ADVERTISEMENT

ನಟ ಶಿವರಾಜ್ ಕುಮಾರ್ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2015, 11:33 IST
Last Updated 6 ಅಕ್ಟೋಬರ್ 2015, 11:33 IST

ಬೆಂಗಳೂರು: ಮಂಗಳವಾರ ಬೆಳಗಿನ ವ್ಯಾಯಾಮದ ನಂತರ ಅಸ್ವಸ್ಥಗೊಂಡ ನಟ ಶಿವರಾಜ್ ಕುಮಾರ್ ಅವರನ್ನು ಇಂದು ಬೆಳಿಗ್ಗೆ ನಗರದ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಟ ಶಿವರಾಜ್ ಕುಮಾರ್ ಇಂದು ಬೆಳ್ಳಗ್ಗೆ ವ್ಯಾಯಾಮ ಮಾಡುವುದಕ್ಕೆ ಜಿಮ್ ಗೆ ತೆರಳಿದ್ದರು. ವ್ಯಾಯಾಮ ಮಾಡಿ ಬಂದ ನಂತರ ಶಿವಣ್ಣ ಸುಸ್ತಾಗಿದ್ದಾರೆ. ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಲಾಗಿದೆ ಚಿಕಿತ್ಸೆ ಪಡೆಯುತ್ತಿದ್ದಾರೆ, ಶಿವಣ್ಣ ಆರೋಗ್ಯವಾಗಿದ್ದಾರೆ. ಗಾಬರಿ ಪಡುವಂಥದ್ದೇನಿಲ್ಲವೆಂದು  ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT