ADVERTISEMENT

ಬಾದಾಮಿ ಉತ್ಪನ್ನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:55 IST
Last Updated 20 ಜುಲೈ 2017, 19:55 IST

ಬೆಂಗಳೂರು: ಕ್ಯಾಲಿಫೋರ್ನಿಯಾ ಬಾದಾಮಿ ಮಂಡಳಿಯು ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕ್ಯಾಲಿಫೋರ್ನಿಯಾ ಅಲ್‌ಮಂಡ್ಸ್‌’ ಉತ್ಪನ್ನ ಬಿಡುಗಡೆ ಮಾಡಲಾಯಿತು.

ಕಂಪೆನಿಯ ಪ್ರತಿನಿಧಿ ಸ್ವಾತಿ ಕಲ್ಗಾಂವ್‌ಕರ್‌ ಮಾತನಾಡಿ,  ‘ಬಾದಾಮಿಯಲ್ಲಿನ ಪೌಷ್ಟಿಕ ಅಂಶಗಳು ಆಯುರ್ವೇದ, ಯುನಾನಿ, ಸಿದ್ಧ ಔಷಧ ವಿಜ್ಞಾನದಲ್ಲೂ ಉಲ್ಲೇಖಿತವಾಗಿವೆ. ಪ್ರತಿದಿನ 30 ಗ್ರಾಂ ಬಾದಾಮಿ ಸೇವಿಸುವುದರಿಂದ ದಿನವೆಲ್ಲಾ ಚೈತನ್ಯಶೀಲರಾಗಿ ಇರಬಹುದು’ ಎಂದರು. ಪ್ರಾಧ್ಯಾಪಕಿ ಪದ್ಮಾ ವೆಂಕಟ,‘ ಬಿಡುಗಡೆಯಾದ ಉತ್ಪನ್ನವನ್ನು ಹಲವಾರು ಜನರಿಗೆ ವಿತರಿಸಿ ಸಂಶೋಧನೆ ಮಾಡಲಾಗಿದೆ. ಈ ಉತ್ಪನ್ನವು ಜೀರ್ಣಕ್ರಿಯೆ ಹೆಚ್ಚಿಸಲು, ಚರ್ಮದ ರಕ್ಷಣೆಗೆ, ಕೂದಲು ಉದುರುವುದನ್ನು ತಡೆಯಲು ಹಾಗೂ ಬೊಜ್ಜನ್ನು ಕರಗಿಸಲು ನೆರವಾಗುತ್ತದೆ ಎಂಬ ಅಂಶ ದೃಢಪಟ್ಟಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT