ADVERTISEMENT

ಬಿಡಿಎ: ₹ 115 ಕೋಟಿ ಮೌಲ್ಯದ ಆಸ್ತಿ ವಶ

​ಪ್ರಜಾವಾಣಿ ವಾರ್ತೆ
Published 26 ಮೇ 2016, 19:33 IST
Last Updated 26 ಮೇ 2016, 19:33 IST
ಹೆಣ್ಣೂರು ಗ್ರಾಮದ ಅರ್ಕಾವತಿ ಬಡಾವಣೆಯ 21ನೇ ಬ್ಲಾಕ್‌ನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಶೆಡ್‌ಗಳನ್ನು ಗುರುವಾರ ತೆರವುಗೊಳಿಸಲಾಯಿತು
ಹೆಣ್ಣೂರು ಗ್ರಾಮದ ಅರ್ಕಾವತಿ ಬಡಾವಣೆಯ 21ನೇ ಬ್ಲಾಕ್‌ನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಶೆಡ್‌ಗಳನ್ನು ಗುರುವಾರ ತೆರವುಗೊಳಿಸಲಾಯಿತು   

ಬೆಂಗಳೂರು: ಹೆಣ್ಣೂರು ಗ್ರಾಮದ ಅರ್ಕಾವತಿ ಬಡಾವಣೆಯ 21ನೇ ಬ್ಲಾಕ್‌ನಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಶೆಡ್‌ಗಳನ್ನು ಗುರುವಾರ ತೆರವುಗೊಳಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ₹ 115 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡಿತು.

ಹೆಣ್ಣೂರು ಗ್ರಾಮದ ಸರ್ವೆ ಸಂಖ್ಯೆ 80/1, 81/4, 81/5, 83/1, 83/4, 84/4ರಲ್ಲಿ ನಿರ್ಮಿಸಲಾಗಿದ್ದ 15 ಶೆಡ್‌ಗಳು ಮತ್ತು 5 ತಡೆಗೋಡೆಗಳನ್ನು ತೆರವುಗೊಳಿಸಲಾಯಿತು.

ಬಿಡಿಎ ಉತ್ತರ ವಿಭಾಗ ಕಾರ್ಯಪಾಲಕ ಎಂಜಿನಿಯರ್ ಮತ್ತು ಬಿಡಿಎ ಕಾರ್ಯಪಡೆ ಎಸ್ಪಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

‘ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಿ ಬಿಡಿಎಗೆ ಸೇರಿದ್ದ 7 ಎಕರೆ ಆಸ್ತಿ ವಶಪಡಿಸಿಕೊಂಡು, ಸುತ್ತ ತಂತಿ ಬೇಲಿ ಅಳವಡಿಸಲಾಯಿತು’ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.