾಜಿನಗರ,  ಮಲ್ಲೇಶ್ವರ, ಸದಾಶಿವನಗರ, ವಿಲ್ಸನ್‌ಗಾರ್ಡನ್, ಪುಲಕೇಶಿನಗರ, ಬಾಣಸವಾಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಆಗಿದೆ.

ಕೆಲವೆಡೆ ರಾತ್ರಿಯವರೆಗೂ ತುಂತುರು ಮಳೆ ಇದ್ದಿದ್ದು ಕಂಡುಬಂತು. ಮಳೆ ವೇಳೆ ಗಾಳಿ ವೇಗವಾಗಿ ಬೀಸಿದ್ದರಿಂದ ಹಲಸೂರು, ಸ್ಯಾಂಕಿಕೆರೆ ಹಾಗೂ ಗಾಯತ್ರಿನಗರದಲ್ಲಿ ಮರಗಳು ನೆಲಕ್ಕುರುಳಿವೆ. ಕೆಲವೆಡೆ ಮಳೆಯಿಂದ ರಸ್ತೆ ಮೇಲೆಯೇ ನೀರು ಹರಿದಿದ್ದು, ಅದರಲ್ಲಿಯೇ ವಾಹನಗಳು ಸಂಚರಿಸಿದವು. ಕೆಲವರು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಮೇಕ್ರಿ ವೃತ್ತ ಹಾಗೂ ಮೆಜೆಸ್ಟಿಕ್‌ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.