ADVERTISEMENT

ಬೆಂಗಳೂರು ವಲಯ ಪ್ರಜಾವಾಣಿ ‘ಕ್ವಿಜ್‌ ಚಾಂಪಿಯನ್‌ಶಿಪ್‌’

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 11:44 IST
Last Updated 21 ಜನವರಿ 2017, 11:44 IST
ಬೆಂಗಳೂರು ವಲಯ ಪ್ರಜಾವಾಣಿ ‘ಕ್ವಿಜ್‌ ಚಾಂಪಿಯನ್‌ಶಿಪ್‌’
ಬೆಂಗಳೂರು ವಲಯ ಪ್ರಜಾವಾಣಿ ‘ಕ್ವಿಜ್‌ ಚಾಂಪಿಯನ್‌ಶಿಪ್‌’   

ಬೆಂಗಳೂರು: ಪರಿಸರ ವಿಭಾಗದ ಪ್ರಶ್ನೆ, ಪರದೆ ಮೇಲೆ ‘ಸಾಲುಮರದ ತಿಮ್ಮಕ್ಕ’ನ ಚಿತ್ರ ಕಾಣಿಸಿಕೊಳ್ಳುತ್ತಿದ್ದಂತೆ ಸಭಾಂಗಣದಲ್ಲಿದ್ದ ಎಲ್ಲ ವಿದ್ಯಾರ್ಥಿಗಳು ಓ....ಉದ್ಗಾರದೊಂದಿಗೆ ಉತ್ತರಿಸಲು ತುದಿಗಾಲಲ್ಲಿ ತಿಂದಿದ್ದರು.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ನಡೆದ ಪ್ರಜಾವಾಣಿ ‘ಕ್ವಿಜ್‌ ಚಾಂಪಿಯನ್‌ಶಿಪ್‌’ ಬೆಂಗಳೂರು ವಲಯದ ಸ್ಪರ್ಧೆಗಳಲ್ಲಿ ನೂರಾರು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸೇಂಟ್‌ ಪಾಲ್ಸ್‌ ಶಾಲೆ ಪ್ರಥಮ, ಶ್ರೀ ಕುಮಾರನ್ಸ್‌ ಐಸಿಎಸ್‌ಇ ದ್ವಿತೀಯ ಹಾಗೂ ಪ್ರೆಸಿಡೆಸ್ಸಿ ಸ್ಕೂಲ್‌ ತೃತೀಯ ಸ್ಥಾನ ಪಡೆದವು.

ADVERTISEMENT

ಬಝರ್‌ ಹಂತದ ಕಠಿಣ ಸವಾಲಿನ ಪ್ರಶ್ನೆಗಳಲ್ಲಿ ಎಲ್ಲ ತಂಡಗಳು ತೀರ್ವ ಪೈಪೋಟಿ ಎದುರಿಸಿದವು. ಅಂಕಗಳ ಲೆಕ್ಕದಲ್ಲಿ ಎರಡನೇ ಸ್ಥಾನದಲ್ಲಿದ್ದ ಸೇಂಟ್‌ ಪೌಲ್‌ ಶಾಲೆ ಅಂತಿಮ ಎರಡು ಸುತ್ತಿನಲ್ಲಿ ತೋರಿದ ಚುರುಕಿನ ಪ್ರದರ್ಶನದಿಂದ ಮೊಲದ ಸ್ಥಾನಕ್ಕೆ ಏರಿತು.

ಸ್ಪರ್ಧಿಗಳು ಉತ್ತರಿಸಲಾಗದ ಪ್ರಶ್ನೆಗಳು ಪ್ರೇಕ್ಷಕರ ವಲಯಕ್ಕೆ ರವಾನೆಯಾಗುತ್ತಿದ್ದವು. ಅಲ್ಲಿಯೂ ಅನೇಕ ಶಾಲೆಗಳ ವಿದ್ಯಾರ್ಥಿಗಳು ಅತ್ಯುತ್ಸಾಹದಲ್ಲಿ ಭಾಗಿಯಾದರು. ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಹಿತೇಂದ್ರ ಅವರು ಸ್ಪರ್ಧಿಗಳಿಗೆ ಬಹುಮಾನ ವಿತರಿಸಿದರು.

ಫೈನಲ್‌: ಜನವರಿ 4ರಿಂದ ರಾಜ್ಯದ ಒಂಬತ್ತು ವಲಯಗಳಲ್ಲಿ ಕ್ವಿಜ್‌ ಸ್ಪರ್ಧೆ ನಡೆಸಲಾಗಿದ್ದು, ಇಂದು ನಗರದಲ್ಲಿ ಫೈನಲ್‌ ಸ್ಪರ್ಧೆ ನಡೆಯುತ್ತಿದೆ. ಒಟ್ಟು ಹತ್ತು ತಂಡಗಳು ಫೈನಲ್‌ ಪ್ರವೇಶ ಪಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.