ADVERTISEMENT

ಪೋಷಕರ ಏಕಾಂತದ ವಿಡಿಯೊ ಕಳುಹಿಸಿದ್ದ!

​ಪ್ರಜಾವಾಣಿ ವಾರ್ತೆ
Published 26 ಮೇ 2017, 20:17 IST
Last Updated 26 ಮೇ 2017, 20:17 IST

ಬೆಂಗಳೂರು: ಹದಿಮೂರು ವರ್ಷದ ಬಾಲಕನನ್ನು ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡು, ಆತನ ಪೋಷಕರು ಏಕಾಂತದಲ್ಲಿದ್ದ ವಿಡಿಯೊ ತರಿಸಿಕೊಂಡ ಅಪರಿಚಿತನೊಬ್ಬ, ಅದನ್ನು ಬಾಲಕನ ತಂದೆಗೆ ಕಳುಹಿಸಿ ₹1 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. 

‘ಮನೆಯ ಕೊಠಡಿಯಲ್ಲಿ ಪತ್ನಿ ಯೊಂದಿಗೆ ಮಲಗಿದ್ದ ದೃಶ್ಯ ವಿಡಿಯೊ ದಲ್ಲಿದೆ. ಹಣ ಕೊಡದಿದ್ದರೆ ವಿಡಿಯೊ ವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವುದಾಗಿ ಅಪರಿಚಿತ ಬೆದರಿಸಿದ್ದಾನೆ’ ಎಂದು ಬಾಲಕನ ತಂದೆ ಸೈಬರ್‌ ಠಾಣೆಗೆ ಗುರು ವಾರ ದೂರು ಕೊಟ್ಟಿದ್ದಾರೆ. ಅಪರಿಚಿತನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

‘ದೂರುದಾರರ ಮಗ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಖಾತೆ ತೆರೆದಿದ್ದ. ಆತನಿಗೆ ‘ತೇಜಸ್‌ ಪಟೇಲ್‌’ ಹೆಸರಿನ ಖಾತೆ ಯಿಂದ ಫ್ರೆಂಡ್‌ ರಿಕ್ವೆಸ್ಟ್‌ ಬಂದಿತ್ತು. ಅದನ್ನು ಬಾಲಕ ಸ್ವೀಕರಿಸಿದ್ದ’ ಎಂದು ಪೊಲೀಸರು ತಿಳಿಸಿದರು. ‘ಆರಂಭದಲ್ಲಿ ಶುಭಾಶಯ ಸಂದೇಶ ಕಳುಹಿಸುತ್ತಿದ್ದ ಅಪರಿಚಿತ, ಕೆಲದಿನಗಳ ಬಳಿಕ ಅಶ್ಲೀಲ ಚಿತ್ರ ಹಾಗೂ ವಿಡಿಯೊ ಕಳುಹಿಸಲು ಶುರು ಮಾಡಿದ್ದ. ಅದರಿಂದಾಗಿ ಬಾಲಕ ನಿರಂತರವಾಗಿ  ಆತನೊಂದಿಗೆ ಚಾಟ್‌ ಮಾಡಲು ಆರಂಭಿಸಿದ್ದ.’  ‘ಈ ವೇಳೆಯೇ  ತಂದೆ–ತಾಯಿಯ ಏಕಾಂತದ ವಿಡಿಯೊವನ್ನು ಚಿತ್ರೀಕರಿಸಿ ಕಳುಹಿಸುವಂತೆ ಬಾಲಕನಿಗೆ ಆರೋಪಿಯು ಹೇಳಿದ್ದ. ಅದರಂತೆ ಬಾಲಕ ಮೊಬೈಲ್‌ನಲ್ಲಿ  ದೃಶ್ಯವನ್ನು ಸೆರೆ ಹಿಡಿದು ಕಳುಹಿಸಿದ್ದ’ ಎಂದು ಪೊಲೀಸರು ವಿವರಿಸಿದರು.

ADVERTISEMENT

ಫೇಸ್‌ಬುಕ್‌್ ಖಾತೆ ಪರಿಶೀಲನೆ: ‘ಅದೇ ವಿಡಿಯೊವನ್ನು ಬಾಲಕನ ತಂದೆಯ ಫೇಸ್‌ಬುಕ್‌ ಖಾತೆಗೆ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ’ ಎಂದು ತನಿಖಾಧಿಕಾರಿ ವಿವರಿಸಿದರು. ‘ವಿಡಿಯೊ ನೋಡಿ ಆತಂಕಗೊಂಡ ತಂದೆಯು ಮಗನನ್ನು ವಿಚಾರಿಸಿದಾಗ ವಿಷಯ ಗೊತ್ತಾಗಿದೆ. ಮಗನ ಫೇಸ್‌ ಬುಕ್‌ ಖಾತೆ ಪರಿಶೀಲಿಸಲಾಗಿದ್ದು, ‘ತೇಜಸ್‌ ಪಟೇಲ್‌’ ಎಂಬ ಖಾತೆಗೆ ವಿಡಿಯೊ ಕಳುಹಿಸಿದ್ದು ಪತ್ತೆಯಾಗಿದೆ’ ಎಂದು ಹೇಳಿದರು.

ಫೇಸ್‌ಬುಕ್‌ ಕಂಪೆನಿಗೆ ಪತ್ರ: ‘ತೇಜಸ್‌ ಪಟೇಲ್‌’ ಎಂಬ ಖಾತೆಯ ಬಗ್ಗೆ ಮಾಹಿತಿ ನೀಡುವಂತೆ ಹೈದರಾಬಾದ್‌ನಲ್ಲಿರುವ ಫೇಸ್‌ಬುಕ್‌ ಕಂಪೆನಿ ಕಚೇರಿಗೆಪತ್ರ ಬರೆದಿದ್ದೇವೆ. ಜತೆಗೆ ಸ್ಥಳೀಯವಾಗಿ ಲಭ್ಯವಿರುವ ಸೌಲಭ್ಯಗಳ
ಮೂಲಕವೂ ಆರೋಪಿಯನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ತನಿಖಾಧಿಕಾರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.