ADVERTISEMENT

ಪರಿಸರಸ್ನೇಹಿ ಹಬ್ಬ: ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 19:33 IST
Last Updated 29 ಜುಲೈ 2015, 19:33 IST

ಬೆಂಗಳೂರು: ‘ಪರಿಸರ ಬೆಂಬಲ ತಂಡ’ (ಇಎಸ್‌ಜಿ) ಆಶ್ರಯದಲ್ಲಿ ‘ಹಬ್ಬದ ಋತುವಿನಲ್ಲಿ ಕಾರ್ಯಸಾಧ್ಯವಾಗುವ ಸಾಮಾಜಿಕ ಜವಾಬ್ದಾರಿಗಳು ಹಾಗೂ ಪರಿಸರ ಸ್ನೇಹಿ ಆಚರಣೆಯ ಸಾಧ್ಯತೆಯ ಆಲೋಚನಾ ಕಾರ್ಯಾಗಾರ’ ಬನಶಂಕರಿಯ ಪರಿಸರ ಬೆಂಬಲ ತಂಡದ ಕಚೇರಿಯಲ್ಲಿ ಆಗಸ್ಟ್‌ 8ರಂದು ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ನಡೆಯಲಿದೆ.

‘ಸರಣಿ ಹಬ್ಬಗಳ ಮೂಲಕ ನಗರ ಕಸಯುಕ್ತವಾಗಿ ಬದಲಾಗುತ್ತದೆ. ಕೆರೆಗಳು ಹಾಗೂ ರಾಜಕಾಲುವೆಗಳಿಗೆ ಭಾರಿ ಪ್ರಮಾಣದ ಕಸ ಸುರಿಯಲಾಗುತ್ತದೆ. ನೂರಾರು ಮೂರ್ತಿಗಳು ಕೆರೆಗಳ ಒಡಲು ಸೇರುತ್ತವೆ. ಇದನ್ನು ತಪ್ಪಿಸಬೇಕಿದೆ. ಇದಕ್ಕಾಗಿ ಜನರಿಗೆ ನಾಗರಿಕ ಪ್ರಜ್ಞೆಯ ಅರಿವಾಗಬೇಕು. ಹೀಗಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘಟಕರು ತಿಳಿಸಿದ್ದಾರೆ.

‘ಮೂರ್ತಿಗಳ ತಯಾರಿಕೆ, ಗೊಬ್ಬರ ತಯಾರಿಕಾ ಹಂತ, ಎರೆಹುಳ ಗೊಬ್ಬರ ತಯಾರಿ, ಪರಿಸರ ಸ್ನೇಹಿ ಬಣ್ಣಗಳ ತಯಾರಿಕೆ, ಸಾಂಪ್ರದಾಯಿಕ ಉಡುಗೋರೆ ತಯಾರಿಕೆ, ತ್ಯಾಜ್ಯ ನೀರಿನ ಮರುಬಳಕೆ, ಮಳೆ ನೀರು ಸಂಗ್ರಹ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದ್ದಾರೆ.
ಮಾಹಿತಿಗೆ ದೂರವಾಣಿ ಸಂಖ್ಯೆ: 080–26713559.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.