ADVERTISEMENT

ನೈಜೀರಿಯಾದ ನಾಲ್ವರ ಸೆರೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ನೈಜೀರಿಯಾದ ನಾಲ್ವರ ಸೆರೆ
ನೈಜೀರಿಯಾದ ನಾಲ್ವರ ಸೆರೆ   

ಬೆಂಗಳೂರು: ರಾಮಮೂರ್ತಿನಗರ ಬಳಿಯ ಮಾರಗೊಂಡನಹಳ್ಳಿಯಲ್ಲಿ ಮಾದಕ ವಸ್ತು ಕೊಕೇನ್‌ ಮಾರಾಟ ಮಾಡುತ್ತಿದ್ದ  ಆರೋಪದಡಿ ನೈಜೀರಿಯಾದ ನಾಲ್ವರನ್ನು ಸಿಸಿಬಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

‘ಮಾಕೊಕ್‌ ಚೊಕ್ವಕ್‌ ಮೊಹುಲಾಕ್ವು (29), ಗಿಫ್ಟ್‌ ಬೆನೆಡಿಕ್ಟ್‌ (26), ಚುಕ್ವುಇಮೆಕಾ ಇಜೆಯೂಬಿ (31) ಹಾಗೂ ವಿಸ್ಡಂ ಚೊಕ್ವುಕ್‌ (28) ಬಂಧಿತರು. ಅವರಿಂದ 44 ಗ್ರಾಂ ಕೊಕೇನ್‌ ಹಾಗೂ ₹1 ಲಕ್ಷ ನಗದು ಜಪ್ತಿ ಮಾಡಿದ್ದೇವೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ವ್ಯಾಪಾರ ವೀಸಾದಡಿ ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿಗಳು, ಪರಿಚಯಸ್ಥರಿಂದ ಕೊಕೇನ್‌ ಖರೀದಿ ಮಾಡಿ, ವಿದ್ಯಾರ್ಥಿಗಳು ಹಾಗೂ ಸಾಫ್ಟ್‌ವೇರ್‌ ಕಂಪೆನಿಯ ಉದ್ಯೋಗಿಗಳಿಗೆ ಮಾರುತ್ತಿದ್ದರು. ಅವರ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದ್ದೇವೆ’ ಎಂದರು.

‘ಆರೋಪಿಗಳ ಪೈಕಿ ಚೊಕ್ವಕ್‌ ಮೊವುಲೊಕ್ವು ಹಾಗೂ ಗಿಫ್ಟ್‌ ಬೆನೆಡಿಕ್ಟ್‌  ಅವರನ್ನು ಎನ್‌ಸಿಬಿ ಅಧಿಕಾರಿಗಳು 4 ತಿಂಗಳ ಹಿಂದಷ್ಟೇ ಬಂಧಿಸಿದ್ದರು. ಆ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಇವರು, ಪುನಃ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.