ADVERTISEMENT

ಬೆಂಗಳೂರು ಕ್ಲಬ್‌ಗೆ 150ನೇ ವರ್ಷಾಚರಣೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 19:46 IST
Last Updated 19 ಏಪ್ರಿಲ್ 2018, 19:46 IST
ಬೆಂಗಳೂರು ಕ್ಲಬ್‌ಗೆ 150ನೇ ವರ್ಷಾಚರಣೆ ಸಂಭ್ರಮ
ಬೆಂಗಳೂರು ಕ್ಲಬ್‌ಗೆ 150ನೇ ವರ್ಷಾಚರಣೆ ಸಂಭ್ರಮ   

ಬೆಂಗಳೂರು: ನಗರದ ಅತ್ಯಂತ ಪುರಾತನ ಕ್ಲಬ್ ಎನಿಸಿರುವ ‘ಬೆಂಗಳೂರು ಕ್ಲಬ್‌’ ಗೆ 150ನೇ ವರ್ಷಾಚರಣೆ ಸಂಭ್ರಮ. ಈ ಸಂದರ್ಭದಲ್ಲಿ ‘ರಾಯಲ್‌ ಬಾಲ್‌’ ಸಾಂಪ್ರದಾಯಿಕ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.

‘ಬೆಂಗಳೂರು ಯುನೈಟೆಡ್‌ ಸರ್ವಿಸಸ್‌’ (ಬಿಯುಎಸ್‌) ಹೆಸರಿನಲ್ಲಿ 1868ರಲ್ಲಿ ಈ ಕ್ಲಬ್‌ ಆರಂಭವಾಯಿತು. ಬ್ರಿಟಿಷ್‌ ಸೈನ್ಯಾಧಿಕಾರಿಗಳು ಸಮಯ ಕಳೆಯಲು ಇಲ್ಲಿ ಬರುತ್ತಿದ್ದರು.

ಅವರ ಕುಟುಂಬ ಸದಸ್ಯರು ಕೂಡ ಇಲ್ಲಿ ಬಂದು ‘ರಾಯಲ್‌ ಬಾಲ್’ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇದೇ ರೀತಿಯ ಸಂಗೀತ ಹಾಗೂ ನೃತ್ಯವನ್ನು ಮುಂದಿನ ವಾರ ಇಲ್ಲಿ ನಡೆಯುವ ಸಂಭ್ರಮಾಚರಣೆಯಲ್ಲಿ ಮರುಸೃಷ್ಟಿ ಮಾಡಲಾಗುತ್ತಿದೆ ಎಂದು ಕ್ಲಬ್‌ ಅಧ್ಯಕ್ಷ ಗಿರೀಶ್‌ ಪೂಂಜಾ ತಿಳಿಸಿದರು.

ADVERTISEMENT

‘ಕ್ಲಬ್‌ ಸದಸ್ಯರು ಇಲ್ಲಿ ನೃತ್ಯ ಮಾಡಬಹುದು. ಅವರಿಗೆ ವರ್ಷಾಚರಣೆ ನೆನಪಿಗಾಗಿ ಅಂಚೆ ಚೀಟಿ ಕೊಡಲಾಗುತ್ತದೆ. ಅಲ್ಲದೇ ವಿಂಟೇಜ್‌ ಕಾರುಗಳ ಪ್ರದ ರ್ಶನ, ಅಂದಿನ ದಿನಗಳ ಉಡುಗೆ ತೊಡುಗೆಗಳನ್ನು ಹೋಲುವ ‘ಮೇ ಕ್ವೀನ್‌’ ಫ್ಯಾಷನ್‌ ಷೋ ಕೂಡ ಆಯೋಜಿಸಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.