ADVERTISEMENT

‘ನಮ್ಮ ಮೆಟ್ರೊ’ ಎರಡನೇ ಹಂತ ಉಕ್ಕು ಖರೀದಿಗೆ ಟೆಂಡರ್‌

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:36 IST
Last Updated 19 ಜುಲೈ 2017, 19:36 IST
‘ನಮ್ಮ ಮೆಟ್ರೊ’ ಎರಡನೇ ಹಂತ ಉಕ್ಕು ಖರೀದಿಗೆ ಟೆಂಡರ್‌
‘ನಮ್ಮ ಮೆಟ್ರೊ’ ಎರಡನೇ ಹಂತ ಉಕ್ಕು ಖರೀದಿಗೆ ಟೆಂಡರ್‌   

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಮಾರ್ಗಗಳಲ್ಲಿ ಹಳಿಗಳನ್ನು ನಿರ್ಮಿಸಲು 20 ಸಾವಿರ ಟನ್‌ ಉಕ್ಕಿನ ಪಟ್ಟಿಗಳನ್ನು ಖರೀದಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಮಂಗಳವಾರ ಟೆಂಡರ್‌ ಆಹ್ವಾನಿಸಿದೆ.

ಆಸಕ್ತ ಕಂಪೆನಿಗಳು 2017ರ ಆಗಸ್ಟ್‌ 14ರ ಒಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ತಾಂತ್ರಿಕ ಬಿಡ್‌ ಹಾಗೂ ಆರ್ಥಿಕ ಬಿಡ್‌ಗಳನ್ನು ಪ್ರತ್ಯೇಕವಾಗಿ ಸಲ್ಲಿಸಬೇಕಿದೆ.

ಎರಡನೇ ಹಂತದಲ್ಲಿ ಒಟ್ಟು 72 ಕಿ.ಮೀ ಉದ್ದದ ಮಾರ್ಗ ನಿರ್ಮಿಸಲು ನಿಗಮವು ಆರಂಭದಲ್ಲಿ ಉದ್ದೇಶಿಸಿತ್ತು. ಬಳಿಕ, ಹೆಚ್ಚುವರಿಯಾಗಿ ಬೈಯಪ್ಪನಹಳ್ಳಿ– ಕೆ.ಆರ್‌.ಪುರ–ಸಿಲ್ಕ್‌ಬೋರ್ಡ್‌ (19.60 ಕಿ.ಮೀ ಉದ್ದ) ಮಾರ್ಗ ಹಾಗೂ ನಾಗವಾರದಿಂದ ವಿಮಾನ ನಿಲ್ದಾಣದವರೆಗಿನ ಮಾರ್ಗಗಳನ್ನು ಎರಡನೇ ಹಂತದಲ್ಲೇ ಕೈಗೆತ್ತಿಕೊಳ್ಳಲಾಗುತ್ತಿದೆ.

ADVERTISEMENT

ನಿಗಮವು 2020ರ ಒಳಗೆ ಎರಡನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.