ADVERTISEMENT

ನೆರಿಗಾದಲ್ಲಿ ಬೀಡು ಬಿಟ್ಟ ಕಾಡಾನೆಗಳು

ಕಾಡಿಗೆ ಅಟ್ಟಲು ಸಿಬ್ಬಂದಿ ಹರಸಾಹಸ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2016, 20:06 IST
Last Updated 25 ಸೆಪ್ಟೆಂಬರ್ 2016, 20:06 IST
ನೆರಿಗಾದಲ್ಲಿ  ಬೀಡು ಬಿಟ್ಟ ಕಾಡಾನೆಗಳು
ನೆರಿಗಾದಲ್ಲಿ ಬೀಡು ಬಿಟ್ಟ ಕಾಡಾನೆಗಳು   

ಆನೇಕಲ್‌ : ಕಳೆದ ಮೂರು ದಿನ ಗಳಿಂದ ಅರಣ್ಯ ಇಲಾಖೆ ಹಾಗೂ ಪೊಲೀಸರು ಹರಸಾಹಸ ಮಾಡಿದರೂ ಸಹ ಕಾಡಿನಿಂದ ಆಹಾರ ಅರಸಿ ಬಂದಿರುವ ಮೂರು ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟಲು ಸಾಧ್ಯವಾಗಿಲ್ಲ.

ಮಾಲೂರು ಕಡೆಯಿಂದ ಮೂರು ದಿನಗಳ ಹಿಂದೆ ಬಂದು ಆನೇಕಲ್‌ ತಾಲ್ಲೂಕಿನ ಮಾದಪ್ಪನಹಳ್ಳಿ ಬಳಿ ಬೀಡುಬಿಟ್ಟಿದ್ದ ಆನೆಗಳ ಹಿಂಡು ಶನಿವಾರ ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ವರ್ತೂರಿನತ್ತ ತೆರಳಿ ದ್ದವು. ಭಾನುವಾರ ಆನೆಗಳ ಹಿಂಡನ್ನು ಓಡಿಸಲು ವರ್ತೂರು ಪೊಲೀಸರು, ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾ ಚರಣೆ ನಡೆಸಿದರು.

ಆನೆಗಳು ವರ್ತೂ ರಿನಿಂದ ಆನೇಕಲ್‌ ತಾಲ್ಲೂಕಿನ ತಿಪ್ಪ ಸಂದ್ರದ ಮೂಲಕ ಸಾಗಿ ನೆರಿಗಾ ಗ್ರಾಮದ ನೀಲಗಿರಿ ತೋಪೊಂದರಲ್ಲಿ ಭಾನುವಾರ ಸಂಜೆ ವೇಳೆಗೆ ಬೀಡುಬಿಟ್ಟವು. ಕತ್ತಲಾದ್ದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿ ಸಲಾಯಿತು ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಆನೆಗಳನ್ನು ಕಾಡಿಗಟ್ಟುವ ಕಾರ್ಯಾ ಚರಣೆಯು ಜನಜಂಗುಳಿಯಿಂದಾಗಿ ಯಶಸ್ವಿಯಾಗುತ್ತಿಲ್ಲ ಎನ್ನಲಾಗಿದೆ. ವರ್ತೂರು ಕಡೆಯಿಂದ ಆನೆಗಳನ್ನು ಓಡಿಸಲು ಪ್ರಾರಂಭಿಸಿದಾಗ ನೀಲಗಿರಿ ತೋಪುಗಳ ಎರಡೂ ಬದಿಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರು. ಜನರನ್ನು ಕಂಡು ಗಾಬರಿಗೊಂಡ ಆನೆಗಳು ಹಲವಾರು ಬಾರಿ ಸಾರ್ವಜ ನಿಕರ ಮೇಲೆ ದಾಳಿ ನಡೆಸಲು ಮುಂದಾದವು. ಪೊಲೀಸರು ಎಷ್ಟೇ ಪ್ರಯತ್ನ ನಡೆಸಿದರೂ ಸಹ ಜನರನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ.

ಅರಣ್ಯ ಇಲಾಖೆಯ ಸಿಬ್ಬಂದಿ ಪಟಾಕಿಗಳನ್ನು ಸಿಡಿಸಿ ಆನೆಗಳನ್ನು ಓಡಿಸುವ ಕಾರ್ಯಾಚರಣೆ ನಡೆಸಿದ್ದರು. ಮಧ್ಯಾಹ್ನ ಜನಜಂಗುಳಿಯಿಂದ ಗಾಬರಿ ಗೊಂಡ ಆನೆಗಳು ಜನರತ್ತ ಮುನ್ನುಗ್ಗಲು ಮುಂದಾದಾಗ ಅರಣ್ಯ ಇಲಾಖೆಯ ಸಿಬ್ಬಂದಿ ಎರಡು ಮೂರು ಸುತ್ತು ಗುಂಡು ಹಾರಿಸಿ ಆನೆಗಳನ್ನು ನೀಲಗಿರಿ ತೋಪಿನತ್ತ ಓಡಿಸಿದರು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಮಾದ ಪ್ಪ ನಹಳ್ಳಿ, ಜಂತಗೊಂಡನಹಳ್ಳಿ, ತಿಪ್ಪ ಸಂದ್ರ, ನೆರಿಗಾ ಸುತ್ತಮುತ್ತ ಬೀಡುಬಿಟ್ಟಿ ರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್‌. ರವೀಂದ್ರ ಕುಮಾರ್, ಆನೇಕಲ್ ವಲಯ ಅರ ಣ್ಯಾಧಿಕಾರಿ ಅರುಣ್ ಪಾಲ್ಗೊಂಡಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.